ಅಸೂಯೆ ಪಡದಿರುವುದು

Verses

Holy Kural #161
ಒಬ್ಬನ್ನು ತನ್ನ ಹೃದಯದಲ್ಲಿ ಅಸೂಯೆ ಇಲ್ಲದೆ ಬಾಳುವ ಸ್ವಭಾವವನ್ನು ತನ್ನ ನಡತೆಯ ಮಾರ್ಗವಾಗಿ ಕೈಕೊಂಡು ಕಾಪಾಡಬೇಕು

Tamil Transliteration
Ozhukkaaraak Kolka Oruvandhan Nenjaththu
Azhukkaaru Ilaadha Iyalpu.

Explanations
Holy Kural #162
ಯಾರ ವಿಷಯದಲ್ಲಾಗಲೀ ಅಸೂಯೆ ಪಡದಿರಬೇಕು; (ತಾನು) ಹೊಂದತಕ್ಕ ಮೇಲಾದ ಪ್ರಯೋಜನಗಳಲ್ಲಿ ಅದಕ್ಕೆ ಸಮಾನವಾದುದು ಬೇರೊಂದಿಲ್ಲ.

Tamil Transliteration
Vizhuppetrin Aqdhoppadhu Illaiyaar Maattum
Azhukkaatrin Anmai Perin.

Explanations
Holy Kural #163
ತನಗೆ ಧರ್ಮ, ಸಂಪದಗಳೆರಡೂ ಬೇಡವೆನ್ನುವವನೇ ಬೇರೊಬ್ಬರ ಸಿರಿಯನ್ನು ಕಂಡು ಸಂತೋಷಿಸದೆ ಕರುಬುತ್ತಾನೆ.

Tamil Transliteration
Aranaakkam Ventaadhaan Enpaan Piranaakkam
Penaadhu Azhukkarup Paan.

Explanations
Holy Kural #164
ಕೀಳಾದ ಹಾದಿಯಿಂದ ಸಂಕಟಗಳೇರ್ಪಡುವುದನ್ನು ಅರಿತು ತಿಳಿದವರು ಅಸೂಯೆಯಿಂದ ಅಲ್ಲದುದನ್ನು ಮಾಡಲಾರರು.

Tamil Transliteration
Azhukkaatrin Allavai Seyyaar Izhukkaatrin
Edham Patupaakku Arindhu.

Explanations
Holy Kural #165
ಅಸೂಯಾಪರತೆಯುಳ್ಳವರಿಗೆ ಬೇರೆ ಹಗೆ ಇಲ್ಲದಿದ್ದರೂ ಅದೊಂದೇ ಸಾಕು ಕೇಡುಂಟು ಮಾಡಲು.

Tamil Transliteration
Azhukkaaru Utaiyaarkku Adhusaalum Onnaar
Vazhukka?yum Keteen Padhu.

Explanations
Holy Kural #166
ಪರರಿಗೆ (ಕೊಡುಗೈಯಿಂದ) ಕೊಡುವುದನ್ನು ಕಂಡು ಕರುಬುವನು, ಅವನ ಪರಿವಾರದೊಡನೆ ಹೊಟ್ಟೆ ಬಟ್ಟೆಗಿಲ್ಲದೆ ಕೆಡುತ್ತಾನೆ.

Tamil Transliteration
Kotuppadhu Azhukkaruppaan Sutram Utuppadhooum
Unpadhooum Indrik Ketum.

Explanations
Holy Kural #167
ಅಸೂಯೆ ಉಳ್ಳವನನ್ನು ಲಕ್ಷ್ಮಿ ಸಹಿಸದೆ ಅವನನ್ನು ತನಕ್ಕ ದರಿದ್ರ ಲಕ್ಷ್ಮಿಗೆ ತೋರಿಸಿ ಬಿಡುವಳು.

Tamil Transliteration
Avviththu Azhukkaaru Utaiyaanaich Cheyyaval
Thavvaiyaik Kaatti Vitum.

Explanations
Holy Kural #168
ಅಸೂಯೆಯೆಂಬ ಪಾಪಿ (ತನಗೆ ಅವಕಾಶ ಕೊಟ್ಟವನ) ಸಿರಿಯನ್ನು ನಾಶ ಪಡಿಸುವುದಲ್ಲದೆ, ಅವನನ್ನು ಬೆಂಕಿಯಲ್ಲಿ (ನರಕದಲ್ಲಿ) ತಳ್ಳಿ ಬಿಡುವುದು.

Tamil Transliteration
Azhukkaaru Enaoru Paavi Thiruchchetruth
Theeyuzhi Uyththu Vitum.

Explanations
Holy Kural #169
ಅಸೂಯೆಯುಳ್ಳವನ ಸಿರಿಯೂ ಒಳ್ಳೆಯವನ ಕೇಡೂ ಇವೆರಡೂ ವಿಚಾರಾರ್ಹವಾದುದು. (ಇವೆರಡೂ ವೈಪರೀತ್ಯಗಳಿಗೆ ಕಾರಣವೇನು ಎಂಬುದು ವಿಚಾರ ಮಾಡ ಬೇಕಾದ ಅಂಶ)

Tamil Transliteration
Avviya Nenjaththaan Aakkamum Sevviyaan
Ketum Ninaikkap Patum.

Explanations
Holy Kural #170
ಅಸೂಯೆಯಿಂದ ಮೇಲ್ಮೆ ಪಡೆದವರೂ, ಅಸೂಯೆ ಇಲ್ಲದೆ ಮೇಲ್ಮೆಯನ್ನು ತೊರೆದವರೂ ಈ ಲೋಕದಲ್ಲಿಲ್ಲ.

Tamil Transliteration
Azhukkatru Akandraarum Illai Aqdhuillaar
Perukkaththil Theerndhaarum Il.

Explanations
🡱