ಸಭಾ ಪರಿಜ್ಞಾನ

Verses

Holy Kural #711
ಮಾತುಗಳ ಜೋಡಣೆಯನ್ನು ಅರಿತ ಶುದ್ದವಾದ ತಿಳುವಳಿಕೆಯುಳ್ಳವರು ಸಭೆಯ ಸ್ವಭಾವವನ್ನು ಅರಿತು ವಿಚಾರಮಾಡಿ ಮಾತನಾಡಲಿ.

Tamil Transliteration
Avaiyarinadhu Aaraaindhu Solluka Sollin
Thokaiyarindha Thooimai Yavar.

Explanations
Holy Kural #712
ಮಾತಿನ ನಡಾವಳಿಯನ್ನು ಅರಿತ ಒಳ್ಳೆಯ ಗುಣಶಾಲಿಗಳು (ಸಭೆಯ) ಅವಕಾಶವನ್ನು ತಿಳಿದುಕೊಂಡು ಚೆನ್ನಾಗಿ ಗ್ರಹಿಸಿ ಮಾತನಾಡಲಿ

Tamil Transliteration
Itaidherindhu Nankunarndhu Solluka Sollin
Nataidherindha Nanmai Yavar.

Explanations
Holy Kural #713
ಸಭಾ ತಿಳುವಳಿಕೆಯಿಲ್ಲದೆ ಮಾತನಾಡಲು ತೊಡಗುವವರು ಮಾತಿನ ಬಗೆಯನ್ನು ಅರಿಯದವರು; ಅವರಲ್ಲಿ ವಿದ್ಯೆಯ ಬಲಿಮೆಯೂ
ಇರುವುದಿಲ್ಲ.

Tamil Transliteration
Avaiyariyaar Sollalmer Kolpavar Sollin
Vakaiyariyaar Valladhooum Il.

Explanations
Holy Kural #714
ಜ್ಞಾನಿಗಳ ಸಭೆಯ ಮುಂದೆ ಜ್ಞಾನಿಗಳಂತೆಯೇ ವರ್ತಿಸಬೇಕು. ಮೂರ್ಖರ (ಬೆಳ್ಳಕ್ಕರಿಗರ) ಮುಂದೆ, ಬೆಪ್ಪುತನವನ್ನು ತೋರಿಸಬೇಕು.

Tamil Transliteration
Oliyaarmun Olliya Raadhal Veliyaarmun
Vaansudhai Vannam Kolal.

Explanations
Holy Kural #715
ಒಳ್ಳೆಯದೆಂದು ಹೇಳಲ್ಪಡುವ ಎಲ್ಲಾ ಗುಣಗಳಲ್ಲೂ ಮಿಗಿಲಾದುದು ಬಲ್ಲವರ ಸಭೆಯಲ್ಲಿ ಮುಂದಾಗಿ ಹೋಗಿ ಮಾತನಾಡದಿರುವ
ವಿನೀತಗುಣವೇ.

Tamil Transliteration
Nandrendra Vatrullum Nandre Mudhuvarul
Mundhu Kilavaach Cherivu.

Explanations
Holy Kural #716
ಬಹುಮುಖ ಜ್ಞಾನವನ್ನು ಸಂಪಾದಿಸಿ ಚಿಂತಿಸುವವರ ಸಭೆಯಲ್ಲಿ ತಪ್ಪುಮಾಡುವುದು, ಒಳ್ಳೆಯ ಮಾರ್ಗದಲ್ಲಿ ನಡೆದು ಬಂದು
ಇದ್ದಕ್ಕದ್ದಂತೆ, ನೆಲೆತಪ್ಪಿ ಕುಸಿದ ಹಾಗೆ.

Tamil Transliteration
Aatrin Nilaidhalarn Thatre Viyanpulam
Etrunarvaar Munnar Izhukku.

Explanations
Holy Kural #717
ದೋಷಮುಕ್ತವಾದ ಮಾತುಗಳನ್ನು ಅರಿಯಬಲ್ಲ. ಬಲ್ಲವರ ಸಭೆಯಲ್ಲಿ ಹಲವು ವಿದೈಯರಿತವರ ಜ್ಞಾನವು ಚೆನ್ನಗಿ ಪ್ರಕಾಶಕ್ಕೆ
ಬರುವುದು.

Tamil Transliteration
Katrarindhaar Kalvi Vilangum Kasatarach
Choldheridhal Vallaar Akaththu.

Explanations
Holy Kural #718
ತಾವು ತಿಳಿಯಬಲ್ಲ ಸಾಮರ್ಥ್ಯವುಳ್ಳವರ ಮುಂದೆ, ಹೇಳುವುದು, ಸ್ವಾಭಾವಿಕವಾಗಿ ಬೆಳೆಯುವ ಸಸಿಯ ಪಾತಿಯಲ್ಲಿ ನೀರನ್ನು
ಸುರಿದಂತೆ.

Tamil Transliteration
Unarva Thutaiyaarmun Sollal Valarvadhan
Paaththiyul Neersorin Thatru.

Explanations
Holy Kural #719
ಒಳ್ಳೆಯ ಅರಿತವರ ಸಭೆಯಲ್ಲಿ ಚೆನ್ನಾಗಿ ಮನ ಮುಟ್ಟುವಂತೆ ಮಾತನಾಡಬಲ್ಲ ಸಾಮರ್ಥ್ಯವುಳ್ಳವರು, ಅರಿವಿಲ್ಲದವರ ಕೂಟದಲ್ಲಿ
ಮರೆತಾದರೂ ಮಾತನಾಡಬಾರದು.

Tamil Transliteration
Pullavaiyul Pochchaandhum Sollarka Nallavaiyul
Nankusalach Chollu Vaar.

Explanations
Holy Kural #720
ತನಗೆ ಹಿತವರಲ್ಲದವರ ಮುಂದೆ, ಗೋಷ್ಠಿಯಲ್ಲಿ ಪಾಲ್ಗೊಳ್ಳುವುದು, ಅಂಗಳದಲ್ಲಿ ಅಮೃತವನ್ನು ಚೆಲ್ಲಿದಂತೆ. (ವ್ಯರ್ಥ).

Tamil Transliteration
Anganaththul Ukka Amizhdhatraal Thanganaththaar
Allaarmun Kotti Kolal.

Explanations
🡱