ಧರ್ಮದ ಬಲವನ್ನು ಕುರಿತು
Verses
ಶ್ರೇಯಸ್ಸು ಮತ್ತು ಐಶ್ವರ್ಯವನ್ನು ತರುವ ಧರ್ಮಕ್ಕಿಂತ ಮಿಗಿಲಾದ ಭಾಗ್ಯ ಏನುಂಟು ಈ ಬಾಳಿನಲ್ಲಿ?
Tamil Transliteration
Sirappu Eenum Selvamum Eenum Araththinooungu
Aakkam Evano Uyirkku.
ಧರ್ಮಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ ; ಅದನ್ನು ಮರೆಯುವುದರಿಂದ ಮಿಗಿಲಾದ ಕೇಡೂ ಇಲ್ಲ.
Tamil Transliteration
Araththinooungu Aakkamum Illai Adhanai
Maraththalin Oongillai Ketu.
ಉಚಿತವಾದ ಮಾರ್ಗಗಳಿಂದ, ಸಲ್ಲತಕ್ಕ ಎಡಗಳಲ್ಲೆಲ್ಲ ಧರ್ಮಕಾರ್ಯವನ್ನು ಬಿಡದೆ ಆಚರಿಸಿಕೊಂಡು ಬರಬೇಕು.
Tamil Transliteration
Ollum Vakaiyaan Aravinai Ovaadhe
Sellumvaai Ellaanj Cheyal.
ಮನದಲ್ಲಿ ನಿರ್ಮಲನಾದರೆ ಅದೇ ಧರ್ಮ ; ಮತ್ತೆಲ್ಲವೂ ಬರಿಯ ಆಡಂಬರ.
Tamil Transliteration
Manaththukkan Maasilan Aadhal Anaiththu Aran
Aakula Neera Pira.
ಅಸೂಯೆ, ಅಳಿಯಾಸೆ, ಕೋಪ, ಮನಸ್ಸು ನೋಯುವ ಮಾತು ಈ ನಾಲ್ಕನ್ನು ತೊರೆದು ಬಿಡುವುದೇ ಧರ್ಮ.
Tamil Transliteration
Azhukkaaru Avaavekuli Innaachchol Naankum
Izhukkaa Iyandradhu Aram.
ಧರ್ಮವನ್ನು ಮುಂದೆ ಎಂದಾದರೂ ಆಚರಿಸಿದರಾಯಿತು ಎಂದು ಉಪೇಕ್ಷಿಸದೆ, ಇಂದೇ ಕೈಗೊಳ್ಳಬೇಕು ; ಅದೇ ಮರಣ ಕಾಲಕ್ಕೆ ನೆಲೆಯಾದ ಆಧಾರ.
Tamil Transliteration
Andrarivaam Ennaadhu Aranjeyka Matradhu
Pondrungaal Pondraath Thunai.
ಧರ್ಮದ ಫಲ ಇದೆಂದು ವ್ಯರ್ಥವಾಗಿ ವರ್ಣಿಸಬೇಡ. ಪಲ್ಲಕ್ಕಿ ಹೊರುವವನಲ್ಲಿ ಮತ್ತು ಪಲ್ಲಕ್ಕಿಯಲ್ಲಿ ಕುಳಿತಿರುವವನಲ್ಲಿ ನೋಡು.
Tamil Transliteration
Araththaaru Ithuvena Ventaa Sivikai
Poruththaanotu Oorndhaan Itai.
ದಿನವೊಂದೂ ವ್ಯರ್ಥಮಾಡದಂತೆ ಸದ್ದರ್ಮವನ್ನು ಕೈಗೊಂಡರೆ ಅದು ಒಬ್ಬನ ಮರು ಹುಟ್ಟು ಇಲ್ಲದಂತೆ ಮಾಡುತ್ತದೆ. ಅವನ ಮರುಹುಟ್ಟಿನ ಹಾದಿಯಲ್ಲಿ ಅದು ಅಡ್ಡವಾಗಿಟ್ಟ ಕಲ್ಲಿನಂತೆ ನೆರವಾಗುತ್ತದೆ.
Tamil Transliteration
Veezhnaal Pataaamai Nandraatrin Aqdhoruvan
Vaazhnaal Vazhiyataikkum Kal.
ಧರ್ಮ ಮಾರ್ಗದಿಂದ ಬರುವುದೇ ಸುಖ ; ಉಳಿದೆಲ್ಲವೂ ಅಸುಖಕ್ಕೆ ನೆಲೆ ; ಅವುಗಳಲ್ಲಿ ಕೀರ್ತಿಯೂ ಇಲ್ಲ.
Tamil Transliteration
Araththaan Varuvadhe Inpam Mar Rellaam
Puraththa Pukazhum Ila.
ಮಾಡಬೇಕಾದುದು ಧರ್ಮವೊಂದೇ ; ಬಿಡಬೇಕಾದುದು ನಿಂದೆ.
Tamil Transliteration
Seyarpaala Thorum Arane Oruvarku
Uyarpaala Thorum Pazhi.