ಕರುಣೆಯ ದೃಷ್ಟಿ
Verses
ಕರುಣೆ ಎನ್ನುವ ಅತಿಶಯವಾದ ಸೌಂದರ್ಯವು (ಆಭರಣವು) ಇರುವ ಕಾರಣದಿಂದಲೇ ಈ ಲೋಕವು ಅಳಿಯುದೆ ಉಳಿದುಕೊಂಡಿದೆ.
Tamil Transliteration
Kannottam Ennum Kazhiperung Kaarikai
Unmaiyaan Untiv Vulaku.
ಕರುಣೆಯಿಂದಲೇ ಲೋಕ ನಡೆಯುತ್ತಿದೆ. ಕರುಣೆಯಿಲ್ಲದವರು ಬದುಕಿರುವುದು ಭೂಮಿಗೆ ಹೊರೆಯಷ್ಟೇ ಹೊರತು ಬೇರೆ ಇಲ್ಲ.
Tamil Transliteration
Kannottath Thulladhu Ulakiyal Aqdhilaar
Unmai Nilakkup Porai.
ಹಾಡಿನೊಂದಿಗೆ ಸಮರಸವಿಲ್ಲವಾದರೆ ಆ ಸಂಗೀತದಿಂದ ಏನು ಫಲವಿದೆ? ಅದೇ ರೀತಿ ಕರುಣೆಯಿಲ್ಲದ ಕಣ್ಣು ಇದ್ದೂ ಏನು ಪ್ರಯೋಜನ?
Tamil Transliteration
Panennaam Paatarku Iyaipindrel Kanennaam
Kannottam Illaadha Kan.
ತಕ್ಕ ಪ್ರಮಾಣದಲ್ಲಿ ಕರುಣೆ ತೋರದ ಕಣ್ಣುಗಳು ಮುಖದಲ್ಲಿ ಇರುವಂತೆ ತೋರುವುದನ್ನು ಬಿಟ್ಟರೆ ಬೇರೇನು ಪ್ರಯೋಜನ ನೀಡುತ್ತದೆ?
Tamil Transliteration
Ulapol Mukaththevan Seyyum Alavinaal
Kannottam Illaadha Kan.
ಕರುಣೆಯೇ ಕಣ್ಣಿಗೆ ಅಲಂಕಾರ; ಅದಿಲ್ಲವಾದರೆ ಆ ಕಣ್ಣು ಹುಣ್ಣೆಂದು ಭಾವಿಸಲ್ಪಡುತ್ತದೆ.
Tamil Transliteration
Kannirku Anikalam Kannottam Aqdhindrel
Punnendru Unarap Patum.
ಕಣ್ಣಿದ್ದೂ ಕರುಣೆ ಇಲ್ಲದವರು, ಮಣ್ಣಿನಲ್ಲಿ ಚಲಿಸದೆ ನಿಂತ ಮರದ ಸಮಾನರು.
Tamil Transliteration
Manno Tiyaindha Maraththanaiyar Kanno
Tiyaindhukan Notaa Thavar.
ಕರುಣೆ ಇಲ್ಲದವರು ಕಣ್ಣಿಲ್ಲದವರೆನಿಸಿಕೊಳ್ಳುವರು; ಕಣ್ಣುಳ್ಳವರು ಕರುಣೆಯಿಲ್ಲದವರಾಗಿರುವುದು ಸಾಧ್ಯವಿಲ್ಲ.
Tamil Transliteration
Kannottam Illavar Kannilar Kannutaiyaar
Kannottam Inmaiyum Il.
ಕರ್ತವ್ಯಕ್ಕೆ ಚ್ಯುತಿ ಬಾರದಂತೆ, ಕರುಣೆ ತೋರಬಲ್ಲ ಅರಸನಿಗೆ, ಈ ಲೋಕವನ್ನೇ ತನ್ನದಾಗಿ ಮಾಡಿಕೊಳ್ಳುವ ಹಕ್ಕು ಇರುತ್ತದೆ.
Tamil Transliteration
Karumam Sidhaiyaamal Kannota Vallaarkku
Urimai Utaiththiv Vulaku.
ಶಿಕ್ಷಿಸಲು ಅರ್ಹರಾಗಿದ್ದರೂ, ಕರುಣೆ ತೋರಿ, ಶಿಕ್ಷಿಸದೆ ಸಹನೆಯಿಂದ ಕಾಯುವ ಗುಣವೇ (ಎಲ್ಲಕ್ಕಿಂತ) ಹಿರಿದು.
Tamil Transliteration
Oruththaatrum Panpinaar Kannumkan Notip
Poruththaatrum Panpe Thalai.
ಕರುಣೆಯುಳ್ಳ ನಾಗರಿಕ ಗುಣವನ್ನು ಬಯಸುವವರು, ತಮಗೆ ಬೇಕಾದವರು ನಂಜು ನೀಡದರೂ ಅದನ್ನು ಕುಡಿದು ಶಾಂತವಾಗಿರುವರು.
Tamil Transliteration
Peyakkantum Nanjun Tamaivar Nayaththakka
Naakarikam Ventu Pavar.