ಮರೆಯದಿರುವಿಕೆ
Verses
ಕಾಮಾದಿಗಳಿಂದುಂಟಾದ ಅತಿ ಆನಂದದಿಂದ ಬರುವ ಮರವೆ, ಅತಿ ಕೋಪದಿಂದ ಬರುವ ಮರವೆಗಿಂತ ಕೆಟ್ಟದು.
Tamil Transliteration
Irandha Vekuliyin Theedhe Sirandha
Uvakai Makizhchchiyir Sorvu.
ನಿತ್ಯದಾರಿದ್ರ್ಯ ಅರಿವನ್ನು ಕೊಲ್ಲುವಂತೆ ಮರವೆಯು ಒಬ್ಬನ ಕೀರ್ತಿಯನ್ನು ಕೆಡಿಸುತ್ತದೆ.
Tamil Transliteration
Pochchaappuk Kollum Pukazhai Arivinai
Nichcha Nirappuk Kon Raangu.
ಮರವೆಯ ವಶವಾದವರಿಗೆ ಕೀರ್ತಿಯಿಂದ ಬಾಳುವ ನೆಲೆ ಇಲ್ಲ. ಅದು ಲೋಕದಲ್ಲಿರುವ ಎಲ್ಲಾ ವಿಚಾರಶೀಲರೂ ಒಪ್ಪುವಂಥ ನಂಬಿಕೆ.
Tamil Transliteration
Pochchaappaark Killai Pukazhmai Adhuulakaththu
Eppaalnoo Lorkkum Thunivu.
(ಮನಸ್ಸಿನಲ್ಲಿ) ಅಂಜಿಕೆ ಇರುವವರಿಗೆ, ಕೋಟೆಯ ರಕ್ಷಣೆ ಇದ್ದರೂ ಫಲವಿಲ್ಲ. ಅದೇ ರೀತಿ ಮರವೆಯ ವಶವಾದವರಿಗೆ (ಎಲ್ಲ ಅನುಕೂಲವಿದ್ದರೂ) ಫಲವಿಲ್ಲ.
Tamil Transliteration
Achcha Mutaiyaarkku Aranillai Aangillai
Pochchaap Putaiyaarkku Nanku.
ಮುಂದೆ ಬರಲಿರುವ ಸಂಕಟಗಳನ್ನು ತಿಳಿದು ಕಾಯ್ದುಕೊಳ್ಳದೆ ಮರೆತು ಬಿಡುವವನು. ಅವು ಬಂದ ಮೇಲೆ ತನ್ನ ಸ್ಥಿತಿಯನ್ನು ನೆನೆದು ಪಶ್ಚಾತ್ತಾಪಪಡುವನು.
Tamil Transliteration
Munnurak Kaavaadhu Izhukkiyaan Thanpizhai
Pinnooru Irangi Vitum.
ಯಾರಲ್ಲೂ ಯಾವ ಕಾಲದಲ್ಲೂ ಮರವೆಯಿಂದ ಪರವಶವಾಗದಿರುವ ಸ್ಥಿತಿಯ ತಪ್ಪದೆ ಇದ್ದರೆ, ಅದಕ್ಕೆ ಒಪ್ಪುವಂಥದು ಬೇರೆ ಇಲ್ಲ.
Tamil Transliteration
Izhukkaamai Yaarmaattum Endrum Vazhukkaamai
Vaayin Adhuvoppadhu Il.
ಮರೆಯದಿರುವಿಕೆಯೆಂಬ ಸಾಧನದಿಂದ, ಕರ್ತವ್ಯಗಳನ್ನು ಪಟ್ಟು ಹಿಡಿದು ಮಾಡಿದರೆ, ಅಸಾಧ್ಯವೆಂದು ಆಗದಿರುವ ಕಾರ್ಯ ಒಂದೂ ಇಲ್ಲ.
Tamil Transliteration
Ariyaendru Aakaadha Illaipoch Chaavaak
Karuviyaal Potrich Cheyin.
ತಿಳಿದವರು ಕೀರ್ತಿಸಿ ಹೇಳಿದ ಕಾರ್ಯಗಳನ್ನು ಸಾಧಿಸಿಮಾಡಿ ತೋರಿಸ ಬೇಕು; ಮಾಡದೆ ಮರೆತುಬಿಟ್ಟರೆ, ಏಳು ಜನ್ಮಗಳಲ್ಲೂ ಒಳಿತಾಗುವುದಿಲ್ಲ.
Tamil Transliteration
Pukazhndhavai Potrich Cheyalventum Seyyaadhu
Ikazhndhaarkku Ezhumaiyum Il.
(ಅರಸನಾದವನು) ತನ್ನ ಸಂತೋಷದಲ್ಲಿ ಮೈಮರೆತಿರುವಾಗ, ಆ ರೀತಿ ಮರೆತು ಕೆಟ್ಟವರನ್ನು ನೆನೆದುಕೊಳ್ಳಬೇಕು.
Tamil Transliteration
Ikazhchchiyin Kettaarai Ulluka Thaandham
Makizhchchiyin Maindhurum Pozhdhu.
(ಅರಸನಾದವನು) ಆಲೋಚಿಸಿದುದನ್ನು ಬಿಡದೆ, ಮತ್ತೆ ಮತ್ತೆನೆನೆದುಕೊಳ್ಳುತ್ತಿದ್ದರೆ, ಅವನು ಬಯಸಿದುದನ್ನು ಪಡೆದುಕೊಳ್ಳುವುದು ಸುಲಭವಾಗುವುದು.
Tamil Transliteration
Ulliyadhu Eydhal Elidhuman Matrundhaan
Ulliyadhu Ullap Perin.