ಕೆಡುಕನ್ನು ಮಾಡದಿರುವುದು

Verses

Holy Kural #311
ಪರರಿಗೆ ಕೇಡುಂಟು ಮಾಡುವುದರಿಂದ ತಮಗೆ ಅಷ್ಟಸಿದ್ದಿಗಳು ಲಭಿಸುವಂತಿದ್ದರೂ, ಹಾಗೆ ಕೇಡುಂಟು ಮಾಡದಿರುವುದೇ ಶುದ್ದ
ಮನಸ್ಕರ ಸಂಕಲ್ಪ.

Tamil Transliteration
Sirappeenum Selvam Perinum Pirarkku Innaa
Seyyaamai Maasatraar Kol.

Explanations
Holy Kural #312
ಹಗೆತನದಿಂದ, ಒಬ್ಬನು ಕೇಡೂಂಟು ಮಾಡಿದರೂ, ಅದಕ್ಕೆ ಪ್ರತಿಯಾಗಿ ಕೇಡನ್ನು ಬಗೆಯದಿರುವುದು ಸಚ್ಚಾರಿತ್ರರ ಸಂಕಲ್ಪ.

Tamil Transliteration
Karuththuinnaa Seydhavak Kannum Maruththinnaa
Seyyaamai Maasatraar Kol.

Explanations
Holy Kural #313
ತಾನು ಕೇಡು ಬಗೆಯದಿದ್ದರೂ ತನ್ನ ಮೇಲೆ ಹಗೆ ಸಾಧಿಸುವವನಿಗೆ ಪ್ರತಿಯಾಗಿ ಕೇಡೆಣಿಸಬಾರದು; ಹಾಗೆ ಎಣಿಸದರೆ ತಪ್ಪಿಸಿಕೊಳ್ಳಲು
ಅಸಾಧ್ಯವಾದ ದುಃಖವನ್ನು ತಂದೊಡ್ಡುವುದು.

Tamil Transliteration
Seyyaamal Setraarkkum Innaadha Seydhapin
Uyyaa Vizhuman Tharum.

Explanations
Holy Kural #314
ತನಗೆ ಕೇಡು ಬಗೆದವರನ್ನು ದಂಡಿಸುವುದು ಹೇಗೆಂದರೆ, ಅವರು ನಾಚವರೀತಿಯಲ್ಲಿ, ಅವರಿಗೆ ಒಳ್ಳೆಯದನ್ನು ಮಾಡಿ, ಅವರು ಮಾಡಿದ
ಅಪಕಾರವನ್ನು ಮರೆತು ಬಿಡುವುದು.

Tamil Transliteration
Innaasey Thaarai Oruththal Avarnaana
Nannayanj Cheydhu Vital.

Explanations
Holy Kural #315
ಬೇರೊಂದು ಜೀವಿಯ ನೋವನ್ನು ತನ್ನ ನೋದೆಂದು ಬಗೆದು, ಕಾಪಾಡದಿದ್ದರೆ, ತಾನು ಪಡೆದ ಅರಿವಿನಿಂದ ಪ್ರಯೋಜನವೇನು?

Tamil Transliteration
Arivinaan Aakuva Thunto Piridhinnoi
Thannoipol Potraak Katai.

Explanations
Holy Kural #316
ತಾನು ತನ್ನ್ ಬಾಳಿನಲ್ಲಿ ಅಹಿತಕರವೆಂದು ಕಂಡು ಅರಿತಿರುವುದನ್ನು ಬೇರೆಯವರಿಗೆ ಮಾಡಲು ಹಿಂಜರಿಯಬೇಕು.

Tamil Transliteration
Innaa Enaththaan Unarndhavai Thunnaamai
Ventum Pirankan Seyal.

Explanations
Holy Kural #317
ಎಷ್ಟೇ ಅಲ್ಪವಾಗಿರಲಿ, ಯಾವ ಸಂಧರ್ಭವೇ ಆಗಲಿ, ಯಾರೇ ಆಗಿರಲಿ, ಮನಸ್ಸಿನಲ್ಲಿ ಕೂಡ ಕೇಡು ಬಗೆಯದಿರುವುದೇ (ಎಲ್ಲಾ
ಧರ್ಮಗಳಿಗಿಂತ) ಮೆಗಿಲಾದುದು.

Tamil Transliteration
Enaiththaanum Egngnaandrum Yaarkkum Manaththaanaam
Maanaasey Yaamai Thalai.

Explanations
Holy Kural #318
ತನ್ನ ಜೀವಕ್ಕೆ ಇದು ಕೆಡುಕಾದುದು ಎಂದು ಬಲ್ಲವನು ಇತರ ಜೀವಿಗಳಿಗೆ ಆ ಕೇಡೆಸೆಗುವುದರ ಕಾರಣವೇನೋ?

Tamil Transliteration
Thannuyirkaku Ennaamai Thaanarivaan Enkolo
Mannuyirkku Innaa Seyal.

Explanations
Holy Kural #319
ಮುಂಜಾನೆ ಒಬ್ಬರಿಗೆ ಕೇಡು ಬಯಸಿದರೆ, ಸಂಜೆ ವೇಳೆ ಆ ಕೇಡು ನಮ್ಮನ್ನು ತಾನಾಗಿಯೇ ಬಂದು ಸೇರಿಕೊಳ್ಳುವುದು.

Tamil Transliteration
Pirarkkinnaa Murpakal Seyyin Thamakku Innaa
Pirpakal Thaame Varum.

Explanations
Holy Kural #320
ಕಷ್ಟವೆಲ್ಲ (ಇತರರಿಗೆ) ನೋವುಂಟು ಮಾಡಿದವರ ಮೇಲೆಯೇ ಬಂದೆರುಗುವುದು; ಕಷ್ಟಗಳಿಂದ ಮುಕ್ತರಾಗಿ ಬಾಳಬಯಸುವವರು
ಪರರಿಗೆ ನೋವುಂಟು ಮಾಡುವುದಿಲ್ಲ.

Tamil Transliteration
Noyellaam Noiseydhaar Melavaam Noiseyyaar
Noyinmai Ventu Pavar.

Explanations
🡱