ಅವಿದ್ಯೆ
Verses
ಜ್ಞಾನವೃದ್ದಿಗೆ ಕಾರಣವಾದ ಗ್ರಂಥಗಳನ್ನು ಓದದೆ ಕಲಿತವರ ಸಭೆಯಲ್ಲಿ ಮಾತನಾಡುವುದು, ಚದುರಂಗದ ಮನೆಯಿಲ್ಲದೆ ಪಗಡೆಯಾಡಿದಂತೆ.
Tamil Transliteration
Arangindri Vattaati Yatre Nirampiya
Noolindrik Kotti Kolal.
ಕಲಿಯದವನು ಕಲಿತವರ ಸಭೆಯಲ್ಲಿ ಮಾತನಾಡಬಯಸುವುದು ಮೊಲೆಗಳೆರಡೂ ಇಲ್ಲದ ಹೆಣ್ಣು, ತನ್ನ ಹೆಣ್ತನದ ಬಯುಕೆಯನ್ನು ತೀರಿಸಿಕೊಳ್ಳಲು ವ್ಯಕ್ತ ಪಡಿಸಿದಂತೆ.
Tamil Transliteration
Kallaadhaan Sorkaa Murudhal Mulaiyirantum
Illaadhaal Penkaamur Ratru.
ಕಲಿತವರ ಮುಂದೆ ಮಾತನಾಡದೆ ಸುಮ್ಮನಿದ್ದರೆ ಕಲಿಯದವರೂ ಬಹಳ ಒಳ್ಳೆಯವರೇ ಎನಿಸಿಕೊಳ್ಳುತ್ತಾರೆ.
Tamil Transliteration
Kallaa Thavarum Naninallar Katraarmun
Sollaa Thirukkap Perin.
ಕಲಿಯದವನ ಅರಿವು ಬಹಳ ಉತ್ತಮವಾಗಿದ್ದರೂ ಜ್ಞಾನಿಗಳು (ಅದನ್ನು) ಒಪ್ಪಿಕೊಳ್ಳುವುದಿಲ್ಲ.
Tamil Transliteration
Kallaadhaan Otpam Kazhiyanan Raayinum
Kollaar Arivutai Yaar.
ಕಲಿಯದವನೊಬ್ಬನ ಯೋಗ್ಯತೆಯು, ಕಲಿತವರ ಸಭೆಯಲ್ಲಿ ಮಾತಾಡುವಾಗ ಬಾಡಿಹೋಗಿ ಕೆಡುತ್ತದೆ.
Tamil Transliteration
Kallaa Oruvan Thakaimai Thalaippeydhu
Sollaatach Chorvu Patum.
ಕಲಿಯದವರು ಉಸಿರೊಂದಿಗೆ ಬದುಕ್ಕಿದ್ದರೂ ಫಲ ಬಿಡದ ಬರಡು ನೆಲಕು ಸಮಾನರು.
Tamil Transliteration
Ularennum Maaththiraiyar Allaal Payavaak
Kalaranaiyar Kallaa Thavar.
ನಯವೂ, ಗಾಂಭೀರ್ಯವೂ, ಸೂಕ್ಷ್ಮವಾದ ಅರಿವೂ ಇಲ್ಲದವನ ಚೆಲುವು ಮತ್ತು ಒಳ್ಳೆಯತನಗಳು ಮಣ್ಣಿಂದ ಮಾಡಿ ಸುಂದರವಾಗಿ ಅಲಂಕರಿಸಿದ ಪ್ರತಿವ್ಕೆಯಂತೆ.
Tamil Transliteration
Nunmaan Nuzhaipulam Illaan Ezhilnalam
Manmaan Punaipaavai Yatru.
ಕಲಿತವರ ಬಡತನ ತರುವ ದುಃಖಕ್ಕಿಂತ ಕೀಳಾದುದು ಕಲಿಯದವರ ಶ್ರಿಮಂತಿಕೆಯು.
Tamil Transliteration
Nallaarkan Patta Varumaiyin Innaadhe
Kallaarkan Patta Thiru.
ಕಲಿಯದವರು ಮೇಲಾದ ವಂಶದಲ್ಲಿ ಹುಟ್ಟಿದವರಾದರೂ, ಕೀಳು ವಂಶದಲ್ಲಿ ಹುಟ್ಟಿದ ಕಲಿತವರ ಹಿರಿಮೆಗೆ ಸಮಾನರಲ್ಲ.
Tamil Transliteration
Merpirandhaa Raayinum Kallaadhaar Keezhppirandhum
Katraar Anaiththilar Paatu.
ಅರಿವು ಬೆಳೆಗುವ ಗ್ರಂಥಗಳನ್ನು ಓದಿಕೊಂಡವರ ಮುಂದೆ ಕಲಿಯದವರು ಮನುಷ್ಯರ ಮುಂದಿನ ಪ್ರಾಣಿಗಳಂತೆ.
Tamil Transliteration
Vilangotu Makkal Anaiyar Ilangunool
Katraarotu Enai Yavar.