ನೀಚರ ಸಹವಾಸ ಸೇರದಿರುವುದು
Verses
ನೀಚರ ಸಹವಾಸಕ್ಕೆ ಅಂಜುವುದು ದೊಡ್ಡವರ ಗುಣ; ಅಲ್ಪರಾದವರು ಮಾತ್ರ ನೀಚರ ಒಡನಾಟದಲ್ಲಿ ವಿಚಾರಮಾಡದೆ ತಮ್ಮನ್ನು ಒಪ್ಪಿಸಿಕೊಂಡು ಬಿಡುವರು
Tamil Transliteration
451 Sitrinam Anjum Perumai Sirumaidhaan
Sutramaach Choozhndhu Vitum.
ನೆಲದ ಗುಣದಿಂದ (ಹರಿಯುವ) ನೀರಿನ ಗುಣವೂ ಬದಲಾಗುತ್ತದೆ; ಅದೇ ರೀತಿ ಮನುಷ್ಯನ ತಿಳಿವಳಿಕೆ ಕೂಡ ಒಡನಾಟದ ಗುಣವನ್ನು ಹೊಂದಿಕೊಂಡಿರುತ್ತದೆ.
Tamil Transliteration
Nilaththiyalpaal Neerdhirin Thatraakum Maandharkku
Inaththiyalpa Thaakum Arivu.
ಮನುಷ್ಯರಿಗೆ ಸ್ವಾಭಾವಿಕವಾದ ತಿಳಿವಳಿಕೆ ಮನಸ್ಸಿನಿಂದ ಉಂಟಾಗುತ್ತದೆ; ಹಾಗೆಯೇ ‘ಅವನು ಇಂಥವನು’ ಎಂಬ ಮಾತು ಒಡನಾಟದಿಂದ ಕೇಳಿಬರುತ್ತದೆ.
Tamil Transliteration
Manaththaanaam Maandhark Kunarchchi Inaththaanaam
Innaan Enappatunj Chol.
ಮನುಷ್ಯನ ತಿಳಿವಳಿಕೆಯು ಅವನ ಮನಸ್ಸಿನ ಶಿಶುವೆಂದು ತೋರಿದರೂ ಅದು ವ್ಯಕ್ತವಾಗುವುದು ಅವನ ಒಡನಾಟದಿಂದಲೇ.
Tamil Transliteration
Manaththu Ladhupolak Kaatti Oruvarku
Inaththula Thaakum Arivu.
ಮನ:ಶುದ್ದಿ, ನಡೆವಳಿಕೆಯ ಶುದ್ದಿ ಇವೆರಡೂ ಒಡನಾಟದ ಶುದ್ದಿಯನ್ನು ಹೊಂದಿಕೊಂಡು ಬರುತ್ತವೆ.
Tamil Transliteration
Manandhooimai Seyvinai Thooimai Irantum
Inandhooimai Thoovaa Varum.
ಮನಶುದ್ದಿಯುಳ್ಳವರಿಗೆ ಕುಲಸಂಪನ್ನತೆಯೂ ಒಳ್ಳೆಯದಾಗಿಯೇ ಬರುವುದು; ಒಡನಾಟದ ಶುದ್ದಿಯುಳ್ಳವರಿಗೆ ಒಳ್ಳೆಯದಾಗದ ಕಾರ್ಯವೇ ಇಲ್ಲ.
Tamil Transliteration
Manandhooyaark Kechchamnan Raakum Inandhooyaarkku
Illainan Raakaa Vinai.
ಮನಃಶುದ್ದಿಯು ಬಾಳಿಗೆ ಸಿರಿಯಾಗಿ ನಿಲ್ಲುತ್ತದೆ; ಒಡನಾಟದ ಶುದ್ದಿಯು ಎಲ್ಲಾ ತರದ ಕೀರ್ತಿಗೂ ಕಾರಣವಾಗುತ್ತದೆ.
Tamil Transliteration
Mananalam Mannuyirk Kaakkam Inanalam
Ellaap Pukazhum Tharum.
ಸ್ವಾಭಾವಿಕವಾದ ಒಳ್ಲೆಯತನವಿದ್ದರೂ ಸಂಪನ್ನರಾದವರಿಗೆ ಒಳ್ಳೆಯ ಒಡನಾಟವು ಅದನ್ನು ಬಲಪಡಿಸುವ ಶಕ್ತಿಯಾಗಿ ನಿಲ್ಲುತ್ತದೆ.
Tamil Transliteration
Mananalam Nankutaiya Raayinum Saandrorkku
Inanalam Emaap Putaiththu.
ಒಳ್ಳೆಯ ಮನಸ್ಸಿನಿಂದ ಮರುಭವದಲ್ಲಿ ಸುಖ ಪ್ರಾಪ್ತಿಯಾಗುವುದು; ಒಳ್ಳೆಯ ಒಡನಾಟದಿಂದ ಅದು ಮತ್ತಷ್ಟು ಬಲಗೊಳ್ಳುವುದು.
Tamil Transliteration
Mananalaththin Aakum Marumaimar Raqdhum
Inanalaththin Emaap Putaiththu.
ಒಳ್ಳೆಯ ಒಡನಾಟಕ್ಕಿಂತ ಮಿಗಿಲಾದ ರಕ್ಷೆಯೂ ಇಲ್ಲ; ಕೆಟ್ಟ ಒಡನಾಟಕ್ಕಿಂತ ದುಃಖಕ್ಕೀಡು ಮಾಡುವ ಹಗೆಯೂ ಇಲ್ಲ.
Tamil Transliteration
Nallinaththi Noongun Thunaiyillai Theeyinaththin
Allar Patuppadhooum Il.