ಮಾನ

Verses

Holy Kural #961
ಪ್ರಾಣವೆ ಕೋಗುವಂಥ ಅನಿವಾರ್ಯವಾದ ಕಾರಣಗಳಿದ್ದರೂ ಕುಲ ಗೌರವವನ್ನು ಕೀಳುಮಾಡುವಂಥ ಕಾರ್ಯಗಳನ್ನು ಕೈಬಿಡಬೇಕು.

Tamil Transliteration
Indri Amaiyaach Chirappina Aayinum
Kundra Varupa Vital.

Explanations
Holy Kural #962
ಕೀರ್ತಿಯೊಡನೆ ಮನಧನವನ್ನು ಬಯಸುವವರು ತಮ್ಮ ಕೀರ್ತಿ ಬಯಸುವ ಸಂದರ್ಭ ಬಂದರೂ ತಮ್ಮ ಕುಲದ ಹಿರಿಮೆ ಕೆಡುವಂಥ
ಕಾರ್ಯಗಳನ್ನು ಮಾಡ ಬಯಸುವುದಿಲ್ಲ.

Tamil Transliteration
Seerinum Seeralla Seyyaare Seerotu
Peraanmai Ventu Pavar.

Explanations
Holy Kural #963
ಸಿರಿಯು ಏರುತ್ತಿರುವ ಕಾಲದಲ್ಲಿ ತಗ್ಗಿ ನಡೆಯಬೇಕು; ಸಿರಿಯು ಕರಗಿ ಕುಗ್ಗುತ್ತಿರುವ ಕಾಲದಲ್ಲಿ ತಲೆಯೆತ್ತಿ ನಡೆಯಬೇಕು.

Tamil Transliteration
Perukkaththu Ventum Panidhal Siriya
Surukkaththu Ventum Uyarvu.

Explanations
Holy Kural #964
ಮನುಷ್ಯರು ಉನ್ನತವಾದ ಸ್ಥಿತಿಯಲ್ಲಿದ್ದು ಆ ನೆಲೆಯಿಂದ ಕೆಳಗಿಳಿದಾಗ, ತಲೆಯಿಂದ ಉದುರಿ ಬಿದ್ದ ಕೂದಲಿನಂತಾಗುತ್ತಾರೆ.
(ಅಂದರೆ- ಉದುರಿ ಹೋದ ಕೂದಲಿನಂತೆ ಜನರ ನಿರ್ಲಕ್ಷ್ಯಕ್ಕೀಡಾಗುತ್ತಾರೆ)

Tamil Transliteration
Thalaiyin Izhindha Mayiranaiyar Maandhar
Nilaiyin Izhindhak Katai.

Explanations
Holy Kural #965
ಬೆಟ್ಟದಂತೆ ಎತ್ತರವಾಗಿ ನಿಂತ ನೆಲೆಯಲ್ಲಿ ಉಳ್ಳವರೂ ಗುಲುಗುಂಜಿಯಷ್ಟು ಅಲ್ಪ ಕಾರ್ಯವನ್ನು ಮಾಡೀದರೆ ಕೀಳಾಗಿ ಬಿಡುವರು.

Tamil Transliteration
Kundrin Anaiyaarum Kundruvar Kundruva
Kundri Anaiya Seyin.

Explanations
Holy Kural #966
ಮನವನ್ನು ಬಿಟ್ಟು ತಮ್ಮನ್ನು ತೆಗಳುವವರನ್ನು ಹಿಂಬಾಲಿಸುವ ಗುಣವಿದ್ದರೆ ಕೀರ್ತಿಯೂ ಲಭಿಸದು, ದೇವಲೋಕದಲ್ಲಿಯೂ ಪ್ರವೇಶ
ದೊರೆಯುದು; ಅಂದಮೇಲೆ ಅದರಿಂದ ಲಾಭವೇನು?

Tamil Transliteration
Pukazhindraal Puththelnaattu Uyyaadhaal Enmatru
Ikazhvaarpin Sendru Nilai.

Explanations
Holy Kural #967
ಗೌರವ ನೀಡದೆ ಅಲಕ್ಷಿಸುವವರ ಹೀಂದ (ಯಾಚಕರಾಗಿ) ಸೇರಿ, ಬಾಳುವೆ ಮಾಡುವುದಕ್ಕಿಂತ, ತನ್ನ ಪೂರ್ವ ಸ್ಥಿತಿಯಲ್ಲಿಯೇ ಕೆಟ್ಟು
ನಾಶವಾದನು ಎಂದು ಜನರಿಂದ ಅನ್ನಿಸಿಕೊಳ್ಳುವುದು ಒಳ್ಳೆಯದು.

Tamil Transliteration
Ottaarpin Sendroruvan Vaazhdhala?n Annilaiye
Kettaan Enappatudhal Nandru.

Explanations
Holy Kural #968
ಒಬ್ಬನು ಉನ್ನತಿಕೆಯು ಅಳಿತು ಮಾನ ಕಳೆದುಕೊಳ್ಳುವ ಸ್ಥಿತಿ ಬಂದಾಗ, ಸಾಯದೆ, ಶರೀರವನ್ನು ಹೊತ್ತುಕೊಂಡು ಬಾಳುವುದರಿಂದ
ಶಾಂತಿ ಸಿಗಬಲ್ಲುದೆ?

Tamil Transliteration
Marundhomatru Oonompum Vaazhkkai Perundhakaimai
Peetazhiya Vandha Itaththu.

Explanations
Holy Kural #969
ತಮ್ಮ ಮಾನವು ಅಳಿಯುವ ಕಾಲದಲ್ಲಿ ಸಾವನ್ನು ಅಪ್ಪುವವರು ತನ್ನ ಅಹರೀರದಿಂದ ಕೂದಲು ಕಳೆದುಕೊಂಡೊಡನೆಯೇ ಸಾವನ್ನು
ಅಪ್ಪುವ ಜಿಂಕೆಗೆ ಹೋಲುವರು.

Tamil Transliteration
Mayirneeppin Vaazhaak Kavarimaa Annaar
Uyirneeppar Maanam Varin.

Explanations
Holy Kural #970
ತಮಗೆ ಅವಮಾನವಾಗುವ ಸಂದರ್ಭದಲ್ಲಿ ಬಾಳು ನೀಗುವ ಅಭಿಮಾನನಧರ ಕೀರ್ತಿಯನ್ನು ಲೋಕದ ಜನರು ಪೂಜಿಸಿ
ಗೌರವಿಸುವರು.

Tamil Transliteration
Ilivarin Vaazhaadha Maanam Utaiyaar
Olidhozhudhu Eththum Ulaku.

Explanations
🡱