ಸಹನ ಶೀಲತೆ
Verses
ತನ್ನನ್ನು ಅಗೆಯುವವರನ್ನು ತಾಳಿಕೊಂಡಿರುವ ನೆಲದಂತೆಯೇ (ಭೂಮಿಯಂತೆ) ತಮ್ಮನ್ನು ನಿಂದಿಸುವವರನ್ನು ತಾಳಿಕೊಂಡಿರುವುದೇ ಹಿರಿಮೆ.
Tamil Transliteration
Akazhvaaraith Thaangum Nilampolath Thammai
Ikazhvaarp Poruththal Thalai.
ಕೆಟ್ಟ ನಡವಳಿಕೆಯನ್ನು ನಾವು ಪ್ರತಿಭಟಿಸಲು ಸಾಧ್ಯವಿದ್ದರೂ ಅದನ್ನು ತಾಳಿಕೊಳ್ಳಬೇಕು; ತಾಳಿಕೊಳ್ಳುವುದಕ್ಕಿಂತ, ಮಿಗಿಲಾದ ಮನಸ್ಸಿನ ನೆಲೆಯೆಂದರೆ, ಆ ಕೆಟ್ಟ ನಡವಳಿಕೆಯನ್ನು ಮನಸ್ಸಿನಿಂದ ಪೂರ್ತಿಯಾಗಿ ತೊಡೆದುಹಾಕುವುದು.
Tamil Transliteration
Poruththal Irappinai Endrum Adhanai
Maraththal Adhaninum Nandru.
ಅತಿಥಿಗಳನ್ನು ಸತ್ಕಾರಮಾಡದೇ ಕಳಿಸುವುದು ದಾರಿದ್ರ್ಯದೊಳಗೆ ದಾರಿದ್ರ್ಯ ಎನಿಸಿಕೊಳ್ಳುತ್ತದೆ; (ಅತೇ ರೀತಿ) ಅರಿವಿಲ್ಲದ ಮೂರ್ಖರನ್ನು ತಾಳಿಕೊಳ್ಳುವುದು ಬಲ್ಲಾಳ್ತನದಲ್ಲಿ ಬಲ್ಲಾಳ್ತನವೆನಿಸಿಕೊಳ್ಳುವುದು.
Tamil Transliteration
Inmaiyul Inmai Virundhoraal Vanmaiyul
Vanmai Matavaarp Porai.
ಸಂಪನ್ನತೆಯ ತನ್ನಿಂದ ಅಗಲದಂತಿರಬೇಕಾದರೆ, ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. (ಸಂಪನ್ನತೆಯೆಂದರೆ ಗುಣ ಮತ್ತು ಸಿರಿ ಎರಡಕ್ಕೂ ಇಲ್ಲ ಅನ್ವಯಿಸಬಹುದು)
Tamil Transliteration
Niraiyutaimai Neengaamai Ventin Poraiyutaimai
Potri Yozhukap Patum.
ನೋವೆಣಿಸಿದವರನ್ನು ಲೋಕ ಒಂದು ವ್ಯಕ್ತಿಯಾಗಿ ಗಣಿಸುವುದಿಲ್ಲ; ಅದೇ ತಾಳ್ಮೆಯುಳ್ಳವರನ್ನು ಲೋಕವು ಬಂಗಾರದಂತೆ ಮನಸ್ಸಿನೊಳಗಿಟ್ಟುಕೊಂಡು ಗೌರವಿಸುತ್ತದೆ.
Tamil Transliteration
Oruththaarai Ondraaka Vaiyaare Vaippar
Poruththaaraip Ponpor Podhindhu.
ಕೇಡೆಣಿಸಿದವರಿಗೆ ಒಂದು ದಿನದ ಸುಖ ಮಾತ್ರ ದೊರೆಯುವುದು. ಆದರೆ ಅವರನ್ನು ತಾಳ್ಮೆಯಿಂದ ಕ್ಷಮಿಸುವವರಿಗೆ, (ಲೋಕವು) ಅಳಿಯುವವರೆಗೂ ಕೀರ್ತಿ ಲಭಿಸುವುದು.
Tamil Transliteration
Oruththaarkku Orunaalai Inpam Poruththaarkkup
Pondrun Thunaiyum Pukazh.
ಬೇರೆಯುವರು ತನಗೆ ಕೆಟ್ಟದ್ದನ್ನು ಮಾಡಿದರೂ, ಅವರಿಗದರಿಂದುಂಟಾಗುವ ಕೇಡನ್ನು ನೆನೆದು ಮರುಕಪಟ್ಟು, ಅವರಿಗೆ ಅಧರ್ಮವೆಣಿಸದಿರುವುದೇ ಮೇಲನಿಸುತ್ತದೆ.
Tamil Transliteration
Thiranalla Tharpirar Seyyinum Nonondhu
Aranalla Seyyaamai Nandru.
ಸೊಕ್ಕಿನಿಂದ ಕೆಟ್ಟದ್ದನ್ನು ಮಾಡಿದವರಿಗೆ, ತಮ್ಮಲ್ಲಿರುವ ತಕ್ಕ ನಡತೆಯಿಂದ ತಾಳಿಕೊಂಡು ಅವರನ್ನು ಗೆಲ್ಲಬೇಕು.
Tamil Transliteration
Mikudhiyaan Mikkavai Seydhaaraith Thaandham
Thakudhiyaan Vendru Vital.
ತೊರೆದವರ (ಋಷಿಗಳ) ಹಾಗೆ ಶುದ್ದಿಯುಳ್ಳವರೆಂದರೆ, ಕೆಟ್ಟವರ ಬಾಯಿಂದ ಆಡುವ ಕೆಡು ನುಡಿಗಳನ್ನು ತಾಳಿಕೊಂಡು ಇರುವವರು.
Tamil Transliteration
Thurandhaarin Thooimai Utaiyar Irandhaarvaai
Innaachchol Norkir Pavar.
ಉಪವಾಸ ವ್ರತಗಳನ್ನು ಆಚರಿಸಿ ತಾಳುವವರು ಹಿರಿಯುರು; ಆದರೆ ಕೆಟ್ಟವರಾಡುವ ಕೆಡು ನುಡಿಗಳನ್ನು ತಾಳಿಕೊಳ್ಳುವವರಿಗಿಂತ ಎರಡನೆಯವರು ಅವರು.
Tamil Transliteration
Unnaadhu Norpaar Periyar Pirarsollum
Innaachchol Norpaarin Pin.