ಒಬ್ಬರನ್ನೊಬ್ಬರು ಬಯಸುವುದು

Verses

Holy Kural #1261
ನನ್ನ ಕಣ್ಣುಗಳು ಅವರು ಬರುವ ಹಾದಿಯನ್ನು ನಿರೀಕ್ಷಿಸಿ ಕಾಂತಿಗುಂದಿ ಅಂದಗೆಟ್ಟಿವೆ; ಬೆರಳುಗಳು ಅವರು ಹೋದ
ದಿನಗಳನ್ನು ಎಣಿಸಿ ಎಣಿಸಿ ಸವೆದುಹೋಗಿವೆ.

Tamil Transliteration
Vaalatrup Purkendra Kannum Avarsendra
Naalotrith Theyndha Viral.

Explanations
Holy Kural #1262
ಸಖೀ, ಕಾದಲರನ್ನು ನಾನಿಂದು ಮರೆತರೆ, ನನ್ನ ತೋಳುಗಳು ಅಂದಗೆಟ್ಟು ಅಲಂಕರಿಸಿರುವ ಆಭರಣಗಳು ಕಳಚಿ
ಸಡಿಲಗೊಂಡು ಜಾರುತ್ತವೆ.

Tamil Transliteration
Ilangizhaai Indru Marappinen Tholmel
Kalangazhiyum Kaarikai Neeththu.

Explanations
Holy Kural #1263
ನನ್ನ ಪ್ರೀತಿಯನ್ನು ನೆಚ್ಚದೆ, ಯುದ್ಧದಲ್ಲಿ ಗೆಲವನ್ನು ನೆಚ್ಚಿ ಮನೋಬಲವನ್ನೇ ಬೆಂಬಲವಾಗಿಟ್ಟುಕೊಂಡು, ಹೊರ ನಾಡೀಗೆ
ಹೋದ ಇನಿಯನ ಪುನರಾಗ ಮನವನ್ನೇ ನಿರೀಕ್ಷಿಸುತ್ತ ಇನ್ನೂ ಉಸಿರು ಹಿಡಿದು ಬದುಕ್ಕಿದ್ದೇನೆ.

Tamil Transliteration
Urannasaii Ullam Thunaiyaakach Chendraar
Varalnasaii Innum Ulen.

Explanations
Holy Kural #1264
ನನ್ನನ್ನಗಲಿ ದೂರವಾದವರು, ತುಂಬಿದ ಒಲವಿನೊಡನೆ ಮತ್ತೆ ಬರುವುದನ್ನು ನೆನೆ ನೆನೆದು, ನನ್ನ ಮನಸ್ಸು ಮೇಲೆ ಮೇಲೆ
ಉಬ್ಬಿ ನಲಿದಾಡುತ್ತಿದೆ.

Tamil Transliteration
Kootiya Kaamam Pirindhaar Varavullik
Kotuko Terumen Nenju.

Explanations
Holy Kural #1265
ಇನಿಯನನ್ನು ನಾನು ಕಣ್ಣು ತಣಿಯುವರೆಗೂ ಕಾಣುವವಳಾಗೆಬೇಕು; ಆಗಲಿ ನನ್ನ ನಳಿದೊಳುಗಳ ಪೇಲವತೆಯು
ಮಾಯವಾಗುವುದು.

Tamil Transliteration
Kaankaman Konkanaik Kannaarak Kantapin
Neengumen Mendhol Pasappu.

Explanations
Holy Kural #1266
ನನ್ನ ಪ್ರಿಯನು ಒಂದು ದಿನ ನನ್ನೆಡೆಗೆ ಬರಲಿ; ನನ್ನ ವಿರಹದ ನೋವೆಲ್ಲ ತೀರುವಂತೆ ನಾನವನ ಪ್ರೇಮಾಮೃತವನ್ನು ಹೀರಿ
ಸವಿದು ನಲಿದಾಡುತ್ತೇನೆ!

Tamil Transliteration
Varukaman Konkan Orunaal Parukuvan
Paidhalnoi Ellaam Keta.

Explanations
Holy Kural #1267
ನನ್ನ ಕಣ್ಣುಗಳಂತಿರುವ ಪ್ರಿಯತಮನು ಹಿಂತಿರುಗಿ ಬರುವವನಾದರೆ, ಅವನೊಡನೆ ಮುನಿಸಿಕೊಳ್ಳಲೇ, ಅಪ್ಪಿಕೊಳ್ಳಲೇ
ಇಲ್ಲವೇ ಎರಡನ್ನೂ ಮಾಡಲೇ?

Tamil Transliteration
Pulappenkol Pulluven Kollo Kalappenkol
Kananna Kelir Viran.

Explanations
Holy Kural #1268
ಅರಸನು ಕಾರ್ಯಮುಖನಾಗಿ ಯುದ್ಧದಲ್ಲಿ ಬೇಗ ಜಯಗಳಿಸಲಿ; ಆ ದಿನದ ಸಂಜೆ, ನಾನು ಮನವಿಯೊಡಗೂಡಿ ಸುಖಸಿ
ಸಂಭ್ಯಮದಿಂದ ಔತಣ ನಡೆಸುತ್ತೇನೆ.

Tamil Transliteration
Vinaikalandhu Vendreeka Vendhan Manaikalandhu
Maalai Ayarkam Virundhu.

Explanations
Holy Kural #1269
ದೂರದ ನಾಡಿಗೆ ಹೋಗಿರುವ ಪ್ರಿಯನು ಬರುವ ಕಾಲವನ್ನು ನೆನೆಯುತ್ತೆ ವೇದನೆಗೊಳಗಾದ ನಲ್ಲೆಯರಿಗೆ, ಒಂದು ದಿನವು
ಏಳು ದಿನಗಳಂತೆ ಕಳೆಯುವುದು.

Tamil Transliteration
Orunaal Ezhunaalpol Sellumsen Sendraar
Varunaalvaiththu Engu Pavarkku.

Explanations
Holy Kural #1270
ವಿರಹ ತಾಪವನ್ನು ತಾಳಲಾರದೆ, ನನ್ನ ಪ್ರಿಯತಮೆಯು ಹೃದಯವು ಒಡೆದು ಅಸುವಳಿದರೆ ಅವಳನ್ನು ಪಡೆದು, ಕೂಡಿ
ಸುಖಿಸಿ ಅನುಭವಿಸುವುದೇನು?

Tamil Transliteration
Perinennaam Petrakkaal Ennaam Urinennaam
Ullam Utaindhukkak Kaal.

Explanations
🡱