ಸಭಾ ಕಂಪನವಿಲ್ಲದಿರುದು
Verses
ಮಾತಿನ ಜೋಡಣೆಯನ್ನು ಅರಿತ ಪರಿಶುದ್ಧವಾದ ನಡೆಯುಳ್ಳವರು, ಸಭೆಯ ರೀತಿಯನ್ನು ಅರಿತವರಾಗಿ, ಬಲ್ಲವರ ಸಭೆಯಲ್ಲಿ
(ಭೀತಿಯಿಂದ) ಬಾಯಿತಪ್ಪಿ ತಪ್ಪಾಗಿ ಮಾತನಾಡಲಾರರು.
Tamil Transliteration
Vakaiyarindhu Vallavai Vaaisoraar Sollin
Thokaiyarindha Thooimai Yavar.
ಕಲಿತವರ (ವಿದ್ವಾಂಸರ) ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಬಲ್ಲದವರು, ಜ್ಞಾನಿಗಳಲ್ಲಿ ಜ್ಞಾನಿಗಳೆಂದು
ಕರಯಲ್ಪಡುವರು.
Tamil Transliteration
Katraarul Katraar Enappatuvar Katraarmun
Katra Selachchollu Vaar.
ಯುದ್ಧ ರಂಗದಲ್ಲಿ ಧೈರ್ಯದಿಂದ ಹೋರಾಡಿ ಸಾಯುವವರು (ಲೋಕದಲ್ಲಿ) ಹಲವು ಮುಂದಿ ಇದ್ದಾರೆ; (ಆದರೆ) ಅರಿತವರ
ಸಭಯಲ್ಲಿ ಅಂಜದೆ ಮಾತನಾಡಬಲ್ಲವರು ಕೆಲವೇ ಮುಂದಿ.
Tamil Transliteration
Pakaiyakaththuch Chaavaar Eliyar Ariyar
Avaiyakaththu Anjaa Thavar.
ಕಲಿತವರ ಮುಂದೆ ತಾವು ಕಲಿತುದನ್ನು ಮನಮುಟ್ಟುವಂತೆ ಹೇಳಿ, ಅಪಾರವಾಗಿ ಕಲಿತವರಿಂದ ಮಿಗಿಲಾಗಿ ಜ್ಞಾನವನ್ನು ಕೇಳಿ
ತಿಳಿದುಕೊಳ್ಳಬೇಕು.
Tamil Transliteration
Katraarmun Katra Selachchollith Thaamkatra
Mikkaarul Mikka Kolal.
ಬೇರೆ ಅರಸರ ಸಭಯಲ್ಲಿ ಸಭಾಭೀತಿಯಿಲ್ಲದ ಸಮರ್ಪಕವಾದ ಉತ್ತರ ನೀಡಲು, ಯೋಗ್ಯವೆನಿಸಿದ ತರ್ಕ ಗ್ರಂಥಗಳನ್ನು ಅರಿತು ಅಭ್ಯಾಸ
ಮಾಡಬೇಕು.
Tamil Transliteration
Aatrin Alavarindhu Karka Avaiyanjaa
Maatrang Kotuththar Poruttu.
ವೀರೋಚಿತವಾಗ ದೃಷ್ಟಿಯುಳ್ಲವರಲ್ಲದವರಿಗೆ ಕತ್ತಿಯೊಡನೆ ಏನು ಸಂಬಂಧ? ಸೂಕ್ಷ್ಮಮತಿಗಳ ಸಭೆಗೆ ಅಂಜುವವರಿಗೆ, ಶಾಸ್ತ್ರ
ಗ್ರಂಥಗಳೊಡನೆ ಏನು ನಂಟು?
Tamil Transliteration
Vaaloten Vankannar Allaarkku Nooloten
Nunnavai Anju Pavarkku.
(ಅರಿತವರ) ಸಭಯಲ್ಲಿ ಅಂಜುವವನ ಶಾಸ್ತ್ರಜ್ಞಾನವು, ಹಗೆಯೊಡನೆ ಹೋರಾಟ ನಡೆಸಲು ಹೋದ ಹೇಡಿಯ ಕೈಯಾಳಗಿನ ಕೂರಲಗಿನಂತೆ.
Tamil Transliteration
Pakaiyakaththup Petikai Olvaal Avaiyakaththu
Anju Mavankatra Nool.
ಚೆನ್ನಾಗಿ ಅರಿತವರ ಸಭಯಲ್ಲಿ ಒಳ್ಳೆಯ ವಿಷಯಗಳನ್ನು (ಕೇಳುವವರ) ಮನಮುಟ್ಟುವಂತೆ ಹೇಳಲಾರದವರು, ಹಲವು ವಿಷಯಗಳನ್ನು
ಕಲಿತೂ ಪ್ರಯೋಜನವಿಲ್ಲದವರೇ (ಆಗುತ್ತಾರೆ).
Tamil Transliteration
Pallavai Katrum Payamilare Nallavaiyul
Nanku Selachchollaa Thaar.
ಶಾಸ್ತ್ರಗ್ರಂಥಗಳನ್ನು ಓದಿಬಲ್ಲವರಾದರೂ, ಚೆನ್ನಾಗಿ ಬಲ್ಲವರ ಸಭೆಯಲ್ಲಿ (ಮಾತನಾಡಲು) ಹೆದುರುವವರು, ಕಲಿಯದವರಿಗಿಂತ, ಕಡೆ
ಎಂದೆಣಿಸಲ್ಪಡುವರು.
Tamil Transliteration
Kallaa Thavarin Kataiyenpa Katrarindhum
Nallaa Ravaiyanju Vaar.
ಸಭೆಗೆ ಅಂಜಿ ಮನಮುಟ್ಟುವಂತೆ ಹೇಳಲು ಅಶಕ್ತರಾದವರು, ಬದುಕ್ಕಿದ್ದೂ ಸತ್ತವರ ಸಮಾನರು.
Tamil Transliteration
Ulareninum Illaarotu Oppar Kalananjik
Katra Selachchollaa Thaar.