ತೊರೆದವರ ಹಿರಿಮೆ
Verses
ಒಳ್ಳೆಯ ನಡತೆಯಲ್ಲಿ ನಡೆದುಕೊಂಡು, ಎಲ್ಲವನ್ನು ತೊರೆದು ಸನ್ಯಾಸಧರ್ಮದಲ್ಲಿ ಬಾಳಿದವರ ಹಿರಿಮೆಯನ್ನು ಮೇಲಾಗಿ ವರ್ಣಿಸಿ ಹೇಳುವುದು ಎಲ್ಲ ಶಾಸ್ತ್ರ ಗ್ರಂಥಗಳ ಗುರಿಯೂ ಆಗಿದೆ
Tamil Transliteration
Ozhukkaththu Neeththaar Perumai Vizhuppaththu
Ventum Panuval Thunivu.
ತೊರೆದವರ ಮಹಿಮೆಯನ್ನು ಅಳೆಯಲು ಹೋಗುವುದು, ಲೋಕದಲ್ಲಿ ಸತ್ತವರ ಸಂಖ್ಯಯನ್ನು ಎಣಿಸುವಂತೆ
Tamil Transliteration
Thurandhaar Perumai Thunaikkoorin Vaiyaththu
Irandhaarai Ennikkon Tatru.
ಎರಡು ಬಗೆಯನ್ನು (ಜನನ ಮತ್ತು ಮುಕ್ತಿ) ಅರಿತುಕೊಂಡು ಧರ್ಮಮಾರ್ಗದಲ್ಲಿ ನಡೆಯುವರ ಹಿರಿಮೆಯು ಲೋಕವನ್ನು ಬೆಳಗುತ್ತದೆ.
Tamil Transliteration
Irumai Vakaidherindhu Eentuaram Poontaar
Perumai Pirangitru Ulaku.
ದೃಢನಿಶ್ಚಯದಿಂದ ಐದಿಂದ್ರಿಯಗಳನ್ನು ಕಡಿವಾಣ ಹಾಕಿ ಕಾಪಾಡುವವನು, ವರನಿಧಿಯಾದ ಮೋಕ್ಷಕ್ಕ್ ಬೀಜದಂತೆ
Tamil Transliteration
Uranennum Thottiyaan Oraindhum Kaappaan
Varanennum Vaippirkor Viththu.
ಐದು ಇಂದ್ರಿಯಗಳನ್ನು ನಿಗ್ರಹಿಸಿದವನ ತಪೋಬಲಕ್ಕೆ ವಿಶಾಲವಾದ ಆಕಾಶದಲ್ಲಿ ನೆಲೆಸಿರುವ ದೇವತೆಗಳ ದೊರೆಯಾದ ಇಂದ್ರನೇ ಸಾಕ್ಷಿ.
Tamil Transliteration
Aindhaviththaan Aatral Akalvisumpu Laarkomaan
Indhirane Saalung Kari.
ಮಾಡಲು ಅಸಾಧ್ಯವೆನಿಸಿದುದನ್ನು ದೊಡ್ಡವರು ಮಾಡಿತೋರುತ್ತಾರೆ ; ಅಲ್ಪರಿಗೆ ಅದು ಅಸಾಧ್ಯ.
Tamil Transliteration
Seyarkariya Seyvaar Periyar Siriyar
Seyarkariya Seykalaa Thaar.
ರೂಪ, ರಸ, ಸ್ಪರ್ಶ, ಶಬ್ದ, ಗಂಧಗಳೆಂಬ ಐದು ಇಂದ್ರಿಯಗಳ ಬಗೆಗಳನ್ನು ಬಲ್ಲವನ ಬಳಿಯಲ್ಲಿಯೇ ಲೋಕವೆಲ್ಲ ನೆಲಸಿರುತ್ತದೆ.
Tamil Transliteration
Suvaioli Ooruosai Naatramendru Aindhin
Vakaidherivaan Katte Ulaku.
ಅರ್ಥವತ್ತಾದ ಮಾತುಗಳನ್ನು ಆಡುವ ಜ್ಞಾನಿಗಳ ಹಿರಿಮೆಯನ್ನು ಈ ಲೋಕದಲ್ಲಿ ಅವರ ವೇದರೂಪದ ಬೋಧೆಯ ಮಾತುಗಳಲ್ಲೇ ಕಾಣಬಹುದು.
Tamil Transliteration
Niraimozhi Maandhar Perumai Nilaththu
Maraimozhi Kaatti Vitum.
ಗುಣವೆಂಬ ಶಿಖರವನ್ನೇರಿ ನಿಂತವರ ಕೋಪವು, ಕ್ಷಣಮಾತ್ರವಾದರೂ ತಾಳಿ ಕೊಳ್ಳಲು ಅಸಾಧ್ಯ.
Tamil Transliteration
Kunamennum Kundreri Nindraar Vekuli
Kanameyum Kaaththal Aridhu.
ಧರ್ಮ ಮಾರ್ಗದಲ್ಲಿ ನಡೆಯುವವರೇ ಅಂದಣರು (ಬ್ರಾಹ್ಮಣರು) ; ಏಕೆಂದರೆ ಅವರು ಮತ್ತೆಲ್ಲ ಪ್ರಾಣಿಗಳನ್ನು ನಿಜವಾದ ಕರುಣೆಯಿಂದ ಕಾಣಲು ಪ್ರತಿಜ್ಞೆ ಮಾಡುತ್ತಾರೆ.
Tamil Transliteration
Andhanar Enpor Aravormar Revvuyir Kkum
Sendhanmai Poontozhuka Laan.