ಬಲದ ಅರಿವು

Verses

Holy Kural #471
ಅರಸನು ತಾನು ಕೈಗೊಂಡ ಕಾರ್ಯದ ಬಲ, ತನ್ನ ಬಲ, ತನ್ನ ಹಗೆಯ ಬಲ ಮತ್ತು ಇಬ್ಬಣ್ಣದ ಬೆಂಬಲದ ಬಲ- ಇವೆಲ್ಲವನ್ನೂ ತೂಗಿ ನೋಡಿ ನಂತರ ಕಾರ್ಯಕ್ಕೆ, ಕೈಹಾಕಬೇಕು.

Tamil Transliteration
Vinaivaliyum Thanvaliyum Maatraan Valiyum
Thunaivaliyum Thookkich Cheyal.

Explanations
Holy Kural #472
(ಎದುರಾಳಿಗಳನ್ನು ಎದುರಿಸುವ ಮುನ್ನ) ತನ್ನ ಬಲದ ಸಾಮರ್ಥ್ಯವನ್ನು ತಿಳಿದು, ಅದರಲ್ಲಿ ದೃಡವಾಗಿ ಮನಸ್ಸಿಟ್ಟು ನಡೆಯುವವರಿಗೆ ಅಸಾಧ್ಯವಾದುದೇನೂ ಇಲ್ಲ.

Tamil Transliteration
Olva Tharivadhu Arindhadhan Kandhangich
Chelvaarkkuch Chellaadhadhu Il.

Explanations
Holy Kural #473
ತಮ್ಮಲ್ಲಿರುವ ಬಲದ ಮಿತಿಯನ್ನು ಅರಿಯದವರು, ಉತ್ಸಾಹದಿಂದ (ಕಾಳಗದಲ್ಲಿ) ಮುನ್ನುಗ್ಗಿ ನಡುವಿನಲ್ಲಿಯೇ ಮುರಿದು ಬಿದ್ದವರು ಹಲವರು.

Tamil Transliteration
Utaiththam Valiyariyaar Ookkaththin Ookki
Itaikkan Murindhaar Palar.

Explanations
Holy Kural #474
ನೆರೆಯವರೊಂದಿಗೆ ಹೊಂದಿಕೊಂಡು ಬಾಳದೆ, ತನ್ನ ಬಲದ ಮಿತಿಯನ್ನು ತಿಳಿಯದೆ, ತನ್ನ ಹಿರಿಮೆಯನ್ನು ಹೊಗಳಿಕೊಳ್ಳುವ ಅರಸನು ಕೊಡಲೇ ಕೆಡುತ್ತಾನೆ.

Tamil Transliteration
Amaindhaang Kozhukaan Alavariyaan Thannai
Viyandhaan Viraindhu Ketum.

Explanations
Holy Kural #475
ನವಿಲುಗರಿ ತುಂಬಿದ ಗಾಡಿಯೇ ಆದರೂ, ಅದನ್ನು ಅಳತೆ ಮೀರಿ ತುಂಬಿದರೆ, ಗಾಡಿಯ ಅಚ್ಚು ಮುರಿದು ಹೋಗುತ್ತದೆ.

Tamil Transliteration
Peelipey Saakaatum Achchirum Appantanjjch
Aala Mikuththup Peyin.

Explanations
Holy Kural #476
ತುದಿಕೊಂಬೆಯನ್ನು ಏರಿದವರು, ಅದಕ್ಕೂ ಮುಂದೆ ಏರಿಹೋಗಲು ಸಾಹಸ ಮಾಡಿದರೆ, ಪ್ರಾಣಕ್ಕೆ ಸಂಚಕಾರವುಂಟಾಗುತ್ತದೆ.

Tamil Transliteration
Nunikkompar Erinaar Aqdhiran Thookkin
Uyirkkirudhi Aaki Vitum.

Explanations
Holy Kural #477
ಕೊಡುವ ಸಾಮರ್ಥ್ಯವನ್ನರಿತು (ಇತರರಿಗೆ) ದಾನಮಾಡಬೇಕು; ಅದು ಸಿರಿಯನ್ನು ಕಾದುಕೊಂಡು ಬಾಳುವ ಮಾರ್ಗವೆನಿಸುವುದು.

Tamil Transliteration
Aatrin Aravarindhu Eeka Adhuporul
Potri Vazhangu Neri.

Explanations
Holy Kural #478
ಬರುವ ಆದಾಯವು ಅಲ್ಪವಾಗಿದ್ದರೂ, ಮಾಡುವ ವ್ಯಯವು ಮಿತಿ ಮೀರದೆ ಇದ್ದರೆ, ಅದರಿಂದ ಕೇಡಿಲ್ಲ.

Tamil Transliteration
Aakaaru Alavitti Thaayinung Ketillai
Pokaaru Akalaak Katai.

Explanations
Holy Kural #479
ಮಿತಿಯರಿತು ಬಾಳದಿರುವವನ ಸೊತ್ತು, ಇರುವಂತೆ ತೋರಿ, ಕ್ರಮೇಣ ಇಲ್ಲವಾಗಿ ಕೆಡುತ್ತದೆ.

Tamil Transliteration
Alavara?ndhu Vaazhaadhaan Vaazhkkai Ulapola
Illaakith Thondraak Ketum.

Explanations
Holy Kural #480
ತನ್ನಲ್ಲಿರುವ ಸಿರಿಯ ಮಿತಿಯನ್ನು ಲೆಕ್ಕಿಸದೆ, ಊದಾರಗುಣದಿಂದ ವ್ಯಯಮಾಡಿದರೆ, ಆ ಸಿರಿಯು, ಅತಿ ವೇಗದಲ್ಲಿ ಕೆಡುತ್ತದೆ.

Tamil Transliteration
Ulavarai Thookkaadha Oppura Vaanmai
Valavarai Vallaik Ketum.

Explanations
🡱