ಸಾಮರ್ಥ್ಯವುಳ್ಳವನಾಗಿರುವುದು

Verses

Holy Kural #591
ಸಾಮರ್ಥ್ಯವನ್ನು ಪಡೆದವನೇ ಉಳ್ಳವನು, ಅದಿಲ್ಲದೆ ಬಂದ ಸಿರಿ ಬೆಲೆಯಿಲ್ಲದ್ದು ಎನಿಸಿಕೊಳ್ಳುತ್ತದೆ.

Tamil Transliteration
Utaiyar Enappatuvadhu Ookkam Aqdhillaar
Utaiyadhu Utaiyaro Matru.

Explanations
Holy Kural #592
ಒಬ್ಬನಿಗೆ ಸಾಮರ್ಥ್ಯ ಹೊಂದಿರುವುದೇ (ನೆಲೆಯಾದ) ಸೊತ್ತು, (ಮತ್ತುಳಿದ) ವಸ್ತುಗಳು ನೆಲೆಯಾಗಿ ನಿಲ್ಲದೆ ನಾಶವಾಗುತ್ತವೆ.

Tamil Transliteration
Ullam Utaimai Utaimai Porulutaimai
Nillaadhu Neengi Vitum.

Explanations
Holy Kural #593
ಸಾಮರ್ಥ್ಯವನ್ನು ದೃಢವಾಗಿ ತಮ್ಮ ಕೈಯಲ್ಲುಳ್ಳವರು 'ಸಿರಿಯನ್ನು ಕಳೆದುಕೊಂಡೆ' ಎಂದು ವ್ಯಸನಪಡುವುದಿಲ್ಲ.

Tamil Transliteration
Aakkam Izhandhemendru Allaavaar Ookkam
Oruvandham Kaiththutai Yaar.

Explanations
Holy Kural #594
ಸೋಲದ ಸಾಮರ್ಥ್ಯವನ್ನು ಉಳ್ಳವನ ಬಳಿಗೆ ಸಿರಿಯ ತಾನೇ ಹಾದಿ ಕೇಳಿಕೊಂಡು ಹೋಗಿ ಸೇರುತ್ತದೆ.

Tamil Transliteration
Aakkam Adharvinaaich Chellum Asaivilaa
Ookka Mutaiyaa Nuzhai.

Explanations
Holy Kural #595
ನೀರಿನಲ್ಲಿ ಬೆಳೆಯುವ ಹೂವುಗಳ ಕಾಂಡಗಳ ನೀಳವು, ಆ ನೀರಿನ ಆಳಕ್ಕೆ ಅನುಗುಣವಾಗಿರುತ್ತದೆ; ಮನುಷ್ಯರ ಹಿರಿಮೆ ಅಳವು ಕೂಡ ಅವರ
ಸಾಮರ್ಥ್ಯದ ಆಳಕ್ಕೆ ಅನುಗುಣವಾಗಿರುತ್ತದೆ.

Tamil Transliteration
Vellath Thanaiya Malarneettam Maandhardham
Ullath Thanaiyadhu Uyarvu.

Explanations
Holy Kural #596
(ಅರಸನಾದವನು) ಆಲೋಚಿಸುವಾಗಲೆಲ್ಲಾ ಹಿರಿಮೆಯನ್ನೇ ಕುರಿತು ಆಲೋಚಿಸಬೇಕು. ಹಿರಿಮೆ ಕೈಗೊಡದಿದ್ದರೂ ಆ ಚಿಂತನೆಯಿಂದಲೇ
ಕೈಗೊಡಿದ ಸುಖ ದೊರೆಯುವುದು.

Tamil Transliteration
Ulluva Thellaam Uyarvullal Matradhu
Thallinun Thallaamai Neerththu.

Explanations
Holy Kural #597
ಒಡಲನ್ನು ಪೂದೆ ಅಂಬುಗಳಿಂದ (ಮಳೆಗರೆದು) ಗಾಯಗೊಳಿಸಿ ಅಚೇತನಗೊಳಿಸಿದರೂ ಆನೆ ತನ್ನ ಧೈರ್ಯದ ನಿಲುವನ್ನು ತಾಳಿಕೊಂಡೇ
ಇರುತ್ತದೆ; ಅದೇ ರೀತಿ ಸಾಮರ್ಥ್ಯವುಳ್ಳವರು ಎಲ್ಲ ಕಳೆದುಕೊಂಡರೂ ಅಧೀರರಾಗುವುದಿಲ್ಲ.

Tamil Transliteration
Sidhaivitaththu Olkaar Uravor Pudhaiyampir
Pattuppaa Toondrung Kaliru.

Explanations
Holy Kural #598
ಮನಸ್ಸಿನಲ್ಲಿ ಸಾಮರ್ಥ್ಯವಿಲ್ಲದವರು "ಈ ಲೋಕದಲ್ಲಿ ನಾನು ಉದಾರಿ" ಎಂದು ತಮ್ಮಲ್ಲಿ ತಾವು ಹೇಳಿಕೊಂಡು ಸಂತೋಷಪಡುವ
ಭಾಗ್ಯ ಪಡೆಯಲಾರರು.

Tamil Transliteration
Ullam Ilaadhavar Eydhaar Ulakaththu
Valliyam Ennunj Cherukku.

Explanations
Holy Kural #599
ದೊಡ್ಡ ಶರೀರ, ಕೂರಾದ ಕೊಂಬುಗಳು ಇದ್ದರೂ ಆನೆ, ಹುಲಿಯನ್ನು ಎದುರಿಸುವಾಗ ಭಯಪಡುತ್ತದೆ.

Tamil Transliteration
Pariyadhu Koorngottadhu Aayinum Yaanai
Veruum Pulidhaak Kurin.

Explanations
Holy Kural #600
ಒಬ್ಬನಿಗೆ ಸಾಮರ್ಥ್ಯವೆಂಬುದು ಮಾನಸಿಕ ಸಂಪತ್ತು; ಅದಿಲ್ಲದವರು; ಅದಿಲ್ಲದವರು ಮನುಷ್ಯರ ರೂಪದಲ್ಲಿರುವ ಮರಗಳೇ ವಿನಾ
ಬೇರೆ ಅಲ್ಲ.

Tamil Transliteration
Uramoruvarku Ulla Verukkaiaq Thillaar
Marammakka Laadhale Veru.

Explanations
🡱