ಹೆಣ್ಣು ಹೇಳಿದಂತೆ ಕೇಳುವುದು

Verses

Holy Kural #901
ಹೆಂಡತಿ ಹೇಳಿದಂತೆ ಕೇಳಿ ನಡೆಯುವವರು ಶ್ರೇಷ್ಠವಾದ ಫಲವನ್ನು ಪಡೆಯಲಾರರು. ನಿಜವಾದ ಕರ್ತವ್ಯವನ್ನು ಬಯಸುವವರಿಗೆ
ಬೇಡವಾದ ಸಂಗತಿ ಅದುವೆ.

Tamil Transliteration
Manaivizhaivaar Maanpayan Eydhaar Vinaivizhaiyaar
Ventaap Porulum Adhu.

Explanations
Holy Kural #902
ಕರ್ತವ್ಯವನ್ನು ಮರೆತು ಹೆಂಡತಿಯ ಹೆಣ್ತನಕ್ಕೆ ಮನಸೋತವನ ಐಶ್ವರ್ಯವು ನಾಚಿಕೆಗೇಡಿನವಾಗಿ ಅವಮಾನವನ್ನು ತರುತ್ತದೆ.

Tamil Transliteration
Penaadhu Penvizhaivaan Aakkam Periyadhor
Naanaaka Naanuth Tharum.

Explanations
Holy Kural #903
ಗೃಹಿಣಿಯಾದವಳಿಗೆ ಹೆದರಿ ವಿವೇಚನೆಯಿಲ್ಲದೆ ನಡೆದುಕೊಳ್ಳುವವನು ಸಂಪನ್ನರ ನಡುವೆ ಅವಹೇಳನಕ್ಕೆ ಗುರಿಯಾಗುತ್ತಾನೆ.

Tamil Transliteration
Illaalkan Thaazhndha Iyalpinmai Egngnaandrum
Nallaarul Naanuth Tharum.

Explanations
Holy Kural #904
ಗೃಹಿಣಿಯಾದವಳಿಗೆ ಅಂಜಿ, ಪರಲೋಕದ ಫಲವನ್ನು ಕಳೆದುಕೊಂಡವನಿಗೆ, ಕಾರ್ಯವನ್ನು ಸಾಧಿಸುವ ಶಕ್ತಿ ಇದ್ದರೂ ಅದು ಸಜ್ಜನರ
ಗೌರವಕ್ಕೆ ಪಾತ್ರವಾಗುವುದಿಲ್ಲ.

Tamil Transliteration
Manaiyaalai Anjum Marumaiyi Laalan
Vinaiyaanmai Veereydha Lindru.

Explanations
Holy Kural #905
ಮನೆಯೊಡತಿಗೆ ಅಂಜಿ ಬಾಳುವವನು, ಯಾವಾಗಲೂ, ಸಜ್ಜನರಿಗೆ ಒಳ್ಳೆಯದನ್ನು ಮಾಡಲು ಅಂಜುವನು.

Tamil Transliteration
Illaalai Anjuvaan Anjumar Regngnaandrum
Nallaarkku Nalla Seyal.

Explanations
Holy Kural #906
ಮನೆಯಾಕೆಯ ಬಿದಿರು ಕಾಂಡದಂಥ ನಳಿದೊಳಿನ ತೆಕ್ಕೆಗೆ ಅಂಜಿ ಬಾಳುವವರು ದೇವತೆಗಳಂತೆ (ಈ ಲೋಕದಲ್ಲಿ) ಬಾಳಿದರೂ
ಹಿರಿಮೆ ಇಲ್ಲದವರೇ ಆಗುತ್ತಾರೆ.

Tamil Transliteration
Imaiyaarin Vaazhinum Paatilare Illaal
Amaiyaardhol Anju Pavar.

Explanations
Holy Kural #907
ಹೆಣ್ಣಿನ ಆಜ್ಞೆಯನ್ನು ಶಿರಸಾವಹಿಸಿ ನಡೆಯುವವನ ಪುರುಷತ್ವಕ್ಕಿಂತ, ನಾಚಿಕೆಯೇ ಸ್ವಭಾವವಾಗುಳ್ಳ ಹೆಣ್ಣಿನ ಹಿರಿಮೆಯೇ ದೊಡ್ಡದು.

Tamil Transliteration
Penneval Seydhozhukum Aanmaiyin Naanutaip
Penne Perumai Utaiththu.

Explanations
Holy Kural #908
ಮೃದು ನೊಸಲಿನ ಮನೆಯಾಕೆಯ ಇಚ್ಛೆಯಂತೆ ನಡೆದುಕೊಳ್ಳುವವರು, ತಮ್ಮ ಸ್ನೇಹಿತರಿಗೆ ಒದಗಿದ ಕಷ್ಟಗಳನ್ನು ನೀಗಿಸಲಾರರು;
ಒಳ್ಲೆಯ ಕೆಲಸಗಳನ್ನೂ ಮಾಡಲಾರರು.

Tamil Transliteration
Nattaar Kuraimutiyaar Nandraatraar Nannudhalaal
Pettaangu Ozhuku Pavar.

Explanations
Holy Kural #909
ಒಳ್ಳೆಯ ಧರ್ಮ ಕಾರ್ಯಗಳೂ, ಅದರಿಂದ ಗಳಿಸಿದ ಸಿರಿ ಸಂಪಾದನೆಯೂ, ಮತ್ತಿತರ ಕರ್ತವ್ಯಗಳೂ, ಹೆಣ್ಣಿನ ಆಜ್ಞಾಧಾರಿಗಳಾದವರಲ್ಲಿ
ಸೇರುವುದಿಲ್ಲ

Tamil Transliteration
Aravinaiyum Aandra Porulum Piravinaiyum
Peneval Seyvaarkan Il.

Explanations
Holy Kural #910
ಒಳ್ಳೆಯದನ್ನು ಆಲೋಚಿಸುವ ಮನಸ್ಸೂ ಅದರಿಂದ ಪಡೆದ ಸಿರಿಯೂ ಉಳ್ಳವರಲ್ಲಿ, ಹೆಣ್ಣಿನ ದಾಸ್ಯತೆಯಿಂದ ಉಂಟಾಗುವ
ಆಜ್ಞಾನವಿರುವುದಿಲ್ಲ.

Tamil Transliteration
Enserndha Nenjath Thitanutaiyaarkku Egngnaandrum
Penserndhaam Pedhaimai Il.

Explanations
🡱