ಹಿರಿಯರನ್ನು ಹಳಿಯದಿರುವುದು

Verses

Holy Kural #891
ಸಮರ್ಥರ ಸಾಮರ್ಥ್ಯವನ್ನು ತೆಗಳದಿರುವುದೇ ತಮ್ಮನ್ನು ಕೇಡಿನಿಂದ ಕಾಯ್ದುಕೊಳ್ಳುವ ಕಾವಲಲ್ಲಿ ಹಿರಿದೆನಿಸುತ್ತದೆ.

Tamil Transliteration
Aatruvaar Aatral Ikazhaamai Potruvaar
Potralul Ellaam Thalai.

Explanations
Holy Kural #892
ಬಲವಂತರೊಡನೆ ಅಗೌರವದಿಂದ ನಡೆದುಕೊಂಡರೆ, ಅವರ ಸಾಮರ್ಥ್ಯದಿಂದ, ಕೊನೆಯಿಲ್ಲದ ದುಃಖಕ್ಕೀಡಾಗಬೇಕಾಗುತ್ತದೆ.

Tamil Transliteration
Periyaaraip Penaadhu Ozhukir Periyaaraal
Peraa Itumpai Tharum.

Explanations
Holy Kural #893
ಅರಸನು ತಾನು ಕೆಟ್ಟು ನಾಶವಾಗಲು ಬಯಸಿದರೆ, ಬಲ್ಲಿದರೆದುರು ತಪ್ಪಿ ನಡೆಯಲಿ; ಅವರಲ್ಲಿ ನ್ಯಾಯ ನೀತಿಗಳನ್ನು ಅತಿಕ್ರಮಿಸಿ
ವರ್ತಿಸಲಿ!

Tamil Transliteration
Ketalventin Kelaadhu Seyka Atalventin
Aatru Pavarkan Izhukku.

Explanations
Holy Kural #894
ಬಲ್ಲಿದರಾದವರಿಗೆ, ಅಶಕ್ತರಾದವರು ಕೆಟ್ಟದ್ದನ್ನು ಮಾಡಿದರೆ, ತಾವೇ ಕೈಯಾರೆ, ಮೃತ್ಯುವನ್ನು ಆಹ್ವಾನಿಸಿದಂತೆ.

Tamil Transliteration
Kootraththaik Kaiyaal Viliththatraal Aatruvaarkku
Aatraadhaar Innaa Seyal.

Explanations
Holy Kural #895
ಬಲಶಾಲಿಯಾದ ಅರಸನ ಹಗೆಗೊಳಗಾದವರು ತಲೆ ತಪ್ಪಿಸಿ ಎಲ್ಲಿಗೆ ಹೋದರೂ ಜೀವದಿಂದ ಉಳಿಯುವುದಿಲ್ಲ.

Tamil Transliteration
Yaantuch Chendru Yaantum Ularaakaar Vendhuppin
Vendhu Serappat Tavar.

Explanations
Holy Kural #896
ಕಾಳ್ಗಿಚ್ಚಿನ ಬೇಗೆಗೆ ತುತ್ತಾದರೂ ಜೀವದಿಂದ ಉಳಿಯಬಹುದು. ಬಲಶಾಲಿಗಳಾದ ಅರಸರನ್ನು ಪೀಡಿಸಿದವರು ಜೀವಸಹಿತ
ಉಳಿಯುವುದು ಕಷ್ಟ.

Tamil Transliteration
Eriyaal Sutappatinum Uyvuntaam Uyyaar
Periyaarp Pizhaiththozhuku Vaar.

Explanations
Holy Kural #897
ಮಹಾಮಹಿಮರಾದ ಸಚ್ಚರಿತರು ಕೋಪಿಸಿಕೊಂಡರೆ (ಅರಸನ) ಅರಸಾಂಗಗಳನ್ನು ಒಳಗೊಂಡ ಕೀರ್ತಿವೇತ್ತ ಬಾಳೂ
ಸಂಪನ್ಮೂಲಗಳೂ ಏನಾಗುವುದು?

Tamil Transliteration
Vakaimaanta Vaazhkkaiyum Vaanporulum Ennaam
Thakaimaanta Thakkaar Serin.

Explanations
Holy Kural #898
ಪರ್ವತಸದೃಶರಾದವರನ್ನು ಅಗೌರವದಿಂದ ಕೀಳಾಗಿ ಕಂಡರೆ, ನೆಲದ ಮೇಲೆ ಭದ್ರವಾಗಿ (ವಂಶಪಾರಂಪರ್ಯವಾಗಿ) ನಿಂತವರು
ಕೂಡ ಅಳಿದು ಹೋಗುವರು.

Tamil Transliteration
Kundrannaar Kundra Madhippin Kutiyotu
Nindrannaar Maaivar Nilaththu.

Explanations
Holy Kural #899
ವ್ರತ ನೇಮಾದಿಗಳಿಂದ ನಿಷ್ಠರಾದ ಋಪಿಗಳು ಮೊನಿದರೆ, ದೇವತೆಗಳ ಅರಸನಾದ ಇಂದ್ರನು ಕೂಡ, ತನ್ನ ಸ್ಥಾನ ಕಳೆದುಕೊಂಡು
ಅಳಿದುಹೋಗುತ್ತಾನೆ.

Tamil Transliteration
Endhiya Kolkaiyaar Seerin Itaimurindhu
Vendhanum Vendhu Ketum.

Explanations
Holy Kural #900
ಪ್ರಬಲವಾದ ಸಿರಿಸಂಪತ್ತುಳ್ಳವರಾದವರೂ ಕೂಡ, ಕೀರ್ತಿಶಾಲಿಗಳೆನಿಸಿದ ಮಹಿಮಾನ್ವಿತರ ಹಗೆಯುಂಟಾದರೆ (ಒಡನೆಯೇ)
ನಾಶವಾಗುವರು.

Tamil Transliteration
Irandhamaindha Saarputaiyar Aayinum Uyyaar
Sirandhamaindha Seeraar Serin.

Explanations
🡱