ಕ್ರೂರಾಡಳಿತ
Verses
ಪ್ರಜೆಗಳನ್ನು ಹಿಂಸಿಸಿ ದಮನ ಮಾಡುತ್ತ, ಧರ್ಮವಲ್ಲದ ಕಾರ್ಯಗಳಲ್ಲಿ ತೊಡಗಿದ ಅರಸನು ಕೊಲೆಗಾರನಿಗಿಂತ ಕೀಳೆನಿಸಿಕೊಳ್ಳುತ್ತಾನೆ.
Tamil Transliteration
Kolaimerkon Taarir Kotidhe Alaimerkontu
Allavai Seydhozhukum Vendhu.
ಆಡಳಿತ ದಂಡವನ್ನೆತ್ತಿ ಪ್ರಜೆಗಳನ್ನು ಹಣ ಕೇಳುವ ಅರಸನು, ಹಾದಿಯಲ್ಲಿ ಆಯುಧ ತೋರಿಸಿ ಪಥಿಕರಿಂದ ಹಣ ಸುಲಿಯುವ ದರೋಡೆಗಳ್ಳನನ್ನು ಹೋಲುತ್ತಾನೆ.
Tamil Transliteration
Velotu Nindraan Ituven Radhupolum
Kolotu Nindraan Iravu.
ಪ್ರತಿನಿತ್ಯವೂ ತನ್ನ ಆಡಳಿತದಲ್ಲಿರುವ ಒಳಿತುಕೆಡುಕುಗಳನ್ನು ವಿಚಾರಮಾಡಿ, ಧರ್ಮದಿಂದ ನಡೆದುಕೊಳ್ಳದ ಅರಸನು ದಿನದಿನವೂ ತನ್ನ ನಾಡನ್ನು ಅವನತಿಗೆ ತರುವನು.
Tamil Transliteration
Naatorum Naati Muraiseyyaa Mannavan
Naatorum Naatu Ketum.
ದುರಾಡಳಿತಗಾರನಾಗಿ, ವಿಚಾರಮಾಡದೆ ದುಡುಕುವ ಅರಸನು, ತನ್ನ ಸಂಪತ್ತನ್ನು ಪ್ರಜೆಗಳನ್ನೂ ಒಟ್ಟಾಗಿ ಕಳೆದುಕೊಳ್ಳುವನು.
Tamil Transliteration
Koozhung Kutiyum Orungizhakkum Kolkotich
Choozhaadhu Seyyum Arasu.
ಸಂಕಟಕ್ಕೊಳಗಾಗಿ ಸಹಿಸಲಾರದೆ ಅಳುವ (ಪ್ರಜೆಗಳ) ಕಣ್ಣೀರಲ್ಲವೆ (ನೀತಿ ಪಾಲಿಸದ ಅರಸನ) ಸಿರಿಯನ್ನು ಕತ್ತರಿಸಿ ನಾಶಪಡಿಸುವ ಗರಗಸ.
Tamil Transliteration
Allarpattu Aatraadhu Azhudhakan Neerandre
Selvaththaith Theykkum Patai.
ಅರಸರಿಗೆ ಮನ್ನಣೆ ದೊರೆಯಲು ನ್ಯಾಯವಾದ ಆಳ್ವಿಕೆಯೇ ಕಾರಣವಾಗುವುದು; ಅದಿಲ್ಲವಾದರೆ ಅರಸರಿಗೆ ಕೀರ್ತಿನೆಲೆ ಇಲ್ಲವಾಗಿ ಹೋಗುವುದು.
Tamil Transliteration
Mannarkku Mannudhal Sengonmai Aqdhindrel
Mannaavaam Mannark Koli.
ಮಳೆ ಹನಿ ಇಲ್ಲವಾದರೆ ಲೋಕವು ಹಾನಿಗೊಳಗಾಗುವಂತೆ ಅರಸನ ಕರುಣೆ ಇಲ್ಲದೆ ನಾಡಿನ ಪ್ರಜೆಗಳೂ ಕಷ್ಟಪಡುತ್ತಾರೆ.
Tamil Transliteration
Thuliyinmai Gnaalaththirku Etratre Vendhan
Aliyinmai Vaazhum Uyirkku.
ನೀತಿಧರ್ಮಗಳನ್ನು ಪಾಲಿಸದಿರುವ ಅರಸನ, ರಾಜದಂಡದ ಕೆಳಗೆ ಆಶ್ರಯ ಪಡೆದರೆ, ಸಿರಿವಂತಿಕೆಗಿಂತ ಬಡತನವೇ ಮೇಲು ಎನಿಸಿಕೊಳ್ಳುತ್ತದೆ.
Tamil Transliteration
Inmaiyin Innaadhu Utaimai Muraiseyyaa
Mannavan Korkeezhp Patin.
ಅರಸನಾದವನು ನೀತಿಧರ್ಮ ಉಲ್ಲಂಘಿಸಿ ಆಳ್ವಿಕೆ ನಡೆಸಿದರೆ, ಆ ನಾಡಿನಲ್ಲಿ ಮಳೆಗಾಲ ತಪ್ಪಿ, ಮೋಡಗಳು (ಚದುರಿ) ಮಳೆ ಸುರಿಯಲು ನಿರಾಕರಿಸುತ್ತದೆ.
Tamil Transliteration
Muraikoti Mannavan Seyyin Uraikoti
Ollaadhu Vaanam Peyal.
ಕಾಯುವ ಅರಸನು ರಕ್ಷಿಸದಿದ್ದರೆ, ಅವು ಹಾಲು ಕರೆಯುವುದಿಲ್ಲ; ಬ್ರಾಹ್ಮಣರೂ ಧರ್ಮಗ್ರಂಥಗಳನ್ನು ಮರೆಯುತ್ತಾರೆ.
Tamil Transliteration
Aapayan Kundrum Arudhozhilor Noolmarappar
Kaavalan Kaavaan Enin.