ಬಡತನ

Verses

Holy Kural #1041
ಬಡತನಕ್ಕಿಂತ ದುಃಖಕರವಾದುದು ಯಾವುದು? ಬಡತನಕ್ಕಿಂತ ದುಃಖಕರವಾದುದು, ಬಡತನವೇ.

Tamil Transliteration
Inmaiyin Innaadhadhu Yaadhenin Inmaiyin
Inmaiye Innaa Thadhu.

Explanations
Holy Kural #1042
ಬಡತನವೆಂಬ ಪಾಪಿಯು ಒಬ್ಬನ ಮನೆಯನ್ನು ಪ್ರವೇಶಿಸಿದಲ್ಲಿ, ಅವನಿಗೆ ಇಹ ಜನ್ಮದಲ್ಲಿಯೂ ಮರು ಜನ್ಮದಲ್ಲಿಯೂ ಸುಖ
ಸಂತೋಷಗಳು ಇಲ್ಲವಾಗುವುದು.

Tamil Transliteration
Inmai Enavoru Paavi Marumaiyum
Immaiyum Indri Varum.

Explanations
Holy Kural #1043
ದಾರಿದ್ರ್ಯದಿಂದುಂಟಾಗುವ ಆಸೆಯು, ಒಬ್ಬನ ವಂಶ ಪಾರಂಪರ್ಯವಾಗಿ ಬಂದ ಗುಣವನ್ನು, ಮಾತಿನ ಬಲ್ಲೆಯನ್ನೂ ಒಟ್ಟಿಗೇ
ಕೆಡಿಸುವುದು.

Tamil Transliteration
Tholvaravum Tholum Ketukkum Thokaiyaaka
Nalkuravu Ennum Nasai.

Explanations
Holy Kural #1044
ಬಡತನವೆನ್ನುವುದು ಒಳ್ಳೆಯ ಕಾಲದಲ್ಲಿ ಹುಟ್ಟಿದವರಲ್ಲೂ ಕೀಳಾದ ಮಾತು ಹೊರಡಲು ಕಾರಣವಾದ ಚಿತ್ತ ವಿಕಲ್ಪವನ್ನು ತರುತ್ತದೆ.

Tamil Transliteration
Irpirandhaar Kanneyum Inmai Ilivandha
Sorpirakkum Sorvu Tharum.

Explanations
Holy Kural #1045
ಬಡತನವೆನ್ನುವ ಸಂಕಟಕರವಾದ ನೆಲೆಯಲ್ಲಿ ಹಲವು ತೆರನಾದ ದುಃಖಗಳು ಬಂದು ಸೇರಿಕೊಳ್ಳುತ್ತವೆ.

Tamil Transliteration
Nalkuravu Ennum Itumpaiyul Palkuraith
Thunpangal Sendru Patum.

Explanations
Holy Kural #1046
ಒಳ್ಳೆಯ ಗ್ರಂಥಗಳಲ್ಲಿರುವ ವಿಚಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಹೇಳಿದರೂ, ಬಡತನ ಹೊಕ್ಕವರು ಆಡಿದ ಆ ಮಾತಿನ
ಸತ್ವವು ಕೇಳುವವರಿಲ್ಲದೆ ನಿಷ್ಫಲವಾಗುವುದು.

Tamil Transliteration
Narporul Nankunarndhu Sollinum Nalkoorndhaar
Sorporul Sorvu Patum.

Explanations
Holy Kural #1047
ದೈವ ಕೃಪೆಯಿಲ್ಲದೆ ದಾರಿದ್ರ್ಯಕ್ಕೊಳಗಾದವನನ್ನು ಹೆತ್ತ ತಾಯಿಯೇ ಪರಕೀಯನಂತೆ ಕಾಣುವಳು.

Tamil Transliteration
Aranjaaraa Nalkuravu Eendradhaa Yaanum
Piranpola Nokkap Patum.

Explanations
Holy Kural #1048
ನಿನ್ನ ಕಷ್ಟಕ್ಕೇಡು ಮಾಡಿ (ನನ್ನನ್ನು) ಕೊಂದ ಬಡತನವು ಇಂದೂ (ನನ್ನಬಳಿ) ಬರಲಿದೆಯೇ? (ಎಂದು ಬಡವನಾದವನು
ಪ್ರತಿದಿನವೂ ಚಿಂತಿಸುತ್ತನೆ)

Tamil Transliteration
Indrum Varuvadhu Kollo Nerunalum
Kondradhu Polum Nirappu.

Explanations
Holy Kural #1049
ಒಬ್ಬನು ಬೆಂಕಿಯ ನಡುವೆ ಮಲಗಿ ನಿದ್ರಿಸಬಹುದು; (ಆದರೆ) ಬಡತನದ ನಡುವೆ ನಿದ್ರಿಸುವುದು ಅಸಾಧ್ಯ.

Tamil Transliteration
Neruppinul Thunjalum Aakum Nirappinul
Yaadhondrum Kanpaatu Aridhu.

Explanations
Holy Kural #1050
ಭೋಗಿಸಲು ಹಣವಿಲ್ಲದ ಬಡವರು, ತಮ್ಮ ಒಡಲನ್ನು ತೊರೆಯದೆ ಕಾರಣ, ಕಂಡವರ ಉಪ್ಪಿಗೂ ಗಂಜಿಗೂ ಯಮನಾಗುವರು.

Tamil Transliteration
Thuppura Villaar Thuvarath Thuravaamai
Uppirkum Kaatikkum Kootru.

Explanations
🡱