ಆಸೆಯನ್ನು ಹರಿಯುವುದು

Verses

Holy Kural #361
ಎಲ್ಲಾ ಜೀವಿಗಳಿಗೂ ಎಲ್ಲ ಕಾಲಗಳಲ್ಲಿಯೂ ತಪ್ಪದೆ ಉಂಟಾಗುತ್ತಿರುವ ಹುಟ್ಟಿನ ವ್ಯರ್ಥಗಳಿಗೆಲ್ಲ ಆಸೆಯೇ ಬೀಜವೆಂದು ಜ್ಞಾನಿಗಳು
ಹೇಳುವರು.

Tamil Transliteration
Avaaenpa Ellaa Uyirkkum Enj Gnaandrum
Thavaaap Pirappeenum Viththu.

Explanations
Holy Kural #362
ಒಬ್ಬನು ಬಯಸುವುದಾರೆ, ಹುಟ್ಟಿಲ್ಲದ ಸ್ಥಿತಿಯನ್ನು ಬಯಸಬೇಕು; ಆಶೆಗಳನ್ನು ಹರಿದುಕೊಳ್ಳುವುದರಿಂದ ಅದು ಲಭ್ಯವಾಗುವುದು.

Tamil Transliteration
Ventungaal Ventum Piravaamai Matradhu
Ventaamai Venta Varum.

Explanations
Holy Kural #363
ಆಶೆಯನ್ನು ಹರಿದುಕೊಳ್ಳುವುದಕ್ಕಿಂತ ಅಮೂಲ್ಯವಾದ ಸಿರಿ ಈ ಲೋಕದಲ್ಲಿ ಇಲ್ಲ; ಬೇರೆ ಎಲ್ಲೂ (ಪರ ಲೋಕದಲ್ಲಿಯೂ) ಅದಕ್ಕೆ
ಎಣಿಯಾದುದು ಇಲ್ಲ.

Tamil Transliteration
Ventaamai Anna Vizhuchchelvam Eentillai
Aantum Aqdhoppadhu Il.

Explanations
Holy Kural #364
(ಮನಃ) ಶುದ್ಧಿ ಎಂದು ಕರೆಯಲ್ಪಡುವುದು ಆಶೆ ಇಲ್ಲದ ನೆಲೆಯೇ; ಆಶೆ ಹರಿದ ಸಿತ್ಥಿಯು ಪರಮಾರ್ಥವನ್ನು ಬೇಡೂವುದರಿಂದ
ಉಂಟಾಗುವುದು.

Tamil Transliteration
Thoouymai Enpadhu Avaavinmai Matradhu
Vaaaimai Venta Varum.

Explanations
Holy Kural #365
ಆಶೆಯನ್ನು ಹರಿದುಕೊಂಡವರೇ ಹುಟ್ಟು ಸಾವುಗಳ ಬಂಧನದಿಂದ ಮುಕ್ತರಾದವರು; ಉಳಿದವರು ಆ ರೀತಿ ಮುಕ್ತರಲ್ಲ.

Tamil Transliteration
Atravar Enpaar Avaaatraar Matraiyaar
Atraaka Atradhu Ilar.

Explanations
Holy Kural #366
ಆಸೆಗೆ ಅಂಜಿ ಬಾಳುವುದೇ ಧರ್ಮ; (ಸ್ವಲ್ಪ ಎಚ್ಚರ ತಪ್ಪಿದರೂ ಸಾಕು) ಅದು ಒಬ್ಬನನ್ನು ವಂಚಿಸಿ ನಾಶ ಮಾಡುತ್ತದೆ.

Tamil Transliteration
Anjuva Thorum Arane Oruvanai
Vanjippa Thorum Avaa.

Explanations
Holy Kural #367
ಒಬ್ಬನು ತನ್ನ ಆಶೆಯನ್ನು ಸಂಪೂರ್ಣ ಕತ್ತರಿಸಿಕೊಂಡರೆ, ಒಳ್ಳೆಯದುಂಟು ಮಾಡುವ ಅವಿನಾಶಿಕರ್ಮವು (ಮುಕ್ತಿಗೆ ಕಾರಣವಾಗುವ
ಕರ್ಮವು) ತಾನು ಬಯಸಿದ ದಾರಿಯಲ್ಲಿ ಒದಗುತ್ತದೆ.

Tamil Transliteration
Avaavinai Aatra Aruppin Thavaavinai
Thaanventu Maatraan Varum.

Explanations
Holy Kural #368
ಆಶೆ ಇಲ್ಲದವರಿಗೆ ದುಃಖಗಳು ಇಲ್ಲವಾಗುವುವು; ಆಧೆ ಇದ್ದರೆ ಆ ದುಃಖಗಳು ಬಿಡದೆ ಮೇಲೆ ಮೇಲೆ ಬರುತ್ತವೆ.

Tamil Transliteration
Avaaillaark Killaakun Thunpam Aqdhuntel
Thavaaadhu Menmel Varum.

Explanations
Holy Kural #369
ಆಶೆಯೆನ್ನುವುದು ದುಃಖಗಳಲ್ಲೇ ಮಿಗಿಲಾದ ದುಃಖ; ಅದು ನಾಶವಾದರೆ ಈ ಲೋಕದಲ್ಲೆ ಸುಖವು ನಿರಂತರವಾಗಿ ಲಭ್ಯವಾಗುವುದು.

Tamil Transliteration
Inpam Itaiyaraa Theentum Avaavennum
Thunpaththul Thunpang Ketin.

Explanations
Holy Kural #370
ಆರದ (ತಣಿಯದ) ಸ್ವಭಾವವುಳ್ಳ ಆಶೆಯನ್ನು ನೀಗಿದರೆ, ಅದರಿಂದಲೇ, ಮಾರ್ಪಡದ (ಶಾಶ್ವತ) ಸುಖವು ಬಾಳಿನಲ್ಲಿ ಲಭ್ಯವಾಗುವುದು.

Tamil Transliteration
Aaraa Iyarkai Avaaneeppin Annilaiye
Peraa Iyarkai Tharum.

Explanations
🡱