ಬಂಧುಗಳನ್ನು ಆದರಿಸುವಿಕೆ
Verses
ಒಬ್ಬನ ಸಿರಿ ಅಳಿದ ಮೇಲೂ, ಅವನ ಹಳೆಯ ಸಂಬಂಧವನ್ನು ನೆನೆಸಿ ಕೊಂಡಾಡುವುದು ಬಂಧುಗಳಲ್ಲಿ ಇರುತ್ತದೆ.
Tamil Transliteration
Patratra Kannum Pazhaimaipaa Raattudhal
Sutraththaar Kanne Ula.
ಪ್ರೀತಿ ಅಳಿಯದ ಸಂಬಂಧವು (ಒಬ್ಬನಿಗೆ) ದೊರೆತರೆ, ಅದೇ ಅವನಿಗೆ ಮೇಲ್ಮೆಯುಳ್ಳ ಭಾಗ್ಯವನ್ನು ತರುತ್ತದೆ.
Tamil Transliteration
Virupparaach Chutram Iyaiyin Arupparaa
Aakkam Palavum Tharum.
(ಸಂಬಂಧಿಗಳೊಡನೆ) ನೆಕಟತೆಯನ್ನು ಹೊಂದದಿರುವವನ ಬಾಳ್ವೆ ಕರೆಯಿಲ್ಲದ ಕೊಳದಲ್ಲಿ ನೀರು ತುಂಬಿ ಹರಿದಂತೆ.
Tamil Transliteration
Alavalaa Villaadhaan Vaazhkkai Kulavalaak
Kotindri Neernirain Thatru.
ಸಿರಿವಂತನಾಗಿ ತಾನು ಪಡೆದ ಫಲವೆಂದರೆ, ಸಂಬಂಧಿಗಳಿಂದ ಸುತ್ತುವರಿದು ಬಾಳುವುದು.
Tamil Transliteration
Sutraththaal Sutrap Pataozhukal Selvandhaan
Petraththaal Petra Payan.
ಕೊಡುಗೈ ದಾನ, ಸವಿ ಮಾತು- ಈ ಗುಣಗಳಿದ್ದರೆ, ಸಂಬಂಧಿಗಳು ಹೆಚ್ಚು ಹೆಚ್ಚಾಗಿ ಬಂದು ಸುತ್ತುವರಿಯುವರು.
Tamil Transliteration
Kotuththalum Insolum Aatrin Atukkiya
Sutraththaal Sutrap Patum.
ಹೇರಳವಾಗಿ ಕೊಡುವವನೂ, ಕೋಪವನ್ನು ತೋರದವನೂ ಆಗಿದ್ದರೆ, ಅವನಂತೆ ಸಂಬಂಧಿಗಳ ಕೂಡ ಬಾಳುವವರು ಲೋಕದಲ್ಲಿ ಇಲ್ಲ.
Tamil Transliteration
Perungotaiyaan Penaan Vekuli Avanin
Marungutaiyaar Maanilaththu Il.
ಕಾಗೆಯು ಬಚ್ಚಿಟ್ಟುಕೊಳ್ಳದೆ ತನ್ನ ಬಳಗವನ್ನೆಲ್ಲ ಕರೆದು ಉಣ್ಣುತ್ತದೆ, ಐಶ್ವರ್ಯವೂ ಅಂಥ ಸ್ವಭಾವವಿರುವವರಲ್ಲೇ ಇರುತ್ತದೆ.
Tamil Transliteration
Kaakkai Karavaa Karaindhunnum Aakkamum
Annanee Raarkke Ula.
ಅರಸನಾದವನು, ಎಲ್ಲರನ್ನೂ ಸಾಧಾರಣ ದೃಷ್ಟಿಯಲ್ಲಿ ನೋಡದೆ, ಅವರವರ ಅರ್ಹತೆಗನುಗುಣವಾಗಿ ಆದರಿಸಿದರೆ, ಅದನ್ನು ನೋಡಿ ಮೆಚ್ಚಿ ಹಲವರು ಅವನ ಸುತ್ತ ಸೇರುತ್ತಾರೆ.
Tamil Transliteration
Podhunokkaan Vendhan Varisaiyaa Nokkin
Adhunokki Vaazhvaar Palar.
ಮೊದಲು ಸಮೀಪವರ್ತಿಗಳಾಗಿದ್ದು, ಕಾರಣಾಂತರದಿಂದ ಬೇರೆಯಾದವರು ಆ ಅತೃಪ್ತಿಯ ಕಾರಣವಿಲ್ಲವಾದಾಗ ಮತ್ತೆ ಬಂದು ಸೇರುವರು.
Tamil Transliteration
Thamaraakik Thatrurandhaar Sutram Amaraamaik
Kaaranam Indri Varum.
ತನ್ನೋಡನಿದ್ದು ಬೇರೆಯಾಗಿ, ಯಾವುದೋ ಕಾರಣದಿಂದ ಮತ್ತೆ ಸೇರ ಬಂದವನನ್ನು ಅರಸನಾದವನು ಸಹಾನುಭೂತಿಯಿಂದ ನೋಡಿ, ಆಲೋಚನೆ ಮಾಡಿ ಸ್ವೀಕರಿಸಬೇಕು
Tamil Transliteration
Uzhaippirindhu Kaaranaththin Vandhaanai Vendhan
Izhaith Thirundhu Ennik Kolal.