ಭೀತಿ ನಿವಾರಣೆ

Verses

Holy Kural #561
ಮಾಡಿದ ಅಪರಾಧಗಳನ್ನು ತಕ್ಕ ರೀತಿಯಲ್ಲಿ ವಿಚಾರಿಸಿ, ಆ ಅಪರಾಧವನ್ನು ಮತ್ತೆ ಮಾಡದಂತೆ ಒಪ್ಪುವ ದಂಡನೆಯನ್ನು ವಿಧಿಸುವವನೇ ಅರಸನೆನಿಸಿಕೊಳ್ಳುವನು.

Tamil Transliteration
Thakkaangu Naatith Thalaichchellaa Vannaththaal
Oththaangu Oruppadhu Vendhu.

Explanations
Holy Kural #562
ತಮ್ಮ ಸಿರಿಯು ನಿಡುಗಾಲ ನಾಶವಾಗದಂತೆ ಇರಲು ಬಯಸುವ ಅರಸರು (ದಂಡಿಸುವಾಗ) ಮೊದಲು ಕಟ್ಟುನಿಟ್ಟಾಗಿ ಇರುವಂತೆ ತೋರಿಸಿ, ಅನಂತರ ಸೌಮ್ಯ ರೀತಿಯಲ್ಲಿ ಶಿಕ್ಷಿಸಬೇಕು.

Tamil Transliteration
Katidhochchi Mella Erika Netidhaakkam
Neengaamai Ventu Pavar.

Explanations
Holy Kural #563
ಪ್ರಜೆಗಳು ಭೀತಿಗೊಳ್ಳುವಂಥ ಕಾರ್ಯಗಳನ್ನು ಮಾಡಿ, ನೀತಿಭ್ರಷ್ಟ ಆಳರಸನೆನಿಸಿಕೊಂಡರೆ ಅವನು ನಿಶ್ಚಯವಾಗಿ ಒಡನೆಯೇ ಕೆಡುತ್ತಾನೆ.

Tamil Transliteration
Veruvandha Seydhozhukum Vengola Naayin
Oruvandham Ollaik Ketum.

Explanations
Holy Kural #564
ತನ್ನ ಪ್ರಜೆಗಳ ಬಾಯಲ್ಲಿ ಕ್ರೂರಿ ಎಂದು ಕರೆಸಿಕೊಳ್ಳುವ ಅರಸನು ಬಾಳಿನಲ್ಲಿ ಹಿರಿಮೆಯನ್ನು ಕಳೆದುಕೊಂಡು, ಒಡನೆಯೇ ನಾಶವಾಗುವನು.

Tamil Transliteration
Iraikatiyan Endruraikkum Innaachchol Vendhan
Uraikatuki Ollaik Ketum.

Explanations
Holy Kural #565
ಜನರಿಗೆ ಕಾಣಲು ದುರ್ಲಭನಾಗಿ, ಸಿಡುಕು ಮೋರೆಯಿಂದ ಕೂಡಿದ ಅರಸನ ಹೇರಳವಾದ ಸಿರಿಯು, ದೆವ್ವ ಬಡಿದು ಕಾದೊಕೊಂಡಿರುವಂತೆ ಇರುವುದು.

Tamil Transliteration
Arunjevvi Innaa Mukaththaan Perunjelvam
Peeykan Tannadhu Utaiththu.

Explanations
Holy Kural #566
(ಅರಸನು) ಕಡುನುಡಿಯವನೂ ಕರುಣೆಯ ಕಣ್ಣು ಇಲ್ಲದವನೂ ಆದರೆ ಅವನ ನಿಡಿದಾದ ಐಶ್ವರ್ಯವು ನಿಡಿದಾಗಿ ನಿಲ್ಲದೆ ಕೊಡಲೇ ನಾಶವಾಗುತ್ತದೆ.

Tamil Transliteration
Katunjollan Kannilan Aayin Netunjelvam
Neetindri Aange Ketum.

Explanations
Holy Kural #567
ಕಡು ಮಾತೂ, ಕಟ್ಟಳೆ ಮೀರಿದ ದಣ್ಣನೆಯೂ, ಅರಸನ ಅಜೇಯ ಶಕ್ತಿಯನ್ನು ಕ್ಷಯಿಸುವಂತೆ ಮಾಡುವ ಅರವಾಗುತ್ತದೆ.

Tamil Transliteration
Katumozhiyum Kaiyikandha Thantamum Vendhan
Atumuran Theykkum Aram.

Explanations
Holy Kural #568
(ಅರಸನಾದವನು) ಮಂತ್ರಿಗಳೇ ಮೊದಲಾದ ತನಗೆ ಬೇಕಾದವರೊಡನೆ ಸೇರಿ ವಿಚಾರಮಾಡದೆ, ಕೆಲಸ ಕೆಟ್ಟಾಗ ಅವರ ಮೇಲೆ ಕೋಪಗೊಂಡು, ಅಬ್ಬರಿಸಿದರೆ (ಚೀರಿದರೆ) ಅವನ ಸಿರಿಯು ಸೊರಗುತ್ತದೆ.

Tamil Transliteration
Inaththaatri Ennaadha Vendhan Sinaththaatrich
Cheerir Sirukum Thiru.

Explanations
Holy Kural #569
ಮುಂಚಿತವಾಗಿ ಕೋಟೆಯನ್ನು ಕಟ್ಟಿ ಬಲಪಡಿಸಿಕೊಳ್ಳಲಾರದ ಅರಸನು ಹೋರಾಟ ಬಂದ ಕಾಲದಲ್ಲಿ (ರಕ್ಷಣೆ ಇಲ್ಲದೆ) ಅಂಜಿ, ಶೀಘ್ರವೇ ಅಳಿಯುತ್ತಾನೆ.

Tamil Transliteration
Seruvandha Pozhdhir Siraiseyyaa Vendhan
Veruvandhu Veydhu Ketum.

Explanations
Holy Kural #570
ಕ್ರೂರ ನೀತಿಯ ಆಳ್ವಿಕೆಯು, ಕಲಿಯದವರನ್ನು (ಧರ್ಮಗ್ರಂಥಗಳನ್ನು ಅರಿಯದವರನ್ನು) ತನಗೆ ಆಸರೆಯಾಗಿ ಮಾಡಿಕೊಳ್ಳುವುದು; ಅದಕ್ಕಿಂತ ಹೆಚ್ಚು ಹೊರೆ ಭೂಮಿಗಿಲ್ಲ.

Tamil Transliteration
Kallaarp Pinikkum Katungol Adhuvalladhu
Illai Nilakkup Porai.

Explanations
🡱