ಮಂತ್ರಿ ಗುಣ
Verses
ಕೆಲಸಕ್ಕೆ ತಕ್ಕ ಸಾಧನವನ್ನೂ, ತಕ್ಕ ಕಾಲವನ್ನೂ ಕೆಲಸ ಮಾಡಲು ತಕ್ಕ ವೆಧಾನವನ್ನೂ, ಕಷ್ಟಸಾಧ್ಯವಾದ ಕೆಲಸವನ್ನೂ ಅರಿತು ವಿಶಿಷ್ಟ
ರೀತಿಯಲ್ಲಿ ಮಾಡ ಬಲ್ಲವನೇ ಮಂತ್ರಿಯು.
Tamil Transliteration
Karuviyum Kaalamum Seykaiyum Seyyum
Aruvinaiyum Maantadhu Amaichchu.
ಮೇಲಿನ ಐದು ಗುಣಗಳೊಂದಿಗೆ ನಿರ್ಭೀತ ದೃಷ್ಟಿ, ಪ್ರಚಾರಕ್ಷಣೆ, ನಿಖರವಾದ ಜ್ಞಾನ, ಪ್ರಮಾಣಿಕ ಪ್ರಯತ್ನ ಇವುಗಳನ್ನು ವಿಶಿಷ್ಟವಾಗಿ
ಹೊಂದಿರುವವನು ಮಂತ್ರಿಯು.
Tamil Transliteration
Vankan Kutikaaththal Katraridhal Aalvinaiyotu
Aindhutan Maantadhu Amaichchu.
ಹಗೆಗಳಿಗೆ ನೆರವಾಗುವವರನ್ನು ದೊರಮಾಡಿ, ತನ್ನೊಡನೆ ಇರುವವರನ್ನು ರಕ್ಷಿಸುತ್ತ ತನ್ನಿಂದ ದೊರವಾದವರನ್ನು ಮತ್ತೆ
ಸೇರಿಸಿಕೊಳ್ಳಬಲ್ಲವನೇ ಮಂತ್ರಿಯು.
Tamil Transliteration
Piriththalum Penik Kolalum Pirindhaarp
Poruththalum Valla Thamaichchu.
ಮಾಡುವ ಕೆಲಸಗಳನ್ನು ಚೆನ್ನಾಗಿ ತಿಳಿದುಕೊಂಡು, ಅದಕ್ಕೆ ಬೇಕಾದ ಮಾರ್ಗಗಳನ್ನು ಆಲೋಚಿಸಿ ಕೈಕೊಂಡು, ನಿಷ್ಚಯವಾಗಿ
ಅಭಿಪ್ರಾಯಗಳನ್ನು ಹೇಳಬಲ್ಲವನೇ ಮಂತ್ರಿಯು.
Tamil Transliteration
Theridhalum Therndhu Seyalum Orudhalaiyaach
Chollalum Valladhu Amaichchu.
ಧರ್ಮವನ್ನು ತಿಳಿದು, ಪೂರ್ಣ ಜ್ಞಾನದಿಂದ ಮಾತಾಡ ಬಲ್ಲವನಾಗಿ, ಮಾಡುವ ಕೆಲಸದ ಮರ್ಮವನ್ನು ಅರಿತವನಾಗಿಯೂ ಇರಬಲ್ಲವನೇ
ಅರಸನ ಮಂತ್ರಾಲೋಚನೆಗೆ ಸಹಾಯಕನೆನಿಸುವನು.
Tamil Transliteration
Aranarindhu Aandramaindha Sollaanenj Gnaandrun
Thiranarindhaan Therchchith Thunai.
ಶಾಸ್ತ್ರ ಜ್ಞಾನದೊಂದಿಗೆ ಸ್ವಾಭಾವಿಕವಾದ ಸೂಕ್ಷ್ಮ ಬುದ್ದಿಯುಳ್ಳವರಿಗೆ ಎದುರಿಸಿ ನಿಲ್ಲಬೇಕಾದಂಥ ಅತಿ ಸೂಕ್ಷ್ಮ ವಿಚಾರಗಳು
ಯಾವುವಿವೆ?
Tamil Transliteration
Madhinutpam Noolotu Utaiyaarkku Adhinutpam
Yaavula Munnir Pavai.
ಪುಸ್ತಕ ಜ್ಞಾನದಿಂದ ಕೆಲಸ ಮಾಡುವ ಬಗೆ ತಿಳಿದಿದ್ದರೂ ಲೋಕದ ಸ್ವಭಾವವನ್ನು ತಿಳಿದು ಕೆಲಸ ಮಾಡಬೇಕು.
Tamil Transliteration
Seyarkai Arindhak Kataiththum Ulakaththu
Iyarkai Arindhu Seyal.
ಅರಸನಾದವನು ಪೂರ್ತಿ ಅಜ್ಞಾನಿಯಾಗಿದ್ದರೂ ಅವನಿಗೆ ಖಚಿತವಾಗ ಸಲಹೆಗಳನ್ನು, ಕೊಡುವುದು ಮಂತ್ರಿಯಾದವನ ಕರ್ತವ್ಯ.
Tamil Transliteration
Arikondru Ariyaan Eninum Urudhi
Uzhaiyirundhaan Kooral Katan.
ಸನಿಹದಲ್ಲೇ ಇದ್ದು (ಅರಸನ) ನಾಶವನ್ನು ಬಯಸುವ ಮಂತ್ರಿಗಿಂತ, ಎಪ್ಪತ್ತು ಕೋಟಿ ಹಗೆಗಳು ಇದ್ದರೂ ಅದು ಉತ್ತಮವೇ.
Tamil Transliteration
Pazhudhennum Mandhiriyin Pakkadhadhul Thevvor
Ezhupadhu Koti Urum.
ಕಾಯದಕ್ಷತೆಯಿಲ್ಲದ ಮಂತ್ರಿಗಳು, ತಾವು ಕೈಗೊಂಡ ಕೆಲಸದಲ್ಲಿ ಮುಂಚಿತವಾಗಿ ಸಾಕಷ್ಟು ಸಲಹೆಗಳನ್ನು ಪಡೆದಿದ್ದರೂ, ಅದನ್ನು
ಮುಗಿಸಲಾರದೇ ಕೈಬಿಡುತ್ತಾರೆ.
Tamil Transliteration
Muraippatach Choozhndhum Mutivilave Seyvar
Thirappaatu Ilaaa Thavar.