ಕಾರ್ಯಶುದ್ದಿ
Verses
ಯೋಗ್ಯವಾದ ನೆರವು ಸಿರಿಯನ್ನು ಮಾತ್ರ ತರುತ್ತದೆ; ಉತ್ತಮ ಕಾರ್ಯವು ಬಯಸಿದ ಎಲ್ಲವನ್ನೂ ನೀಡುವುದು.
Tamil Transliteration
Thunainalam Aakkam Tharuum Vinainalam
Ventiya Ellaan Tharum.
ಅರಸನಿಗೆ, ಬಯಸದಕ್ಕ ಕೀರ್ತಿಯೊಂದಿಗೆ, ಉತ್ತಮ ಫಲವನ್ನು ನೀಡದ ಕಾರ್ಯವನ್ನು (ಮಂತ್ರಿಯಾದವನು) ಎಂದೆಂದಿಗೂ ತ್ಯಜಿಸಬೇಕು.
Tamil Transliteration
Endrum Oruvudhal Ventum Pukazhotu
Nandri Payavaa Vinai.
ತಾವು ಮೇಲೆ ಮೇಲೆ ಏರಬೇಕು ಎನ್ನುವವರು, ತಮ್ಮ ಕೀರ್ತಿಗೆ ಕಳಂಕವಾದ ಕಲಸಗಳಿಂದ ದೂರವಿರಬೇಕು.
Tamil Transliteration
Oodhal Ventum Olimaazhkum Seyvinai
Aaadhum Ennu Mavar.
ಸಮದರ್ಶಿಯಾದ ದೃಷ್ಟಿಯುಳ್ಳವರು ತಾವು ಸಂಕಟದಲ್ಲಿ ಸಿಲುಕಿದರೂ ಕೀಳ್ತರದ ಕೆಲಸಗಳಲ್ಲಿ ತೊಡಗುವುದಿಲ್ಲ.
Tamil Transliteration
Itukkan Patinum Ilivandha Seyyaar
Natukkatra Kaatchi Yavar.
'ಏನು ಎಂಥ ಕೆಲಸ ಮಾಡಿದೆ!' ಎಂದು ನಂತರ ಆಲೋಚಿಸಿ ದುಃಖಿಸುವ ಕಾರ್ಯವನ್ನು ಮಾಡದಿರಲಿ; ಒಂದುವೇಳೆ ತಪ್ಪಿ ಮಾಡಿದರೂ
ಮತ್ತೆ ಅದು ಪುನರಾವರ್ತಿಯಾಗದಿರುವುದು ಒಳ್ಳೆಯದು.
Tamil Transliteration
Etrendru Iranguva Seyyarka Seyvaanel
Matranna Seyyaamai Nandru.
ಹೆತ್ತ ತಾಯಿ ಹಸಿವಿಂದ ನರಳುವ ಸಮಯದಲ್ಲೂ ತಿಳಿದವರು ನಿಂದಿಸುವಂಥ (ಹೀನ) ಕೆಲಸವನ್ನು ಮಾಡಬಾರದು.
Tamil Transliteration
Eendraal Pasikaanpaan Aayinunj Cheyyarka
Saandror Pazhikkum Vinai.
ನಿಂದೆಯನ್ನು ಧರಿಸಿ (ಕೀಳು ಕೆಲಸಮಾಡಿ) ಸಂಪಾದಿಸಿದ ಐಶ್ವರ್ಯಕ್ಕಿಂತ, ವಿಚಾರವಂತರ ಕಡು ಬಡತನವೇ ಲೇಸು.
Tamil Transliteration
Pazhimalaindhu Eydhiya Aakkaththin Saandror
Kazhinal Kurave Thalai.
(ದೊಡ್ಡವರು) ಮಾಡಕೂಡದೆಂದು ನಿಷೇಧಿಸಿದ ಕೆಲಸಗಳನ್ನು ಮಾಡಿದವರಿಗೆ ಆ ಕೆಲಸ ನೆರವೇರಿದರೂ ಅವು ಕಷ್ಟಗಳನ್ನೇ ತರುತ್ತವೆ.
Tamil Transliteration
Katindha Katindhoraar Seydhaarkku Avaidhaam
Mutindhaalum Peezhai Tharum.
ಇತರರನ್ನು ದುಃಖಕ್ಕೀಡುಮಾಡಿ ಸಂಪಾದಿಸಿದ ಸಿರಿಯೆಲ್ಲವೂ ಪಡೆದವನನ್ನು ದುಃಖಕ್ಕೀಡುಮಾಡಿ, ನಾಶವಾಗಿ ಬಿಡುವುದು. ಒಳ್ಳೆಯ
ಹಾದಿಯಲ್ಲಿ ಪಡೆದ ಸಿರಿ ಮೊದಲು ನಷ್ಟವಾದರೂ ನಂತರ ಫಲ ಪ್ರಾಪ್ತಿಯಾಗುವುದು.
Tamil Transliteration
Azhak Konta Ellaam Azhappom Izhappinum
Pirpayakkum Narpaa Lavai.
ವಂಚನೆಯ ಮಾರ್ಗದಲ್ಲಿ ಸಿರಿಯನ್ನು ಸೇರಿಸಿ ಕಾಪಾಡುವುದು, ಹಸಿ ಮಣ್ಣಿನ ಮಡಕೆಯಲ್ಲಿ ನೀರನ್ನು ಹೊಯ್ದು ಇರಿಸಿದಂತೆ.
Tamil Transliteration
Salaththaal Porulseydhe Maarththal Pasuman
Kalaththulneer Peydhireei Yatru.