ಕೋಪ ತಾಳದಿರುವುದು
Verses
ಒಬ್ಬನಿಗೆ ಹಾನಿಯುಂಟು ಮಾಡುವ ಸಂಧರ್ಭಗಳಲ್ಲಿ ಕೋಪ ಮಾಡದೆ ಸಂಯಮದಿಂದ ನಡೆದುಕೊಳ್ಳುವವನೇ ಕೋಪ ನಿಗ್ರಹಿ
ಎನಿಸಿಕೊಳ್ಳುತ್ತಾನೆ. ಬೇರೆ ಸಂಧರ್ಭಗಳಲ್ಲಿ ಅವನು ತಾಳಿಕೊಂಡರೂ, ಬಿಟ್ಟರೂ ಒಂದೇ.
Tamil Transliteration
Sellitaththuk Kaappaan Sinangaappaan Allitaththuk
Kaakkinen Kaavaakkaal En?.
ಸಲ್ಲದಎಡೆಗಳಲ್ಲಿ (ಅಂದರೆ ತನಗಿಂತ ಬಲಶಾಲಿಗಳಾದವರ ಮೇಲೆ) ಕೋಪ ತೋರಿಸಿಕೊಳ್ಳುವುದು ಕೆಟ್ಟದ್ದೇ; ಆದರೆ ಸಲ್ಲುವ
ಎಡೆಗಳಲ್ಲಿ (ಅಂದರೆ ತನಗಿಂತ ದುರ್ಬಲರಲ್ಲಿ) ಕೋಪ ತೋರಿಸುವುದಕ್ಕಿಂತ ಕೆಟ್ಟದು ಬೇರೆಯಿಲ್ಲ.
Tamil Transliteration
Sellaa Itaththuch Chinandheedhu Sellitaththum
Iladhanin Theeya Pira.
ಯಾರಲ್ಲಿಯೂ ಕೋಪವನ್ನು ತಾಳದೆ ಅದನ್ನು ಮರೆಸಿಕೊಳ್ಳಬೇಕು; ಕೋಪದಿಂದಲೇ ಕೆಟ್ಟ ಕಾರ್ಯಗಳು ಹುಟ್ಟಿಕೊಳ್ಳುತ್ತವೆ.
Tamil Transliteration
Maraththal Vekuliyai Yaarmaattum Theeya
Piraththal Adhanaan Varum.
ನಗೆಯನ್ನೂ ಸಂತೋಷವನ್ನೂ ಕೊಲ್ಲುವ ಕೋಪಕ್ಕಿಂತ ಮಿಗಿಲಾದ ಹಗೆ ಬೇರುಂಟೆ?
Tamil Transliteration
Nakaiyum Uvakaiyum Kollum Sinaththin
Pakaiyum Ulavo Pira.
ತನ್ನನ್ನು ತಾನು ಕಾದುಕೊಳ್ಳಬೇಕೆಂಬ ಅಪೇಕ್ಷೆ ಇದ್ದರೆ, ಒಬ್ಬನು ತನಗೆ ಕೋಪವು ಬರದಂತೆ ಕಾದುಕೊಳ್ಳಬೇಕು. ಹಾಗೆ ಅದನ್ನು
ಕಾಯದೆ ಬಿಟ್ಟರೆ, ಅದು ತನ್ನನ್ನೇ ಕೊಲ್ಲುವುದು.
Tamil Transliteration
Thannaiththaan Kaakkin Sinangaakka Kaavaakkaal
Thannaiye Kollunj Chinam.
ಕೋಪವು ತನ್ನನ್ನು ಸೇರಿಕೊಂಡವರನ್ನು ಸುಡುವ ಬೆಂಕಿಯಂತೆ; ಅದು ಕುಲವೆನ್ನುವ ರಕ್ಷಣೆಯ ಹರಿಗೋಲನ್ನು ಸುಟ್ಟು
ನಾಶಪಡಿಸುವುದು.
Tamil Transliteration
Sinamennum Serndhaaraik Kolli Inamennum
Emap Punaiyaich Chutum.
ನೆಲಕ್ಕೆ ಕೈಯಪ್ಪಳಿಸಿ ಹೊಡೆದರೆ, ಅದರಿಂದ ಕೈಗೆ ನೋವಾಗುವುದುಹೇಗೆ ತಪ್ಪುವುದಿಲ್ಲವೂ ಹಾಗೆ ಕೋಪವನ್ನು ಬಯಸಿಕೊಂಡವನ
ಕೇಡೂ ತಪ್ಪುವುದಿಲ್ಲ.
Tamil Transliteration
Sinaththaip Porulendru Kontavan Ketu
Nilaththaraindhaan Kaipizhaiyaa Thatru.
ಹಲವಾರು ಸೊಡರುಗಳ ಉರಿಯಲ್ಲಿ ಅದ್ದಿದಂಥ ಸಂಕಟಗಳನ್ನು ಒಬ್ಬನು ತಂದೊಡ್ಡಿದರೂ, ಅವನ ಮೇಲೆ ಕೋಪತಾಳದೆ
ಸಮಾಧಾನಿಯಾಗಿರುವುದು ಮೇಲು.
Tamil Transliteration
Inareri Thoivanna Innaa Seyinum
Punarin Vekulaamai Nandru.
ಒಬ್ಬನು ತನ್ನ ಮನಸ್ಸಿನಲ್ಲಿ ಕೋಪವನ್ನು ಎಣಿಸುವುದಿಲ್ಲವಾದರೆ, ಅವನು ನೆನೆದುದನ್ನೆಲ್ಲಾ ಒಡನೆಯೇ ಪಡೆದುಕೊಳ್ಳುವನು.
Tamil Transliteration
Ulliya Thellaam Utaneydhum Ullaththaal
Ullaan Vekuli Enin.
ಕೋಪದ ಎಲ್ಲೆಯನ್ನು ಮೀರಿದವರು ಸತ್ತವರಿಗೆ ಸಮಾನರು; ಅದನ್ನು ತೊರೆದವರು, ಋಷಿಗಳಿಗೆ ಸಮಾನರು.
Tamil Transliteration
Irandhaar Irandhaar Anaiyar Sinaththaith
Thurandhaar Thurandhaar Thunai.