ಮಳೆಯ ಸ್ತುತಿ
Verses
ಮಳಯಿಂದಲೇ ಲೋಕವು ವರ್ಧಿಸುತ್ತದೆ; ಅದುದರಿಂದ ಅದು ಅಮೃತಕ್ಕೆ ಸಮ
Tamil Transliteration
Vaannindru Ulakam Vazhangi Varudhalaal
Thaanamizhdham Endrunarar Paatru.
ಉಣ್ಣುವವರಿಗೆ ತಕ್ಕ ಉಣಿಸನ್ನು ಬೆಳೆಯೆಲು ನೆರವಾಗುವುದು ಮಳೆ ; ನೀರಡಿಕೆಯಿಂದ ಬಳಲಿದವರಿಗೆ ತಾನೇ ಉಣಿಸಾಗುವುದು ಮಳೆ.
Tamil Transliteration
Thuppaarkkuth Thuppaaya Thuppaakkith Thuppaarkkuth
Thuppaaya Thooum Mazhai.
ಮಳೆ ಬಾರದೆ ಹೋದರೆ ಸುತ್ತಲೂ ನೀರಿನಿಂದ ವ್ಯಾಪಿಸಿದ ಈ ಲೋಕವನ್ನು ಹಸಿವು ಕಾಡುತ್ತದೆ.
Tamil Transliteration
Vinindru Poippin Virineer Viyanulakaththu
Ulnindru Utatrum Pasi.
ಮೋಡದಿಂದ ಸುರಿಯುವ ಮಳೆಯ ನೀರಿನಾಶ್ರಯವು ಬಲಗುಂದಿತಾದರೆ ರೈತರ ವ್ಯವಸಾಯವೂ ನಿಂತಂತೆಯೇ
Tamil Transliteration
Erin Uzhaaar Uzhavar Puyalennum
Vaari Valangundrik Kaal.
ಸಕಾಲಕ್ಕೆ ಸುರಿಯದೆ, ಮಳೆ ಮನುಷ್ಯನ ಬಾಳನ್ನು ಕೆಡಿಸುತ್ತದೆ. ಅದೇ ರೀತಿ ಸಕಾಲಕ್ಕೆ ಸುರಿದು, ಕೆಟ್ಟ ಮನುಷ್ಯನನ್ನು ಮೇಲೆತ್ತುವುದೂ ಮಳೆಯೇ.
Tamil Transliteration
Ketuppadhooum Kettaarkkuch Chaarvaaimar Raange
Etuppadhooum Ellaam Mazhai.
ಆಕಾಶದಿಂದ ಮಳೆಹನಿ ಬೇಳದೆ, ಹಸಿರು ಹುಲ್ಲು ಕೂಡ ತಲೆಯೆತ್ತದು.
Tamil Transliteration
Visumpin Thuliveezhin Allaalmar Raange
Pasumpul Thalaikaanpu Aridhu.
ಮೋಡವು ಮಳೆಯನ್ನು ಸುರಿಸುವ ಕೃಪೆತೋರದೆ ಹೋದಲ್ಲಿ, ಕಡಲಿನ ಅಪಾರ ಜಲಸಂಪತ್ತು ಕೂಡ ಕುಗ್ಗಿಹೋಗುವುದು.
Tamil Transliteration
Netungatalum Thanneermai Kundrum Thatindhezhili
Thaannalkaa Thaaki Vitin.
ಈ ಲೋಕದಲ್ಲಿ ಮಳೆ ಸುರಿಯದಿದ್ದರೆ, ಮೇಲು ಲೋಕದಲ್ಲಿರುವ ದೇವತೆಗಳಿಗೂ ಜನರು ಪೂಜೆ, ಉತ್ಸವಗಳನ್ನು ವೈಭವದಿಂದ ನಡೆಸುವುದಿಲ್ಲ.
Tamil Transliteration
Sirappotu Poosanai Sellaadhu Vaanam
Varakkumel Vaanorkkum Eentu.
ಮಳೆಯಾಗದೇ ಹೋದರೆ ಈ ಲೋಕದಲ್ಲಿ ದಾನ, ತಪಸ್ಸು ಎರಡೂ ನೆಲೆಸಿ ಇರುವುದಿಲ್ಲ.
Tamil Transliteration
Thaanam Thavamirantum Thangaa Viyanulakam
Vaanam Vazhangaa Thenin.
ನೀರಿನಿಂದಲೇ ಲೋಕಾಚಾರ ಎಲ್ಲ; ಮಳೆ ಬಾರದಿದ್ದರೆ, ಒಳ್ಳೆಯ ಆಚಾರ ನಡವಳಿಕೆಗಳೂ ನೆಲೆಯಾಗಿ ನಿಲ್ಲುವುದಿಲ್ಲ.
Tamil Transliteration
Neerindru Amaiyaadhu Ulakenin Yaaryaarkkum
Vaanindru Amaiyaadhu Ozhukku.