ತಿಳಿದು ವರ್ತಿಸುವ ಬಗೆ
Verses
ಒಂದು ಕೆಲಸಕ್ಕೆ ತೊಡಗುವ ಮುನ್ನ, ಆ ಕೆಲಸದಿಂದ ಉಂಟಾಗುವ ವ್ಯಯವನ್ನೂ ಬರುವ ಆದಾಯವನ್ನೂ ತೂಗಿ ನೋಡಿ, ಬರಲಿರುವ ಲಾಭವನ್ನು ಪರಾಮರ್ಶಿಸಿ, ತೊಡಗಬೇಕು.
Tamil Transliteration
Azhivadhooum Aavadhooum Aaki Vazhipayakkum
Oodhiyamum Soozhndhu Seyal.
ಒಳ್ಳೆಯ ಒಡನಾಟವನ್ನು ಆಯ್ದುಕೊಂಡು, ಮಾಡುವ ಕೆಲಸದ ಬಗ್ಗೆ ವಿವರವಾಗಿ ಆಲೋಚಿಸಿ ತೊಡಗುವವರಿಗೆ ಕಷ್ಟಸಾಧ್ಯವಾದ ಸಂಗತಿ ಎಂಬುದೊಂದೂ ಇಲ್ಲ.
Tamil Transliteration
Therindha Inaththotu Therndhennich Cheyvaarkku
Arumporul Yaadhondrum Il.
ತಿಳಿದವರು ಮುಂದೆ ಬರಲಿರುವ ಸಿರಿಯನ್ನು ಬಯಸಿ, ಕೈಯಲ್ಲಿರುವ ಬಂಡವಾಳವನ್ನೇ ಹಾಳುಮಾಡಿಕೊಳ್ಳುವ ಕೆಲಸವನ್ನು (ಎಂದಿಗೂ) ಕೈಗೊಳ್ಳುವುದಿಲ್ಲ.
Tamil Transliteration
Aakkam Karudhi Mudhalizhakkum Seyvinai
Ookkaar Arivutai Yaar.
ಅಪನಿಂದೆಗೆ ಗುರಿಯಾಗುವಂಥ ಕೆಲಸಗಳಿಗೆ ಅಂಜುವವರು, ಆಲೋಚನೆ ಮಾಡದೆ ತಿಳಿವಿಲ್ಲದ ಕಾರ್ಯಗಳಲ್ಲಿ ತೊಡಗುವುದಿಲ್ಲ.
Tamil Transliteration
Thelivi Ladhanaith Thotangaar Ilivennum
Edhappaatu Anju Pavar.
(ಅರಸನಾದವನು) ತಾನು ಕೈಗೊಂಡ ಕೆಲಸದ (ಹೋರಾಟದ) ಉಪಾಯಗಳನ್ನು ಚೆನ್ನಾಗಿ ವಿಚಾರಮಾಡದೆ ತೊಡುಗವುದರಿಂದ, ಹಗೆಗಳ ಪ್ರಾಬಲ್ಯವನ್ನು ನೀರೆರೆದು ಪೋಷಿಸಿದ ಹಾಗಾಗುವುದು.
Tamil Transliteration
Vakaiyarach Choozhaa Thezhudhal Pakaivaraip
Paaththip Patuppadho Raaru.
(ಅರಸನಾದವನು) ಮಾಡಲು ಯೋಗ್ಯವಲ್ಲದನ್ನು ಮಾಡಿದರೆ, ಕೆಡುವನು; ಮಾಡಲು ಯೋಗ್ಯವಾದ ಕೆಲಸಗಳನ್ನು ಮಾಡದೆಯೇ ಬಿಟ್ಟರೂ ಕೆಡುವನು.
Tamil Transliteration
Seydhakka Alla Seyak Ketum Seydhakka
Seyyaamai Yaanung Ketum.
ಆಲೋಚನೆ ಮಾಡಿದ ಮೇಲೇ ಕೆಲಸವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬರಬೇಕು. ಮೊದಲೇ ಕೆಲಸ ಮಾಡಲು ನಿರ್ಧರಿಸಿ ಆಮೇಲೆ ಆ ಬಗ್ಗೆ ‘ಆಲೋಚನೆ ಮಾಡೋಣ’ ಎನ್ನುವುದು ದೋಷವೆನಿಸುವುದು.
Tamil Transliteration
Ennith Thunika Karumam Thunindhapin
Ennuvam Enpadhu Izhukku.
ಸರಿಯಾದ ಮಾರ್ಗದಲ್ಲಿ ನಡೆಸದ ಪ್ರಯತ್ನವು ಹಲವರು ಬೆಂಬಲವಾಗಿನಿಂತು, ಅದನ್ನು ಪೋಷಿಸಿದರೂ ಫಲಸುವುದಿಲ್ಲ.
Tamil Transliteration
Aatrin Varundhaa Varuththam Palarnindru
Potrinum Poththup Patum.
ಅವರವರ ಸ್ವಭಾವಗಳನ್ನು ಅರಿತು ಅವರವರಿಗೆ ಒಪ್ಪಿಗೆಯಾಗುವಂತೆ ಕೆಲಸ ಮಾಡದಿದ್ದರೆ, ಒಳ್ಳೆಯ ಕಾರ್ಯಗಳಲ್ಲಿಯೂ ತಪ್ಪು ಸಂಭವಿಸುವುದುಂಟು.
Tamil Transliteration
Nandraatra Lullun Thavuruntu Avaravar
Panparin Thaatraak Katai.
ಲೋಕವು ತನ್ನೊಂದಿಗೆ ಹೊಂದದುದನ್ನು ಸ್ವೀಕರಿಸುವುದಿಲ್ಲ, ಅದರಿಂದ ನಿಂದೆಯನ್ನು ತಾರದ ಕೆಲಸವನ್ನು ಆಲೋಚಿಸಿ ಮಾಡಬೇಕು.
Tamil Transliteration
Ellaadha Ennich Cheyalventum Thammotu
Kollaadha Kollaadhu Ulaku.