ಕರುಣೆ ತೋರುವುದು

Verses

Holy Kural #241
ಕರುಣೆಯ ಸಿರಿಯು ಸಿರಿಯೊಳಗೆ ಸಿರಿಯೆನಿಸಿಕೊಳ್ಳುವುದು; ಹಣವಂತಿಕೆಯ ಸಿರಿಯು ಕೀಳಾದವರಲ್ಲಿಯೂ ಇರುವುದು.

Tamil Transliteration
Arutchelvam Selvaththul Selvam Porutchelvam
Pooriyaar Kannum Ula.

Explanations
Holy Kural #242
ಒಳ್ಳೆಯ ಮಾರ್ಗದಿಂದ ಪರಿಶೀಲಿಸಿ, ಕರುಣೆಯಿಂದ ಬಾಳಬೇಕು; ಹಲವು ಮಾರ್ಗಗಳಿಂದ (ಬೇರೆ ಬೇರೆ ಧರ್ಮಗಳಿಂದ) ವಿಚಾರ ಮಾಡೀ
ನೋಡಿದರೂ ಕರುಣೆಯೇ ಬಾಳಿಗೆ ಆಧಾರ.

Tamil Transliteration
Nallaatraal Naati Arulaalka Pallaatraal
Therinum Aqdhe Thunai.

Explanations
Holy Kural #243
ಕರುಣೆ ತುಂಬಿದ ಹೃದಯವುಳ್ಳವರಿಗೆ ಇರುಳು ತುಂಬಿದ ನರಕದ ಭಯವಿಲ್ಲ.

Tamil Transliteration
Arulserndha Nenjinaark Killai Irulserndha
Innaa Ulakam Pukal.

Explanations
Holy Kural #244
ಲೋಕದಲ್ಲಿ ಜೀವಿಸುವ ಪ್ರಾಣಿಗಳನ್ನು ಕಾಪಾಡಿ ಕರುಣೆ ತೋರುವವರಿಗೆ ತಮ್ಮ ಪ್ರಾಣಕ್ಕಂಜಬೇಕಾದ ದುಷ್ಕರ್ಮಗಳು
ಬಾಧಿಸುವುದಿಲ್ಲ.

Tamil Transliteration
Mannuyir Ompi Arulaalvaarkku Illenpa
Thannuyir Anjum Vinai.

Explanations
Holy Kural #245
ಕರುಣೆ ತೋರಿ ಬಾಳುವವರಿಗೆ ದುಃಖ ಬಾಧಿಸುವುದಿಲ್ಲ; ಗಾಳಿ ಬೀಸುತ್ತ, ಸಸ್ಯಸಮೃದ್ಧವಾಗಿರುವ, ಈ ವಿಸ್ತಾರವಾದ ಭೂಲೋಕವೇ
ಇದಕ್ಕೆ ಸಾಕ್ಷಿ.

Tamil Transliteration
Allal Arulaalvaarkku Illai Valivazhangum
Mallanmaa Gnaalang Kari.

Explanations
Holy Kural #246
(ಹಿಂದಿನ ಜನ್ಮದಲ್ಲಿ) ಸಾರವಸ್ತುವಾದ ಧರ್ಮವನ್ನು ತೋರೆದು ಬಾಳಿನ ಗುರಿಯನ್ನು ಮರೆತವರೇ ಈ ಜನ್ಮದಲ್ಲಿ ಕರುಣೆ ತೋರೆದು
ದುಷ್ಕೃತ್ಯಗಳಲ್ಲಿ ತೊಡಗುವರು ಎಂದು ಬಲ್ಲವರು ಹೇಳುತ್ತಾರೆ.

Tamil Transliteration
Porulneengip Pochchaandhaar Enpar Arulneengi
Allavai Seydhozhuku Vaar.

Explanations
Holy Kural #247
ಹಣವಿಲ್ಲದವರಿಗೆ ಈ ಲೋಕದ ಸುಖವು ಲಭ್ಯವಾಗದಿರುವಂತೆ (ಪ್ರಾಣಿಗಳಿಲ್ಲ) ಕರುಣೆ ಇಲ್ಲದವರಿಗೆ ಮೇಲು ಲೋಕದ ಸುಖವೂ
ಲಭ್ಯವಾಗುವುದಿಲ್ಲ.

Tamil Transliteration
Arulillaarkku Avvulakam Illai Porulillaarkku
Ivvulakam Illaaki Yaangu.

Explanations
Holy Kural #248
ಸಿರಿ ಬತ್ತಿದವರು ಎಂದಾದರೊಮ್ಮೆ ಮತ್ತೆ ವೃದ್ದಿ ಪಡೆವರು, ಕರುಣೆ ಬತ್ತಿದವರು ಮಾತ್ರ ಬಾಳಿನ ಪ್ರಯೋಜನದಿಂದ ದೂರವಾದವರೇ,
ಅವರು ಯಾವ ಕಾಲದಲ್ಲೂ ಕೀರ್ತಿವಂತರಾಗುವುದು ಸಾಧ್ಯವಿಲ್ಲ.

Tamil Transliteration
Porulatraar Pooppar Orukaal Arulatraar
Atraarmar Raadhal Aridhu.

Explanations
Holy Kural #249
ಕರುಣೆ ತೋರದವನು ಆಚರಿಸುವ ಧರ್ಮವನ್ನು ಪರೀಕ್ಷಿಸಿ ನೋಡಿದರೆ, ಅದು ಅರಿವಿಲ್ಲದ ಬುದ್ದಿಗೇಡಿಯೊಬ್ಬನು ಸತ್ಯದ ತಿರುಳನ್ನು
ಕಂಡು ಗ್ರಹಿಸಿದಂತೆ.

Tamil Transliteration
Therulaadhaan Meypporul Kantatraal Therin
Arulaadhaan Seyyum Aram.

Explanations
Holy Kural #250
ತನಗಿಂತ ಬಲಹೀನರಾದವರನ್ನು ಪೀಡಿಸಲು ಮುಂದುವರಿಯುವಾಗ, ತನಗಿಂತ ಬಲಶಾಲಿಯಾದವರ ಮುಂದೆ ತನ್ನನ್ನು ಇರಿಸಿಕೊಂಡು
ನೆನೆದುಕೊಳ್ಳಬೇಕು.

Tamil Transliteration
Valiyaarmun Thannai Ninaikka Thaan Thannin
Meliyaarmel Sellu Mitaththu.

Explanations
🡱