ಮಾತಿನ ಒಲುಮೆ
Verses
ನ್ಯಾಯವಾದುದನ್ನೇ ಆಡುವ ನಾಲಗೆಯ ಒಳ್ಳೆಯ ಗುಣವು ಮಿಕ್ಕಲ್ಲ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತದೆ.
Tamil Transliteration
Naanalam Ennum Nalanutaimai Annalam
Yaanalaththu Ulladhooum Andru.
ಆದುವ ಮಾತಿನ ಬಲದಿಂದ, ಸಿರಿಯೂ, ಕೇಡೂ ಬರುವುದರಿಂದ, ತಾನಾಡುವ ಮಾತಿನಲ್ಲಿ ತಪ್ಪು ಸಂಭವಿಸದಂತೆ (ಎಚ್ಚರಿಕೆಯಿಂದ)
ಕಾದು ಕೊಳ್ಳಬೇಕು.
Tamil Transliteration
Aakkamung Ketum Adhanaal Varudhalaal
Kaaththompal Sollinkat Sorvu.
ನುಡಿಯುವಾಗ ಕೇಳಿದವರನ್ನು ವಶಪಡಿಸಿಕೊಂಡು, ಹಿರಿಮೆಯುಳ್ಳವಾಗಿ ಕೇಳಲಿಚ್ಛಿಸದವರನ್ನು ಕೇಳಲು ಇಷ್ಟಪಡುವಂತೆ
ಮಾತನಾಡುವುದು ಮಾತಿನ ಬಲ್ಮೆಯೆನಿಸುವುದು.
Tamil Transliteration
Kettaarp Pinikkum Thakaiyavaaik Kelaarum
Vetpa Mozhivadhaam Sol.
ಮಾತಿನ ಗುಣವರಿತುಆಡಬೇಕು; ಆ ರೀತಿಯ ಮಾತಿನ ಬಲ್ಮೆಗಿಂತ ಮಿಗಿಲಾದ ಧರ್ಮವಾಗಲೀ, ಸಿರಿಯಾಗಲೀ ಇಲ್ಲ.
Tamil Transliteration
Thiranarindhu Solluka Sollai Aranum
Porulum Adhaninooungu Il.
ಬೇರೊಬ್ಬರು ತಮ್ಮ ಮಾತನ್ನು ಎದುರಾಡಿ ಗೆಲ್ಲಲಾರರು ಎಂಬುದನ್ನು ಅರಿತುಕೊಂಡೇ ಹೇಳಬೇಕೆನಿಸಿದ ಮಾತನ್ನು ಆಡಬೇಕು.
Tamil Transliteration
Solluka Sollaip Piridhorsol Achchollai
Vellunjol Inmai Arindhu.
ಇತರರು ಕೇಳಲು ಇಷ್ಟಪಡುವಂತೆ ತಾವು ನುಡಿದು, ಇತರರು ಆಡಿದ ಮಾತಿನ ಪ್ರಯೋಜನವನ್ನು ಪರಿಶೀಲಿಸಿ ಸ್ವೀಕರಿಸುವುದು
ಮಂತ್ರಿಗುಣದ ಹಿರಿಮೆಯಲ್ಲಿ ದೋಷವಿಲ್ಲದವರ ಅಭಿಮತವೆನಿಸುವುದು.
Tamil Transliteration
Vetpaththaanj Chollip Pirarsol Payankotal
Maatchiyin Maasatraar Kol.
ಮಾತು ಬಲ್ಲವನೂ, ಜ್ಞಾಪಕಶಕ್ತಿಯುಳ್ಳವನೂ, ನಿರ್ಭೀತನೂ ಆದವನನ್ನು ಎದುರಿಸಿ ಗೆಲ್ಲುವುದು ಯಾರಿಗೂ ಅಸಾಧ್ಯ.
Tamil Transliteration
Solalvallan Sorvilan Anjaan Avanai
Ikalvellal Yaarkkum Aridhu.
ಮಾತುಗಳನ್ನು ಜಾಣ್ಮೆಯಿಂದ ಪೋಣಿಸಿ ಇನಿದಾಗಿ ಮಾತನಾಡ ಬಲ್ಲವರನ್ನು ಪಡೆದಲ್ಲಿ ಲೋಕವು ಕೋಡಲೇ ಅವರು ಹೇಳಿದಂತೆ
ಕೇಳುವುದು.
Tamil Transliteration
Viraindhu Thozhilketkum Gnaalam Nirandhinidhu
Solludhal Vallaarp Perin.
ಲೋಪವಿಲ್ಲದ ಕೆಲವೆ ಮಾತುಗಳನ್ನು ಆಡಲು ಅರಿಯದವರು ಸಹಜವಾಗಿಯೇ (ವ್ಯರ್ಥವಾದ) ಹಲವು ಮಾತುಗಳನ್ನು
ಆಡಬಯಸುವರು.
Tamil Transliteration
Palasollak Kaamuruvar Mandramaa Satra
Silasollal Thetraa Thavar.
ತಾವು (ಗ್ರಂಥಗಳಿಂದ) ಕಲಿತುದನ್ನು (ಇತರರು) ತಿಳಿಯುವಂತೆ ವಿಶದವಾಗಿ ವ್ಯಕ್ತಗೊಳಿಸಲಾರದವರು ಗೊಂಚಲು ಗೊಂಚಲಾಗಿ
ಅರಳಿಯೂ, ಪರಿಮಳವನ್ನು ಬೀರದ ಹೂವುಗಳನ್ನು ಹೋಲುವರು.
Tamil Transliteration
Inaruzhththum Naaraa Malaranaiyar Katradhu
Unara Viriththuraiyaa Thaar.