ಗೃಹ ಜೀವನ ಧರ್ಮ
Verses
ಮನೆವಾರ್ತೆಯುಳ್ಳವನು ಧರ್ಮಗುಣ ಶೀಲರಾದ ಬ್ರಹ್ಮಚಾರಿ, ವಾನಪ್ರಸ್ಥ, ಸಂನ್ಯಾಸಿ ಎಂಬ ಮೂವರಿಗೆ ಅವರವರ ಧರ್ಮದಲ್ಲಿ ಸಾಗಲು ಬೆಂಬಲವಾಗುತ್ತಾನೆ.
Tamil Transliteration
Ilvaazhvaan Enpaan Iyalputaiya Moovarkkum
Nallaatrin Nindra Thunai.
ಆಶ್ರಯವಿಲ್ಲದವರು, ದರಿದ್ರರು, ಸತ್ತವರು ಎಲ್ಲರಿಗೂ ಗೃಹಸ್ಥನೇ ಆಧಾರ.
Tamil Transliteration
Thurandhaarkkum Thuvvaa Dhavarkkum Irandhaarkkum
Ilvaazhvaan Enpaan Thunai.
ಪಿತೃಗಳು, ದೇವತೆಗಳು, ಅತಿಥಿಗಳು, ನೆಂಟರಿಷ್ಟರು ಮತ್ತು ತಾನು- ಈ ಐವರ ಋಣಗಳನ್ನು ಸಲ್ಲಿಸುವುದೇ ಗೃಹಸ್ಥ ಧರ್ಮದ ಮಹೋನ್ನತ ಕರ್ತವ್ಯ.
Tamil Transliteration
Thenpulaththaar Theyvam Virundhokkal Thaanendraangu
Aimpulaththaaru Ompal Thalai.
ಅಪನಿಂದೆಗಂಜಿ, ಇತರರೊಂದಿಗೆ ತನ್ನ ಸ್ವತ್ತನ್ನು ಹಂಚಿಕೊಂಡು ಉಣ್ಣುವವನ ವಂಶವು ನಾಶವಿಲ್ಲದೆ ಚಿರಕಾಲ ಉಳಿಯುತ್ತದೆ.
Tamil Transliteration
Pazhiyanjip Paaththoon Utaiththaayin Vaazhkkai
Vazhiyenjal Egngnaandrum Il.
ಪ್ರೀತಿ, ಸಚ್ಚಾರಿತ್ರ್ಯಗಳನ್ನು ಪಡದರೆ, ಅದೇ ಗೃಹಸ್ಥ ಧರ್ಮದ ಕೀರ್ತಿ ಮತ್ತು ಫಲಗಳು.
Tamil Transliteration
Anpum Aranum Utaiththaayin Ilvaazhkkai
Panpum Payanum Adhu.
ಧರ್ಮಮಾರ್ಗದಲ್ಲಿ (ಸಸ್ಮಾರ್ಗದಲ್ಲಿ) ಕುಟುಂಬ ಜೀವನ ನಡಸಿದರೆ, ಬೇರೆ ಮಾರ್ಗಗಳಿಂದ ಹೋಗಿ ಪಡೆಯುವುದಾದರೂ ಏನು?
Tamil Transliteration
Araththaatrin Ilvaazhkkai Aatrin Puraththaatril
Pooip Peruva Thevan?.
(ಎಲ್ಲರೂ ಮೆಚ್ಚುವ ಹಾಗೆ) ಧರ್ಮಗುಣದಿಂದ ಕುಟುಂಬ ಜೀವನವನ್ನು ನಡೆಸುವವನು, (ಬಾಳಿನ ಶ್ರೇಯಸ್ಸಿಗಾಗಿ) ತಪಸ್ಸು ಮೊದಲಾದ ಹಲವು ತೆರದ ಪ್ರಯತ್ನಗಳನ್ನು ನಡಸುವವರೊಳಗೆಲ್ಲಾ ಮಿಗಿಲಾದವನು.
Tamil Transliteration
Iyalpinaan Ilvaazhkkai Vaazhpavan Enpaan
Muyalvaarul Ellaam Thalai.
ಇತರರನ್ನು ಸಸ್ಮಾರ್ಗದಲ್ಲಿ ಹಚ್ಚಿ, ತಾನೂ ಧರ್ಮಮಾರ್ಗದಿಂದ ವಿಮುಖನಾಗದೆ ಇರುವವನ ಕುಟುಂಬ ಜೀವನವು, ತಪಸ್ವಿಗಳಿಗಿಂತ ಹೆಚ್ಚು ತಪೋಬಲವುಳ್ಳದ್ದು.
Tamil Transliteration
Aatrin Ozhukki Aranizhukkaa Ilvaazhkkai
Norpaarin Nonmai Utaiththu.
ಧರ್ಮವೆಂದೆನಿಸಿಕೊಳ್ಳುವುದೇ ಗೃಹಧರ್ಮ ; ಅದೂ ಪರರ ಅಷಕೀರ್ತಿ, ನಿಂದೆಗಳಿಗೆ ಗುರಿಯಾಗದಿದ್ದರೆ ಮತ್ತಷ್ಟು ಶೋಭಿಸುತ್ತದೆ.
Tamil Transliteration
Aran Enap Pattadhe Ilvaazhkkai Aqdhum
Piranpazhippa Thillaayin Nandru.
ಈ ಲೋಕದಲ್ಲಿ ಬಾಳಬೇಕಾದ ರೀತಿಯಲ್ಲಿ ಧರ್ಮದಿಂದ ನಡೆಯುವವನು ಸ್ವರ್ಗವಾಸಿಗಳಾದ ದೇವತೆಗಳ ನಡುವೆ ಶೋಭಿಸಲ್ಪಡುವನು. (ಬಸವೇಶ್ವರ ವಚನ : ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ. )
Tamil Transliteration
Vaiyaththul Vaazhvaangu Vaazhpavan Vaanu?ryum
Theyvaththul Vaikkap Patum.