ಅರಸನ ಹಿರಿಮೆ
Verses
ಪಡೆ, ಜನತೆ, ಸಂಪತ್ತು, ಮಂತ್ರಿ, ಕೆಳೆ ಮತ್ತು ಕೋಟೆ ಎಂಬ ಆರು ಅಂಗಗಳನ್ನು ಉಳ್ಳವನು ಅರಸರಲ್ಲಿ ಪುರುಷ ಸಿಂಹವೆಂದು ಕರೆಸಿಕೊಳ್ಳುತ್ತಾನೆ.
Tamil Transliteration
Pataikuti Koozhamaichchu Natparan Aarum
Utaiyaan Arasarul Eru.
ಧೈರ್ಯ, ದಾನ, ಜ್ಞಾನ ಮತ್ತು ಪ್ರಯತ್ನ- ಈ ನಾಲ್ಕು ಗುಣಗಳಲ್ಲಿ ಯಾವಾಗಲೂ ಸೋಲದೆ ನಿರಂತರವಾಗಿರುವುದೇ ಅರಸನ ಗುಣಗಳೆನಿಸುವುದು.
Tamil Transliteration
Anjaamai Eekai Arivookkam Innaankum
Enjaamai Vendhark Kiyalpu.
(ಸದಾ) ಎಚ್ಚರ, ವಿದ್ಯೆ ಮತ್ತು ಪರಾಕ್ರಮ ಇವು ಮೂರೂ ನೆಲವಾಳುವವನನ್ನು ಬಿಟ್ಟು ಹೋಗಬಾರದು.
Tamil Transliteration
383 Thoongaamai Kalvi Thunivutaimai Immoondrum
Neengaa Nilanaan Pavarkku.
ಧರ್ಮವನ್ನು ಬಿಡದೆ ಧರ್ಮ ವಲ್ಲದುದನ್ನು ನೀಗಿ, ಪರಾಕ್ರಮದಲ್ಲಿ ಕುಗ್ಗದೆ ಅಭಿಮಾನ ಧನನಾಗಿರುವವನೇ ಅರಸು.
Tamil Transliteration
Aranizhukkaa Thallavai Neekki Maranizhukkaa
Maanam Utaiya Tharasu.
(ಐಶ್ವರ್ಯವನ್ನು) ಸಂಪಾದಿಸಿ, ಸೇರಿಸಿಟ್ಟು ಕಾಪಾಡಿ (ಸಮನಾಗಿ) ಹಂಚಲು ಬಲ್ಲವನೇ ಅರಸು.
Tamil Transliteration
Iyatralum Eettalung Kaaththalum Kaaththa
Vakuththalum Valla Tharasu.
ಕಾಣಲು ಸುಲಭನಾಗಿ, ಕಡುನುಡಿಗಳನ್ನು ಆಡದವನಾಗಿದ್ದರೆ, ಆ ಅರಸನ ಆಳ್ವಿಕೆಗೊಳಪಟ್ಟ ನಾಡನ್ನು ಲೋಕವೇ ಹೊಗಳುವುದು.
Tamil Transliteration
Kaatchik Keliyan Katunjollan Allanel
Meekkoorum Mannan Nilam.
ಇನಿದಾದ ಮಾತುಗಳಿಂದ (ತಕ್ಕವರಿಗೆ) (ವಸ್ತುಗಳನ್ನು) ಉದಾರವಾಗಿ ಕೊಟ್ಟು ಕಾಪಾಡಬಲ್ಲ ಅರಸನಿಗೆ ಈ ಲೋಕವು ವಿಧೇಯವಾಗಿ, ಅವನು ಹೇಳಿದಂತೆ ನಡೆದುಕೊಳ್ಳುತ್ತದೆ.
Tamil Transliteration
Insolaal Eeththalikka Vallaarkkuth Thansolaal
Thaankan Tanaiththiv Vulaku.
(ತನ್ನ ಜನರಿಗೆ) ನ್ಯಾಯ ನೀಡಿ, ಕಾಪಾಡುವ ಅರಸನನ್ನು ಜನರು (ಪ್ರತ್ಯಕ್ಷ) ದೇವರೆಂದು ಗೌರವಿಸುವರು.
Tamil Transliteration
Muraiseydhu Kaappaatrum Mannavan Makkatku
Iraiyendru Vaikkap Patum.
(ದೊರುವವರ) ಕಹಿ ಮಾತುಗಳನ್ನು ಕಿವಿಯಲ್ಲಿ ಕೇಳಿ ತಾಳಿಕೊಳ್ಳುವ ಗುಣವುಳ್ಳ ಅರಸನ ಕೃಪಾ ಛತ್ರದಡಿಯ ನೆರಳಲ್ಲಿ ಲೋಕವೇ ತಂಗುತ್ತದೆ.
Tamil Transliteration
Sevikaippach Chorporukkum Panputai Vendhan
Kavikaikkeezhth Thangum Ulaku.
ಕೊಡುವಿಕೆ (ದಾನ), ಅನುಗ್ರಹ, ಸಮನ್ಯಾಯ, ಆಶ್ರಿತ ಜನರ ರಕ್ಷಣೆ ಈ ನಾಲ್ಕು (ಗುಣಗಳನ್ನು) ಉಳ್ಳ ಅರಸನು ಅರಸರಿಗೆಲ್ಲಾ ಬೆಳಕಿನಂತೆ ಇರುವನು.
Tamil Transliteration
Kotaiyali Sengol Kutiyompal Naankum
Utaiyaanaam Vendhark Koli.