ಕೊಲ್ಲದಿರುವುದು
Verses
ಧರ್ಮವಾದ ಕಾರ್ಯ ಯಾವುದೆಂದರೆ ಕೊಲ್ಲದಿರುವುದು; ಕೊಲ್ಲುವುದು ಧರ್ಮವಲ್ಲದ ಪಾಪ ಕಾರ್ಯಗಳನ್ನು ಉಂಟು ಮಾಡುವುದು.
Tamil Transliteration
Aravinai Yaadhenin Kollaamai Koral
Piravinai Ellaan Tharum.
ಇದ್ದುದನ್ನು ಹಂಚಿಕೊಂಡು ಉಂಟು ಹಲವು ಜೀವಗಳನ್ನು ಕಾಪಾಡುವುದೇ, ಶಾಸ್ತ್ರಜ್ಞರು ಹೇಳಿರುವ ಧರ್ಮಗಳಲ್ಲೆಲ್ಲ ಮಿಗಿಲಾದುದು.
Tamil Transliteration
Pakuththuntu Palluyir Ompudhal Noolor
Thokuththavatrul Ellaan Thalai.
ಕೊಲ್ಲದಿರುವುದು ಎಲ್ಲದಕ್ಕೂ ಮೇಲಾದ ಒಳ್ಳೆಯ ಗುಣ; ಸುಳ್ಳು ಹೇಳದಿರುವುದು ಅದಕ್ಕೆ ಎರಡನೆಯದು.
Tamil Transliteration
Ondraaka Nalladhu Kollaamai Matradhan
Pinsaarap Poiyaamai Nandru.
ಯಾವೊಂದು ಪ್ರಾಣಿಯನ್ನು ಕೊಲ್ಲುವುದನ್ನು ತಪ್ಪಿಸುವ ಮಾರ್ಗವೇ ಶಾಸ್ತ್ರಗ್ರಂಥಗಳು ಹೇಳುವ ಮಾರ್ಗಗಳಲ್ಲೆಲ್ಲ ಒಳ್ಳೆಯದು.
Tamil Transliteration
Nallaaru Enappatuvadhu Yaadhenin Yaadhondrum
Kollaamai Soozhum Neri.
ಸಂಸಾರ, ಹುಟ್ಟುಗಳ ನೆಲೆಗಂಜಿ, ಆಶಗಳನ್ನು ತೊರೆದು ಸನ್ಯಾಸಿಗಳಾದವರಲ್ಲಿಯೂ, ಕೊಲೆಗಂಜಿ ಕೊಲ್ಲದಿರುವ ಧರ್ಮವನ್ನು
ಕೈಕೊಂಡವರೇ ಮೇಲಾದವರು ಎನಿಸಿಕೊಳ್ಳುತ್ತಾರೆ.
Tamil Transliteration
Nilaianji Neeththaarul Ellaam Kolaianjik
Kollaamai Soozhvaan Thalai.
ಕೊಲ್ಲದಿರುವ ಧರ್ಮವನ್ನು ಕೈಕೊಂಡು ನಡೆಯುವವನ ಬಾಳನಡೆಯ ಮೇಲೆ ಜೀವಗಳನ್ನು ಕೊಂಡುಂಬ ಮೃತ್ಯು ಬಂದು
ಎರಗಲಾರದು.
Tamil Transliteration
Kollaamai Merkon Tozhukuvaan Vaazhnaalmel
Sellaadhu Uyirunnung Kootru.
ತನ್ನ ಪ್ರಾಣ ಹೋದರೂ (ಅದರ ರಕ್ಷಣೆಗಾಗಿ) ಬೇರೊಂದು ಇನಿಯೊಡಲನ್ನು ಕೊನೆಗಾಣಿಸುವ ಕೊಲೆಗೆಲಸ ಮಾಡಬಾರದು.
Tamil Transliteration
Thannuyir Neeppinum Seyyarka Thaanpiridhu
Innuyir Neekkum Vinai.
(ಯಜ್ಞ ಯಾಗಾದಿಗಳಲ್ಲಿ) ಕೊಲೆ ಮಾಡುವುದರಿಂದ ಎಷ್ಟೇ ಹಿರಿದಾದ ಸುಖ ಸಂಪತ್ತುಗಳು ಉಂಟಾದರೂ, ತಿಳಿದವರ ದೃಷ್ಟಿಯಲ್ಲಿ,
ಕೊಲ್ಲುವುದರಿಂದ ಬರುವ ಸಿರಿಯು ಕೀಳಾದುದು.
Tamil Transliteration
Nandraakum Aakkam Peridheninum Saandrorkkuk
Kondraakum Aakkang Katai.
ಕೀಳು ಕೆಲಸ ಯಾವುದು ಎಂದು ತಿಳಿದವರ ಮನಸ್ಸಿನಲ್ಲಿ, ಕೊಲೆಗೆಲಸ ಮಾಡುವವರು ಹೊಲೆಗೆಲಸದವರೆಂದು ಗಣಿಸಲ್ಪಡುತ್ತಾರೆ.
Tamil Transliteration
Kolaivinaiya Raakiya Maakkal Pulaivinaiyar
Punmai Therivaa Rakaththu.
(ಹಿಂದಿನ ಜನ್ಮದಲ್ಲಿ) ಪ್ರಾಣವನ್ನು ಒಡಲಿನಿಂದ ಬೇರ್ಪಡಿಸಿದವರೇ (ಕೊಲೆಗಡುಕರೇ) ಈ ಜನ್ಮದಲ್ಲಿ ರೋಗರುಜಿನಗಳಿಂದ ನವೆದು
ಕೀಳಾದ ಬಾಳು ನಡೆಸುವರು ಎಂದು (ಬಲ್ಲವರು) ಹೇಳುವರು.
Tamil Transliteration
Uyir Utampin Neekkiyaar Enpa Seyir Utampin
Sellaaththee Vaazhkkai Yavar.