ಮದ್ದು
Verses
ಊಟದಲ್ಲಿ ಅಳತೆ ಮೀರಿ ಹೆಚ್ಚಾದರೂ, ಕರ್ಮಿಯಾದರೂ ವೈದ್ಯಶಾಸ್ತ್ರಜ್ಞರು ಸೂಚಿಸಿರುವ ವಾತ, ಪಿತ್ತ, ಕಫ ಈ ಮೂರೂ
(ಮನುಷ್ಯನಿಗೆ) ಬೇನೆಯುಂಟಾಗುತ್ತವೆ.
Tamil Transliteration
Mikinum Kuraiyinum Noiseyyum Noolor
Valimudhalaa Enniya Moondru.
ಮುಂಚಿತವಾಗಿ ಉಂಟ ಆಹಾರವು ಜೀರ್ಣವಾದುದನ್ನು ಅರಿತು ಮತ್ತೆ ಉಂಟರೆ, ಶರೀರಕ್ಕೆ ಔಷಧ (ಮದ್ದು) ವೇ ಬೇಕಾಗುವುದಿಲ್ಲ.
Tamil Transliteration
Marundhena Ventaavaam Yaakkaikku Arundhiyadhu
Atradhu Potri Unin.
ಮುಂಚಿತವಾಗಿ ಸೇವಿಸದ ಆಹಾರ ಜೀರ್ಣವಾದ ಮೇಲೆ ಅಳತೆಯರಿತು ಊಟ ಮಾಡಬೇಕು; ಅದೇ ದೇಹಧಾರಿಯಾದ ಮಾನವನ್ನು
ನಿಡುಗಾಲ ಬಾಳುವ ಮಾರ್ಗ.
Tamil Transliteration
Atraal Aravarindhu Unka Aqdhutampu
Petraan Netidhuykkum Aaru.
ಆಹಾರವು ಚೆನ್ನಾಗಿ ಜೀರ್ಣವಾದುದನ್ನು ಅರಿತುಕೊಂಡು, ಪೂರ್ತಿ ಹಸಿದ ಮೇಲೆ ಶರೀರಕ್ಕೆ ಒಗ್ಗುವ ಆಹಾರವನ್ನು ನಿಯಮಿತವಾಗಿ
ತಿನ್ನಬೇಕು.
Tamil Transliteration
Atradhu Arindhu Kataippitiththu Maaralla
Thuykka Thuvarap Pasiththu.
ಶರೀರಕ್ಕೆ ಒಗ್ಗುವಂಥ ಆಹಾರವನ್ನು ಮಿತಿಯರಿತು ಊಟ ಮಾಡಿದರೆ ಜೀವಕ್ಕೆ ಯಾವ ಅಪಾಯವೂ ಉಂಟಾಗುವುದಿಲ್ಲ.
Tamil Transliteration
Maarupaatu Illaadha Unti Maruththunnin
Oorupaatu Illai Uyirkku.
ತನಗೆ ಕೆಡುಕು ಯಾವುದೆಂದು ತಿಳಿದು ಮಿತಿಯರಿತು ಊಟ ಮಾಡೂವವನ ಬಳೀ ಸುಖವು ಬಂದು ನಿಲ್ಲುವಂತೆ, ಅತಿಯಾಗಿ
ತಿನ್ನುವವನ ಬಳಿ ರೋಗವು ಬಂದು ನೆಲಸುತ್ತದೆ.
Tamil Transliteration
Izhivarindhu Unpaankan Inpampol Nirkum
Kazhiper Iraiyaankan Noi.
ಜೀರ್ಣಿಸಿಕೊಳ್ಳುವ ಶಕ್ತಿ ಮೀರಿ, ವಿಚಾರ ಮಾಡದೆ ಅತಿಯಾಗಿ ತಿಂದರೆ ರೋಗಗಳು ಎಲ್ಲೆ ಮೀರಿ ಬೆಳೆಯುತ್ತವೆ.
Tamil Transliteration
Theeyala Vandrith Theriyaan Peridhunnin
Noyala Vindrip Patum.
ವೈದ್ಯನಾದವನು, ರೋಗವನ್ನೂ ರೋಗದ ಕಾರಣವನ್ನೂ ಪರೀಕ್ಷಿಸಿ ತಿಳಿದು ಅದನ್ನು ಪರಿಹರಿಸುವ ಮಾರ್ಗವನ್ನು ಕಂಡುಹಿಡಿದು,
ಸೂಕ್ತ ಚಿಕಿತ್ಸೆಯನ್ನು ಕೈಗೊಳ್ಳಬೇಕು.
Tamil Transliteration
Noinaati Noimudhal Naati Adhudhanikkum
Vaainaati Vaaippach Cheyal.
ವೈದ್ಯಶಾಸ್ತ್ರಬಲ್ಲವನು, ರೋಗಿಯ ಸ್ಥಿತಿಯನ್ನೂ ರೋಗದ ಅವಸ್ಥೆಯನ್ನೂ ರೋಗದ ಕಾಲಾವಧಿಯನ್ನೂ, ವಿಚಾರಮಾಡಿ (ಪರಿಶೀಲಿಸಿ)
ಹೊಂದುವ (ಚಿಕಿತ್ಸೆ) ನೀಡಬೇಕು.
Tamil Transliteration
Utraan Alavum Piniyalavum Kaalamum
Katraan Karudhich Cheyal.
ರೋಗಿ, ವೈದ್ಯ, ಔಷಧಿ ಮತ್ತು ಔಷಧಿ ತಯಾರಿಸಿ ಕೊಡುವವನು- ಎಂದು ವೈದ್ಯ ವಿದ್ಯೆಯಲ್ಲಿ ನಾಲ್ಕು ವಿಭಾಗಗಳನ್ನು
ಒಳಗೊಂಡಿರುವುದು.
Tamil Transliteration
Utravan Theerppaan Marundhuzhaich Chelvaanendru
Appaal Naar Kootre Marundhu.