ನಿಜ ಹೇಳುವುದು

Verses

Holy Kural #291
ಯಾವೊಂದೂ ಕೆಡುಕಿಲ್ಲದ ಸೊಲ್ಲುಗಳನ್ನು ಆಡುವುದೇ ನಿಜ ಎನಿಸಿಕೊಳ್ಳುತ್ತದೆ.

Tamil Transliteration
Vaaimai Enappatuvadhu Yaadhenin Yaadhondrum
Theemai Ilaadha Solal.

Explanations
Holy Kural #292
ದೋಷವಿಲ್ಲದ ಒಳ್ಳೆಯತನವು, ಒಂದು ಸುಳ್ಳೀನಿಂದ ಫಲಿಸುವುದಾದರೆ, ಆಡಿದ ಸುಳ್ಳೂ ನಿಜದ ಸಾಲಿಗೇ ಸೇರುತ್ತದೆ.

Tamil Transliteration
Poimaiyum Vaaimai Yitaththa Puraidheerndha
Nanmai Payakkum Enin.

Explanations
Holy Kural #293
ತನ್ನ ಮನಸ್ಸು ಅರಿತ ವಿಷಯಗಳಲ್ಲಿ ಒಬ್ಬನು ಸುಳ್ಳಾಡಬಾರದು; ಹಾಗೆ ಸುಳ್ಳಾಡಿದರೆ ಅವನ ಮನಸ್ಸೇ ಸಾಕ್ಷಿಯಾಗಿ ನಿಂತು ಅವನನ್ನು
ಸುಡುತ್ತದೆ.

Tamil Transliteration
Thannenj Charivadhu Poiyarka Poiththapin
Thannenje Thannaich Chutum.

Explanations
Holy Kural #294
ಒಬ್ಬನು ಮನಸ್ಸಿನಿಂದ ಸುಳ್ಳಾಡದೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ, ಅವನು ಲೋಕದ ಜನರೆಲ್ಲರ ಮನಸ್ಸಿನಲ್ಲಿ
ನೆಲೆಯಾಗುವನು.

Tamil Transliteration
Ullaththaar Poiyaa Thozhukin Ulakaththaar
Ullaththu Lellaam Ulan.

Explanations
Holy Kural #295
ಒಬ್ಬನು ಮನಃಪೂರ್ವಕವಾಗಿ ನಿಜವಾಡುವುದಾದರೆ, ಅವನು ತಪಸ್ಸು ಮಾಡಿ, ದಾನಧರ್ಮಗಳನ್ನು ನಡೆಸುವವರಿಗಿಂತ ಮೇಲಾದವನು
ಎನಿಸಿಕೊಳ್ಳುತ್ತಾನೆ.

Tamil Transliteration
Manaththotu Vaaimai Mozhiyin Thavaththotu
Thaananjey Vaarin Thalai.

Explanations
Holy Kural #296
ಸುಳ್ಳಾಡದೆ ಬಾಳುವುದಕ್ಕಿಂತ ಮಿಗಿಲಾದ ಕೀರ್ತಿ ಬೇರಿಲ್ಲ; ಅದು ಅವನಿಗೆ ಅರಿವಿಲ್ಲದಂತೆಯೇ ಎಲಾ ಧರ್ಮಗಳ ಫಲವನ್ನೂ
ನೀಡುವುದು.

Tamil Transliteration
Poiyaamai Anna Pukazhillai Eyyaamai
Ellaa Aramun Tharum.

Explanations
Holy Kural #297
ಸುಳ್ಳಾಡದಿರುವುದನ್ನು ತಪ್ಪದೆ ನಡೆಸಿಕೊಂಡು ಬಂದಲ್ಲಿ ಬೇರೆ ಧರ್ಮಗಳನ್ನು ಆಚರಿಸದಿದ್ದರೂ ಬಾಧಕವಿಲ್ಲ.

Tamil Transliteration
Poiyaamai Poiyaamai Aatrin Arampira
Seyyaamai Seyyaamai Nandru.

Explanations
Holy Kural #298
ಬಹಿರಂಗ ಶುದ್ಧಿ ನೀರಿನಿಂದ ಉಂಟಾಗುತ್ತದೆ; ಅಂತರಂಗ ಶುದ್ಧಿ ಸತ್ಯವಂತಿಗೆಯಿಂದುಂಟಾಗುವುದು.

Tamil Transliteration
Puraldhooimai Neeraan Amaiyum Akandhooimai
Vaaimaiyaal Kaanap Patum.

Explanations
Holy Kural #299
ಹೊರಗಿನ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ಬೆಳಕಲ್ಲ; ಅರಿವುಳ್ಳ ಜ್ಞಾನಿಗಳಿಗೆ ಸುಳ್ಳಾಡದಿರುವುದೇ ನಿಜವಾದ ಬೆಳಕು.

Tamil Transliteration
Ellaa Vilakkum Vilakkalla Saandrorkkup
Poiyaa Vilakke Vilakku.

Explanations
Holy Kural #300
(ಧರ್ಮಗ್ರಂಥಗಳ ಆಧಾರದಿಂದ) ನಾವು ನಿಜವೆಂದು ಕಂಡ ವಸ್ತುಗಳಲ್ಲಿ ಸತ್ಯಶೀಲತೆಗಿಂತ ಮೇಲ್ಮೆಯುಳ್ಳದು ಬೇರೆ ಯಾವುದೂ ಇಲ್ಲ.

Tamil Transliteration
Yaameyyaak Kantavatrul Illai Enaiththondrum
Vaaimaiyin Nalla Pira.

Explanations
🡱