ಶಿಕ್ಷಣ

Verses

Holy Kural #391
ಕಲಿಯಬೇಕಾದ ಯೋಗ್ಯತೆಯುಳ್ಳ ಕಲಿಕೆಯನ್ನು ದೋಷವಿಲ್ಲದೆ ಕಲಿಯ ಬೇಕು. ಕಲಿತ ನಂತರ ಕಲಿತ ವಿದ್ಯೆಗೆ ತಕ್ಕದಾದ ಮಾರ್ಗದಲ್ಲಿ ನಿಲ್ಲಬೇಕು.

Tamil Transliteration
Karka Kasatarak Karpavai Katrapin
Nirka Adharkuth Thaka.

Explanations
Holy Kural #392
ಗಣಿತ ಮತ್ತು ಅಕ್ಷರಗಳು ಇವೆರಡೂ (ಕಲೆಗಳೂ) ಮನುಷ್ಯನ ಬಾಳಿಗೆ ಕಣ್ಣುಗಳಿದ್ದಂತೆ ಎಂದು ಹೇಳುವರು.

Tamil Transliteration
Ennenpa Enai Ezhuththenpa Ivvirantum
Kannenpa Vaazhum Uyirkku.

Explanations
Holy Kural #393
ಕಲಿತವರೇ ಕಣ್ಣುಳ್ಳವರು; ಕಲಿಯದವರ ಮುಖದಲ್ಲಿರುವ ಎರಡು ಕಣ್ಣುಗಳೂ ಹುಣ್ಣಿದ್ದಂತೆ.

Tamil Transliteration
Kannutaiyar Enpavar Katror Mukaththirantu
Punnutaiyar Kallaa Thavar.

Explanations
Holy Kural #394
ಬೆರೆತಾಗ ಸಂತೋಷ ತರುವುದು, ಅಗಲಿದಾಗ ನೆನೆಯುವಂತೆ ಮಾಡುವುದು ಇದೇ ವಿದ್ವಜ್ಜನರ ಕಲೆ.

Tamil Transliteration
Uvappath Thalaikkooti Ullap Piridhal
Anaiththe Pulavar Thozhil.

Explanations
Holy Kural #395
ಐಶ್ವರ್ಯವಂತರ ಮುಂದೆ ಇಲ್ಲದವರು ನಿಲ್ಲುವಂತೆ, ಕಲಿತವರ ಮುಂದೆ ದೈನ್ಯದಿಂದ ಬಾಗಿನಿಂತು ಕಲಿತವರೇ ಶ್ರೇಷ್ಠರು; ಹಾಗೆ ಕಲಿಯದವರು ಕೀಳು ಜನರು.

Tamil Transliteration
Utaiyaarmun Illaarpol Ekkatrung Katraar
Kataiyare Kallaa Thavar.

Explanations
Holy Kural #396
ಮಳಲು ತೋಡಿದ ಪ್ರಮಾಣಕ್ಕೆ ಬಾವಿಯಲ್ಲಿ ನೀರು ತುಂಬುವಂತೆ ಮನುಷ್ಯರು ಕಲಿತ ವಿದ್ಯೆಯ ಪ್ರಮಾಣಕ್ಕೆ ಅರಿದು ಸಂಪಾದಿಸುತ್ತಾರೆ

Tamil Transliteration
Thottanaith Thoorum Manarkeni Maandharkkuk
Katranaith Thoorum Arivu.

Explanations
Holy Kural #397
ಕಲಿತವನಿಗೆ ಯಾವ ದೇಶವೇ ಆಗಲಿ, ಊರೇ ಆಗಲಿ, ತನ್ನ ದೇಶ, ಊರು ಎಂದಾಗುತ್ತದೆ. ಹಾಗಿರುವಾಗ ಸಾಯುವವರೆಗೂ ಒಬ್ಬನು ಕಲಿಯದೆ ಕಾಲಹರಣ ಮಾಡುವುದೇಕೆ?

Tamil Transliteration
Yaadhaanum Naataamaal Ooraamaal Ennoruvan
Saandhunaiyung Kallaadha Vaaru.

Explanations
Holy Kural #398
ಒಂದು ಜನ್ಮದಲ್ಲಿ ತಾನು ಕಲಿತ ವಿದ್ಯೆ, ಏಳು ಜನ್ಮಗಳಲ್ಲಿಯೂ ತನ್ನ ನೆರವಿಗೆ ಬರುವುದು.

Tamil Transliteration
Orumaikkan Thaan Katra Kalvi Oruvarku
Ezhumaiyum Emaap Putaiththu.

Explanations
Holy Kural #399
ತಾವು ಸಂತೋಷಪ್ಪಡುವುದಕ್ಕೆ ಕಾರಣವಾದ ವಿದ್ಯೆಯಿಂದ ಲೋಕವೂ ಸಂತೋಷಪ್ಪಡುವುದನ್ನು ಕಂಡು ವಿದ್ಯಾವಂತರು ಮತ್ತೆ ಮತ್ತೆ ಆ ವಿದ್ಯಯನ್ನು ಕಲಿಯಲು ಬಯಸುವರು.

Tamil Transliteration
399 Thaamin Puruvadhu Ulakin Purak Kantu
Kaamuruvar Katrarin Thaar.

Explanations
Holy Kural #400
ಒಬ್ಬನಿಗೆ ಕೇಡಿಲ್ಲದ ಸಿರಿಯೆಂದರೆ ವಿದ್ಯೆಯೇ; ಮತ್ತಾವುದೂ ಸಿರಿಯಲ್ಲ.

Tamil Transliteration
Ketil Vizhuchchelvam Kalvi Yoruvarku
Maatalla Matrai Yavai.

Explanations
🡱