ವ್ಯವಸಾಯ (ಉಳ್ಳುವುದು)

Verses

Holy Kural #1031
ಲೋಕದ ಜನರು ಹಲವು ಉದ್ಯೋಗಗಳಲ್ಲಿ ಎಷ್ಟೇ ಸುತ್ತಾಡಿದರೂ ಅದು ನೇಗಿಲ ದುಡಿಮೆಗೆ ಹಿಂದ ನಿಲ್ಲುವಂಥರು; ಅದ್ದರಿಂದ
ಎಷ್ಟೇ ಶ್ರಮವಿದ್ದರೂ ಉಳುವ ದುಡಿಮೆಯೇ ಮೇಲಾದುದು.

Tamil Transliteration
Suzhandrumerp Pinnadhu Ulakam Adhanaal
Uzhandhum Uzhave Thalai.

Explanations
Holy Kural #1032
ಹೊಲದ ದಂಡಿಮೆಯುಳಿದು ಬೇರೆ ಕೆಲಸಗಳನ್ನು ಮಾಡುವ ಎಲ್ಲರ ಭಾರವನ್ನು ಉಳುವವನು ಹೊರುವುದರಿಂದ, ನೇಗಿಲ
ಯೋಗಿಯು, ಲೋಕ ರಥದ ಅಚ್ಚಿನ ಮೊಳೆಯಂತೆ ಇದ್ದಾನೆ.

Tamil Transliteration
Uzhuvaar Ulakaththaarkku Aaniaq Thaatraadhu
Ezhuvaarai Ellaam Poruththu.

Explanations
Holy Kural #1033
ಭೂಮಿಯನ್ನು ಉತ್ತು, ಪರರಿಗೆ ಉಣವಿತ್ತು ತಾವೂ ಉಂಟು ಸುಖಿಸುವರೈತರೇ ಬಾಳಿನ ಸುಖಕ್ಕೆ ಪಾಲುದಾರರು; ಉಳಿದವರೆಲ್ಲ
ಪರಾಶ್ರಯದಲ್ಲಿ ಬಾಳುನಡಸುವವರು.

Tamil Transliteration
Uzhudhuntu Vaazhvaare Vaazhvaarmar Rellaam
Thozhudhuntu Pinsel Pavar.

Explanations
Holy Kural #1034
ಧಾನ್ಯದ ಬೆಳೆಯ ತಂಪಿನ ಛತ್ರದ ನೆರಳಲ್ಲಿ ಬಾಳುವವರು ಹಲವು ಅರಸರ ಛತ್ರದ ನೆರಳನ್ನು ತಮ್ಮ ಅರಸನ
ಛತ್ರದಡಿಯಲ್ಲೇ ಕಾಣುವರು.

Tamil Transliteration
Palakutai Neezhalum Thangutaikkeezhk Kaanpar
Alakutai Neezha Lavar.

Explanations
Holy Kural #1035
ಕೈಯಾರೆ ಶ್ರಮಪಟ್ಟು ಕೆಲಸಮಾಡಿ ಉಣ್ಣುವ ಗುಣವುಳ್ಳವರು ಪರರಲ್ಲಿ ಬೇಡುವುದಿಲ್ಲ; ತಮ್ಮ ಬಳಿ ಬೇಡಲು ಬಂದವರಿಗೆ
ವಂಚನೆಯಿಲ್ಲದೆ ಕೊಡುವರು.

Tamil Transliteration
Iravaar Irappaarkkondru Eevar Karavaadhu
Kaiseydhoon Maalai Yavar.

Explanations
Holy Kural #1036
ಉಳುವವರು ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಆಶೆಗಳನ್ನೆಲ್ಲ ತೋರದಿದ್ದೇವೆ ಎನ್ನುವ ಸನ್ಯಾಸಿಗಳಿಗೂ ಬಾಳಿನಲ್ಲಿ ನೆಲೆ
ಇಲ್ಲವಾಗುತ್ತದೆ.

Tamil Transliteration
Uzhavinaar Kaimmatangin Illai Vizhaivadhooum
Vittemen Paarkkum Nilai.

Explanations
Holy Kural #1037
ಒಂದು ಬೊಗಸೆ ಮಣ್ಣು ಕಾಲು ಬೊಗಸೆಯಾಗುವಂತೆ ಚೆನ್ನಾಗಿ ಉತ್ತುಕಾಯಲು (ಒಣಗಲು) ಬಿಟ್ಟರೆ, ಒಂದು ಹಿಡಿ
ಗೊಬ್ಬರವೂ ಇಲ್ಲದೆ ಪೈರು ಹುಲುಸಾಗಿ ಬೆಳೆಯುತ್ತದೆ.

Tamil Transliteration
Thotippuzhudhi Kaqsaa Unakkin Pitiththeruvum
Ventaadhu Saalap Patum.

Explanations
Holy Kural #1038
ನೇಗಿಲಿನಿಂದ ಉಳುವುದಕ್ಕಿಂತ, ಭೂಮಿಗೆ ಸಾರ ನೀಡುವುದು ಒಳ್ಲೆಯುದು; ಕಳೆಯನ್ನು ತೆಗೆದ ಮೇಲೆ, ನೀರು
ಹಾಯಿಸುವುದಕ್ಕಿಂತ (ಬೆಳೆಯ) ಕಾವಲು ಕಾಯುವುದು ಮೇಲು.

Tamil Transliteration
Erinum Nandraal Eruvitudhal Kattapin
Neerinum Nandradhan Kaappu.

Explanations
Holy Kural #1039
ನೆಲದೊಡೆಯನಾದವನು ತನ್ನ ನೆಲವನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ, ಕುಪಿತಳಾದ ಕೆಂಡತಿಯಂತೆ, ಅವನಲ್ಲಿ ಆ
ನೆಲವು ಅಸಹಕಾರವನ್ನು ತೋರುತ್ತದೆ.

Tamil Transliteration
Sellaan Kizhavan Iruppin Nilampulandhu
Illaalin Ooti Vitum.

Explanations
Holy Kural #1040
ತಮ್ಮಲ್ಲಿ ಏನೂ ಇಲ್ಲವೆಂದು ದಾರಿದ್ರ್ಯವನ್ನು ತೋರಿಸುತ್ತ ಆಲಸ್ಯದಿಂದ ಕಾಲಹರಣ ಮಾಡುವವನನ್ನು ಕಂಡು ಬೆಡಗಿನ
ನೆಲವಣ್ಣು (ತಿರಸ್ಕಾರದಿಂದ) ನಗುತ್ತಾಳೆ.

Tamil Transliteration
Ilamendru Asaii Iruppaaraik Kaanin
Nilamennum Nallaal Nakum.

Explanations
🡱