ಕುಲದ ಹಿರಿಮೆ
Verses
ನ್ಯಾಯಪರತೆ, ವಿನಯಶೀಲತೆ ಇದೆರಡೂ ಸತ್ಕುಲ ಸಂಭೂತರಲ್ಲಿ ಮಾತ್ರ ಸಹಜವಾಗಿರುತ್ತವೆ; ಬೇರೆಯವರಲ್ಲಿ ಇರುವುದಿಲ್ಲ.
Tamil Transliteration
Irpirandhaar Kanalladhu Illai Iyalpaakach
Cheppamum Naanum Orungu.
ಸತ್ಕುಲದಲ್ಲಿ ಹುಟ್ಟಿದವರು, ಸನ್ಮಾರ್ಗ, ಸತ್ಯಸಂಧತೆ, ವಿನಯಶೀಲತೆ- ಈ ಮೂರು ಗುಣಗಳಿಂದ ಎಂದೂ ಜಾರುವುದಿಲ್ಲ
Tamil Transliteration
Ozhukkamum Vaaimaiyum Naanum Im Moondrum
Izhukkaar Kutippiran Thaar.
ಸತ್ಕುಲದಲ್ಲಿ ಹುಟ್ಟಿದವರು, ಸನ್ಮಾರ್ಗ, ಸತ್ಯಸಂಧತೆ, ವಿನಯಶೀಲತೆ- ಈ ಮೂರು ಗುಣಗಳಿಂದ ಎಂದೂ ಜಾರುವುದಿಲ್ಲ
Tamil Transliteration
Nakaieekai Insol Ikazhaamai Naankum
Vakaiyenpa Vaaimaik Kutikku.
ಕೋಟಿಗಟ್ಟಲೆ ಐಶ್ವರ್ಯ ಪಡೆಯುವ ಅವಕಶವಿದ್ದರೂ, ಸತ್ಕುಲ ಸಂಭೂತರೂ ತಮ್ಮ ಕಾಲಕ್ಕೆ ಕುಂದು ತರುವ ಕೆಲಸಗಳನ್ನು
ಮಾಡೂವುದಿಲ್ಲ.
Tamil Transliteration
Atukkiya Koti Perinum Kutippirandhaar
Kundruva Seydhal Ilar.
ಸತ್ಕುಲಜರು, ಉದಾರವಾಗಿ ದಾನ ಮಾಡೂವುದರಿಂದ ತಾವು ಬರಿಗೈಯವರಾದರೂ, ಪರಂಪರಾಗತವಾಗಿ ಬಂದ
ಕುಲಮರ್ಯಾದೆಯು ಗುಣಗಳಿಂದ ವಿಮುಖರಾಗುವುದಿಲ್ಲ.
Tamil Transliteration
Vazhanguva Thulveezhndhak Kannum Pazhanguti
Panpil Thalaippiridhal Indru.
ಕಳಂಕರಹಿತವಾದ ಕುಲ ಮರ್ಯಾದೆತೊಡನೆ ಬಾಳಬೇಕೆಂದು ಒಯಸುವವರು ವಂಚನೆಯಿಂದ ಯೋಗ್ಯವಲ್ಲದ್ದನ್ನು ಮಾಡುವುದಿಲ್ಲ.
Tamil Transliteration
Salampatrich Chaalpila Seyyaarmaa Satra
Kulampatri Vaazhdhum En Paar.
ಶ್ರೇಷ್ಠವಾದ ಕುಲದಲ್ಲಿ ಜನಿಸಿದವರಲ್ಲಿ, ನಿಚ್ಚಳವಾಗಿ ಕಾಣುವ ದೋಷವು, ಆಕಾಶದಲ್ಲಿ ಬೆಳಗುವ ಚಂದ್ರನಲ್ಲಿರುವ ಕಳಂಕದಂತೆ
ಸ್ಪಷ್ಟವಾಗಿ ತೋರುವುದು.
Tamil Transliteration
Kutippirandhaar Kanvilangum Kutram Visumpin
Madhikkan Maruppol Uyarndhu.
(ಒಬ್ಬನಲ್ಲಿರುವ) ಒಳ್ಳೆಯ ಗುಣಗಳ ನಡುವೆ, ನಿರ್ದಯ ಪ್ರವೃತ್ತಿ ತೋರಿ ಬಂದರೆ ಅವನ ಕುಲದ ಹಿರಿಮೆಯ ಬಗ್ಗೆ
ಸಂದೇಹಪಡಬೇಕಾಗುವುದು.
Tamil Transliteration
Nalaththinkan Naarinmai Thondrin Avanaik
Kulaththinkan Aiyap Patum.
ಒಳ್ಳೆಯ ನೆಲದ ಗುಣವನ್ನು ಮೊಳಕೆಯಲ್ಲಿ ಕಾಣುವಂತೆ ಉತ್ತಮ ಕುಲ ಸಂಭೂತರ ಗುಣಗಳನ್ನು ಅವರ ಮಾತಿನಲ್ಲಿ ಕಾಣಬಹುದು.
Tamil Transliteration
Nilaththil Kitandhamai Kaalkaattum Kaattum
Kulaththil Pirandhaarvaaich Chol.
ಒಬ್ಬನಿಗೆ ಒಳ್ಲೆಯದಾಗಬೇಕೆಂದಿದ್ದರೆ ವಿನಯಶೀಲನಾಗಿರಬೇಕು; ಒಳ್ಳೆಯ ಕುಲಜನೆನಿಸಿಕೊಳ್ಳಬೇಕೆಂದಿದ್ದರೆ ಎಲ್ಲರಿಗೂ ತಗ್ಗ
ನಡೆಯಬೇಕು.
Tamil Transliteration
Nalamventin Naanutaimai Ventum Kulam Ventin
Ventuka Yaarkkum Panivu.