ಒಳ ಹಗೆ

Verses

Holy Kural #881
ತಂಪೆರೆಯಬಲ್ಲ ನೆಳಲೂ ನೀರೂ ಅಸುಖಕರವಾದರೆ ಅದರಿಂದ ಬಾಧೆಯುಂಟಾಗುವುದು; ಅದೇ ರೀತಿ ಬಂಧುಗಳ ಸ್ವಭಾವವು
ಅಹಿತಕರವಾಗಿದ್ದರೆ ಅದರಿಂದ ಕೆಡುಕೇ ಸಂಭವಿಸುವುದು.

Tamil Transliteration
Nizhalneerum Innaadha Innaa Thamarneerum
Innaavaam Innaa Seyin.

Explanations
Holy Kural #882
ಕತ್ತಿಯಂತೆ ಬಹಿರಂಗವಾಗಿಯೇ ಪ್ರಕಟವಾಗುವ ಹಗೆಗಳಿಗೆ ಅಂಜಬಾರದು; ಆದರೆ ಗೆಳೆಯರಂತೆ ಪ್ರಕಟಿಸಿ ಒಳಗೆ ಹಗೆ
ಸಾಧಿಸುವವರ ಸಂಬಂಧದ ಬಗ್ಗೆ ಅಂಜೆ ಬೇಕು

Tamil Transliteration
Vaalpola Pakaivarai Anjarka Anjuka
Kelpol Pakaivar Thotarpu.

Explanations
Holy Kural #883
ಒಳ ಹಗೆಗೆ ಅಂಜಿ ತನ್ನನ್ನು (ತಾನು) ಕಾಪಾಡಿಕೊಳ್ಳಬೇಕು; ಇಲ್ಲವಾದರೆ ಕುಂಬಾರನ ಆಯುಧದಂತೆ, ದುರ್ಬಲಗಳಿಗೆಯಲ್ಲಿ, ತಪ್ಪದೆ
ಅಳಿವು ತರುತ್ತದೆ.

Tamil Transliteration
Utpakai Anjiththar Kaakka Ulaivitaththu
Matpakaiyin Maanath Therum.

Explanations
Holy Kural #884
ಮನಸ್ಸು ಪರಿವರ್ತಿಸಲಾಗದ ಒಳಹಗೆಯು ಅರಸನಿಗೆ ಉಂಟಾದರೆ, ಅವನ ಸಂಬಂಧದವರಲ್ಲಿಯೇ ಅಸಮಾಧಾನವನ್ನು ಅದು
ಸೃಷ್ಟಿಸಿ, ಹಲವು ದುಃಖಗಳನ್ನು ಅವನಿಗೆ ತರುತ್ತದೆ.

Tamil Transliteration
Manamaanaa Utpakai Thondrin Inamaanaa
Edham Palavum Tharum.

Explanations
Holy Kural #885
(ದೊರೆಯಾದವನಿಗೆ) ತನ್ನ ಸಂಬಂಧದವರಲ್ಲಿಯೇ ಬಳಹಗೆಯು ಕಾಣಿಸಿಕೊಂಡರೆ, ಅಳಿವು ತರುವಂಥ ಹಲವು ದುಃಖಗಳನ್ನು
ಉಂಟುಮಾಡುತ್ತದೆ.

Tamil Transliteration
Uralmuraiyaan Utpakai Thondrin Iralmuraiyaan
Edham Palavum Tharum.

Explanations
Holy Kural #886
ತನ್ನ ಸಂಬಂಧಿಗಳಾದವರಲ್ಲೆ ಹಗೆಯು ಏರ್ಪಟ್ಟರೆ, ಅರಸನಾದವನಿಗೆ ದುಃಖಕರವಾದ ಮರಣವು ನಿಶ್ಚಯ.

Tamil Transliteration
Ondraamai Ondriyaar Katpatin Egngnaandrum
Pondraamai Ondral Aridhu.

Explanations
Holy Kural #887
ಭರಣಿಯು ತನ್ನ ಮುಚ್ಚಳದೊಂದಿಗೆ ಕೂಡಿಯೂ ಕೂಡಿಕೊಳ್ಳದಂತೆ ಇರುತ್ತದೆ; ಅದೇ ರೀತಿ ಒಳಹಗೆ ಏರ್ಪಟ್ಟ ಕುಟುಂಬವೂ
ತೋರಿಕೆಗೆ ಕೂಡಿಕೊಂಡಿದ್ದರೂ ಅಂತರಂಗ ಸಾಮರಸ್ಯವಿರುವುದಿಲ್ಲ.

Tamil Transliteration
Seppin Punarchchipol Kootinum Kootaadhe
Utpakai Utra Kuti.

Explanations
Holy Kural #888
ಒಳಹಗೆಯುಂಟಾದ ಸಂಸಾರವು ಅರದಿಂದ ತೇಯಲ್ಮಟ್ಟ ಕಬ್ಬಿಣದಂತೆ ಬಲವನ್ನು ಕಿಳಿದುಕೊಂಡು ದುರ್ಬಲವಾಗುತ್ತದೆ.

Tamil Transliteration
Aramporudha Ponpolath Theyum Uramporudhu
Utpakai Utra Kuti.

Explanations
Holy Kural #889
ಎಳ್ಳಿನ ಕಣದಷ್ಟು ಅತಿ ಕಿರಿದಾದ ಒಳ ಹಗೆ ಸುಳಿದರೂ ಕೂಡ (ಆ ನಂಶವು) ಕೇಡಿನ ದಾರಿ ತುಳಿಯುತ್ತದೆ.

Tamil Transliteration
Etpaka Vanna Sirumaiththe Aayinum
Utpakai Ulladhaang Ketu.

Explanations
Holy Kural #890
ಮನಸ್ಸಿನಲ್ಲಿ ಒಡುಂಬಡಿಕೆ ಇಲ್ಲದವರ ಸಹಬಾಳ್ವೆಯು, ಒಂದೇ ಗುಡಿಸಿಲೊಳಗೆ ಹಾವಿನೊಂದಿಗೆ ಕೂಡಿ ಬಾಳಿದಂತೆ.

Tamil Transliteration
Utampaatu Ilaadhavar Vaazhkkai Kutangarul
Paampotu Utanurain Thatru.

Explanations
🡱