ವಂಶಪಾಲನೆಯ ಬಗೆ
Verses
ವಂಶಪಾಲನೆಗಾಗಿ ಕರ್ತವ್ಯವನ್ನು ಮಾಡುವುದಕ್ಕೆ ನಾನು ಹಿಂದೆಗೆಯುವುದಿಲ್ಲ ಎಂದು ಒಬ್ಬನು ಪ್ರಯತ್ನ ನಡೆಸುವ
ಹಿರಿಮೆಗಿಂತ ಮೇಲಾದುದು ಬೇರಾವುದೂ ಇಲ್ಲ.
Tamil Transliteration
Karumam Seyaoruvan Kaidhooven Ennum
Perumaiyin Peetutaiyadhu Il.
ಮನುಷ್ಯ ಪ್ರಯತ್ನ, ತುಂಬಿದ ಅರಿವು- ಈ ಎರಡರ ನಿರಂತರೆ ಸಾಧನೆಯಿಂದ ವಂಶದ ಕೀರ್ತಿಯು ಮೇಲೇರಿ ಬೆಳಗುತ್ತದೆ.
Tamil Transliteration
Aalvinaiyum Aandra Arivum Enairantin
Neelvinaiyaal Neelum Kuti.
ನನ್ನ ವಂಶದ ಕೀರ್ತಿಯನ್ನು ಬೆಳಗುತ್ತೇನೆಂದು ಪಣತೊಟ್ಟ ಒಬ್ಬನಿಗೆ ದೇವತೆಯು ಸಮಸ್ತ ವಸ್ತ್ರಾಲಂಕೃತವಾಗಿ ತಾನೇ
ಮುಂದೆ ಬಂದು ಸಹಾಯಮಡುತ್ತವೆ.
Tamil Transliteration
Kutiseyval Ennum Oruvarkuth Theyvam
Matidhatruth Thaanmun Thurum.
ತಮ್ಮ ವಂಶವನ್ನು ಬೆಳಗುವ ಕಾರ್ಯದಲ್ಲಿ ನಿಧಾನಿಸದೆ, ಕೂಡಲೇ ಪ್ರಯತ್ನ ನಡೆಸುವವರಿಗೆ ಅವರು ಆಲೋಚಿಸುವುದಕ್ಕೆ
ಮುಂಚೆಯೇ ತಾನಾಗಿಯೇ ಸಿದ್ಧಿಯಾಗುತ್ತದೆ.
Tamil Transliteration
Soozhaamal Thaane Mutiveydhum Thamkutiyaith
Thaazhaadhu Ugnatru Pavarkku.
ಕೆಡುಕು ಮಾಡದವನಾಗಿ, ವಂಶದ ಕೀರ್ತಿಗೆ ತಕ್ಕ ಕಾರ್ಯಗಳನ್ನು ಮಾಡಿ ಬಾಳುಗೈಯುವವನನ್ನು ಲೋಕದ ಜನರು
ಬಂಧುವಿನಂತೆ ಪ್ರೀತಿಸಿ ಹತ್ತಿರಕ್ಕೆ ಬರುತ್ತಾರೆ.
Tamil Transliteration
Kutram Ilanaaik Kutiseydhu Vaazhvaanaich
Chutramaach Chutrum Ulaku.
ಒಬ್ಬನಿಗೆ ಒಳ್ಳೆಯ ಪೌರುಷತನವೆಂದರೆ, ತಾನು ಹುಟ್ಟಿದ ವಂಶವನ್ನು ಆಳುವ ಸಾಮರ್ಥ್ಯವನ್ನು ತನ್ನದಾಗಿ ಮಾದಿಕೊಳ್ಳುವುದು.
Tamil Transliteration
Nallaanmai Enpadhu Oruvarkuth Thaanpirandha
Illaanmai Aakkik Kolal.
ರಣರಂಗದಲ್ಲಿ ರಕ್ಷಣೆಯ ಭಾರವನ್ನು ಹೆದರದೆ ಹೊತ್ತ ವೀರರಂತೆ ತಮ್ಮ ಕುಟುಂಬ ವರ್ಗದ ಹೊಣೆಯನ್ನು ಸಮರ್ಥವಾಗಿ
ಹೊರಬಲ್ಲ ಶಕ್ತಿವಂತರ ಮೇಲೆಯೇ ವಂಶದ ಭಾರವಿರುತ್ತದೆ.
Tamil Transliteration
Amarakaththu Vankannar Polath Thamarakaththum
Aatruvaar Metre Porai.
ವಂಶದ ಕೀರ್ತಿಯನ್ನು ಬೆಳಸಲಿಚ್ಛಿಸುವವರಿಗೆ ತಕ್ಕ ಕಾಲವೆಂಬುದು ಬೇರೆ ಇಲ್ಲ; ಸೋಮಾರಿತನದಿಂದ ತಮ್ಮ ಹುಸಿ
ಅಭಿಮಾನವನ್ನು ಲೆಕ್ಕಿಸುವವರಾದರೆ ವಂಶದ ಹಿರಿಮೆಯು ನಾಶವಾಗುವುದು.
Tamil Transliteration
Kutiseyvaark Killai Paruvam Matiseydhu
Maanang Karudhak Ketum.
ತನ್ನ ವಂಶದ ಅಪನಿಂದೆಗಳನ್ನು ನಿವಾರಿಸುವವನ ಶರೀರವು ದುಃಖಗಳನ್ನು ತುಂಬುವುದಕ್ಕಾಗಿತೇ ಇರುವ
ಪಾತ್ರಯಾಗಿರುವುದೋ?
Tamil Transliteration
Itumpaikke Kolkalam Kollo Kutumpaththaik
Kutra Maraippaan Utampu.
ಸಂಖಟ ಕಾಲದಲ್ಲಿ ಒಡನಿದ್ದು ಆಧಾರವಾಗಬಲ್ಲ ಒಳ್ಳೆಯ ವ್ಯಕ್ತಿಯು ಇಲ್ಲದಿದ್ದರೆ, ವಂಶವೃಕ್ಷವು ದುರ್ವಿಧಿಯೆಂಬ ಕೊಡಲಿ
ಏಟಿನಿಂದ ಕೆಳಗುರುಳುವುದು.
Tamil Transliteration
Itukkankaal Kondrita Veezhum Atuththoondrum
Nallaal Ilaadha Kuti.