ಸಂಕೇತ ಪ್ರಜ್ಞೆ
Verses
ಅರಸನ ಅಭಿಪ್ರಾಯವನ್ನು, ಅವರು ವ್ಯಕ್ತಪಡಿಸದೆಯೇ ಮುಖಭಾವದಿಂದಲೇ ಸಂಕೇತವನ್ನು ಗ್ರಹಿಸುವವನು, ಲೋಕಕ್ಕೆ
ಅಲಂಕಾರವಿದ್ದಂತೆ.
Tamil Transliteration
701 Kooraamai Nokkake Kuripparivaan Egngnaandrum
Maaraaneer Vaiyak Kani.
(ಯಾವ ರೀತಿಯ) ಸಂಶಯಕ್ಕೂಳಗಾಗದೆ, ಒಬ್ಬರ ಮನಸ್ಸಿನಲ್ಲಿರುವುದನ್ನು ಗ್ರಹಿಸಬಲ್ಲವನನ್ನು ದೈವಕ್ಕೆ ಸಮಾನವೆಂದೆಣಿಸಬೇಕು.
Tamil Transliteration
Aiyap Pataaadhu Akaththadhu Unarvaanaith
Theyvaththo Toppak Kolal.
ಮುಖಕಣ್ಣುಗಳ ಇಂಗಿತದಿಂದಲೇ ಮನಸ್ಸನ್ನು ತಿಳಿಯಬಲ್ಲವರನ್ನು (ಅರಸನು) ತನ್ನ ಸೊತ್ತಿನಲ್ಲಿ ಏನನ್ನಾದರೂ ಕೊಟ್ಟು
ಪಡೆದುಕೊಳ್ಳಬೇಕು.
Tamil Transliteration
Kurippir Kurippunar Vaarai Uruppinul
Yaadhu Kotuththum Kolal.
ಒಬ್ಬರ ಮ್ನಸ್ಸಿನ ಇಂಗಿತವನ್ನು ಹೇಳದೆಯೇ ತಿಳಿದುಕೊಳ್ಳಬಲ್ಲವರನ್ನು ಉಳಿದವರೊಡನೆ ಹೋಲಿಸಿದಾಗ, ಶರೀರಧಾರಣೆಯಲ್ಲಿ
ಸಮಾನರಾಗಿ ಕಂಡರೂ, ಅರಿವಿನಲ್ಲ ಅವರು ಬೇರೆಯೇ.
Tamil Transliteration
Kuriththadhu Kooraamaik Kolvaaro Tenai
Uruppo Ranaiyaraal Veru.
ಬರಿಯ ಇಂಗಿತ ಮಾತ್ರದಿಂದಲೇ, ಸೂಚನೆಯನ್ನು ಗ್ರಹಿಸದಿದ್ದ ಮೇಲೆ ಕಣ್ಣುಗಳು ದೇಹದಲ್ಲಿ ಇದ್ದೂ ಏನು ಪ್ರಯೋಜನ?
Tamil Transliteration
Kurippir Kurippunaraa Vaayin Uruppinul
Enna Payaththavo Kan?.
ತನ್ನ ಹತ್ತಿರದಲ್ಲಿರುವ ವಸ್ತುಗಳನ್ನು ಕನ್ನಡಿಯು ತೋರಿಸುವಂತೆ, (ಒಬ್ಬನ) ಮನಸ್ಸಿನಾಳದೊಳಗಿರುವುದನ್ನು (ಅವನ) ಮುಖವು
ತೋರಿಸುತ್ತದೆ.
Tamil Transliteration
Atuththadhu Kaattum Palingupol Nenjam
Katuththadhu Kaattum Mukam.
ಮುಖಕ್ಕಿಂತ ಮಿಗಿಲಾದ ಅರಿವುಳ್ಳದು ಉಂಟೆ? ಅದು, ಒಬ್ಬನು ಸಂತೋಷಿಸಲಿ, ಕೋಪಿಸಲಿ, ಅದನ್ನು ಮುಂದಾಗಿಯೇ ಒರೆಯುತ್ತದೆ.
Tamil Transliteration
Mukaththin Mudhukkuraindhadhu Unto Uvappinum
Kaayinum Thaanmun Thurum.
(ಅರಸನಾದವನು) ತನ್ನ ಮನಸ್ಸಿನ ಒಳಹೊಕ್ಕು ಅರಿತು ಹೇಳಬಲ್ಲವರನ್ನು ಪಡೆದಿದ್ದಲ್ಲಿ, ಅವರ ಮುಂದೆ ಸುಮ್ಮನೆ ಮುಖವನ್ನು
ನೋಡುತ್ತ (ಏನೊಂದೂ ಹೇಳದೆ) ನಿಂತರ ಸಾಕು.
Tamil Transliteration
Mukamnokki Nirka Amaiyum Akamnokki
Utra Thunarvaarp Perin.
ಕಣ್ಣಿನ ಭಾವಭೇದಗಳನ್ನು ಗ್ರಹಿಸಬಲ್ಲವನನ್ನು (ಅರಸನು) ಮಣ್ತ್ರಿಯಾಗಿ ಪಡೆದಿದ್ದಲ್ಲ, (ವಿರೋಧಿಗಳ ಮನಸ್ಸಿನಲ್ಲಿರುವ)
ಹಗೆತನವನ್ನು, ಕೆಳೆತನವನ್ನು ಅವನಿಗೆ ಅವರ ಕಣ್ಣುಗಳೇ ಹೇಳಿ ಬಿಡುತ್ತವೆ.
Tamil Transliteration
Pakaimaiyum Kenmaiyum Kannuraikkum Kannin
Vakaimai Unarvaarp Perin.
'ತಾನು ಸೂಕ್ಷ್ಮಮತಿ' ಎಂದು ಹೇಳುವ ಮಂತ್ರಿಗಳ ಅಳತೆಗೋಲು, ವಿಚಾರ ಮಾಡಿ ನೋಡಿದಲ್ಲಿ ಅವರ ಕಣ್ಣುಗಳಲ್ಲದೆ ಬೇರೆಯಲ್ಲ.
Tamil Transliteration
Nunniyam Enpaar Alakkungol Kaanungaal
Kannalladhu Illai Pira.