ಲೋಭ ಪಡದಿರುವುದು
Verses
ಸಮಭಾವನೆಯಿಲ್ಲದೆ (ಇತರರಿಗೆ ಸೇರಿದ) ಒಳ್ಲೆಯ ವಸ್ತುಗಳನ್ನು ಕಂಡು ಲೋಭಿಸಿದರೆ ಕುಲವು ಕೆಡುವುದಲ್ಲದೆ, ಪಾಪ ಕಾರ್ಯಗಳೂ ಬಂದು ಸೇರುತ್ತದೆ.
Tamil Transliteration
Natuvindri Nanporul Veqkin Kutipondrik
Kutramum Aange Tharum.
ಅಪಕೀರ್ತಿ ತರುವ ಕೆಲಸಕ್ಕೆ ನಾಚುವವರು ಅಧಿಕ ಫಲಗಳ ಆಶೆಗೆ ನಿಂದೆ ತರುವ ಕೆಲಸವನ್ನು ಮಾಡರು
Tamil Transliteration
Patupayan Veqkip Pazhippatuva Seyyaar
Natuvanmai Naanu Pavar.
ಶಾಶ್ವತವಾದ ಹಿರಿಯ ಸುಖವನ್ನು ಬಯಸುವವರು, ಕ್ಷಣಿಕವಾದ ಅಲ್ಪ ಸಂತೋಷವನ್ನು ಬಯಸಿ ಅಧರ್ಮ ಕಾರ್ಯಗಳನ್ನು ಮಾಡರು
Tamil Transliteration
Sitrinpam Veqki Aranalla Seyyaare
Matrinpam Ventu Pavar.
ಇಂದ್ರಿಯಗಳನ್ನು ಗೆದ್ದ ಕೀಳುತನವಿಲ್ಲದೆ ಪೂರ್ಣ ದೃಷ್ಟಿಯುಳ್ಳವರು, ತಾವು ಏನೂ ಇಲ್ಲದವರೆಂದು ಇತರರ ಸಂಪತ್ತನ್ನು ಬಯಸಿ ಲೋಭತನವನ್ನು ತೋರಿಸರು.
Tamil Transliteration
Ilamendru Veqkudhal Seyyaar Pulamvendra
Punmaiyil Kaatchi Yavar.
ಲೋಭದಿಂದ ಯಾರಿಗಾದರೂ ಕೆಟ್ಟುದನ್ನು ಮಾಡಿದರೆ ಸೂಕ್ಷ್ಮವಾಗಿಯೂ ವ್ಯಾಪಕವಾಗಿಯೂ ಇರುವ ಅರಿವಿನಿಂದ ಪ್ರಯೋಜನವೇನು?
Tamil Transliteration
Aqki Akandra Arivennaam Yaarmaattum
Veqki Veriya Seyin.
ದೈವಕೃಪಯನ್ನು ಬಯಸಿ ಧರ್ಮಮಾರ್ಗದಲ್ಲಿ ನಿಂತವನು, ಮತ್ತೊಬ್ಬನ ಸಂಪತ್ತನ್ನು ಲೋಭಿಸಿ ಹೊಲ್ಲ ವಿಚಾರಗಳನ್ನು ಮನದಲ್ಲಿ ಎಣಿಸಿದರೆ ಒಡನೆಯೇ ಕೆಡುತ್ತಾನೆ.
Tamil Transliteration
Arulveqki Aatrinkan Nindraan Porulveqkip
Pollaadha Soozhak Ketum.
ಲೋಭದಿಂದ ದಕ್ಕುವ ಸಂಪತ್ತನ್ನು ಬಯಸದಿರು. ಬೆಳೆಯುವಾಗ ಆದರ ಫಲ (ಪರಿಣಾಮ) ಒಳ್ಳೆಯದಾಗುವುದಿಲ್ಲ.
Tamil Transliteration
Ventarka Veqkiyaam Aakkam Vilaivayin
Maantar Karidhaam Payan.
ಒಬ್ಬನ ಸಂಪತ್ತು ಅಳಿಯದಿರುವ ಮಾರ್ಗ ಯಾವುದೆಂದರೆ ಪರರ ಕೈಯ ಸಂಪತ್ತನ್ನು ತಾನು ಬಯಸದಿರುವುದು.
Tamil Transliteration
Aqkaamai Selvaththirku Yaadhenin Veqkaamai
Ventum Pirankaip Porul.
ಧರ್ಮಮಾರ್ಗವನ್ನು ತಿಳಿದು, ಲೋಭಕೊಳಗಾಗದೆ ಇರುವ, ವಿಚಾರ ಸಂಪನ್ನರನ್ನು ಸಮಯ ನೋಡಿ ಸಿರಿ (ಲಕ್ಷ್ಮಿ) ಯು ತಾನೆ ಬಂದು ಸೇರುವಳು.
Tamil Transliteration
Aranarindhu Veqkaa Arivutaiyaarch Cherum
Thiranarin Thaange Thiru.
ತನ್ನ ಉನ್ನತಿಯನ್ನು ಎಣಿಸಿದೆ ಹೆರರ ಸಂಪತ್ತನ್ನು ಲೋಭಿಸಿದರೆ ಅದು ಅಳಿವನ್ನು ತರುತ್ತದೆ; ಹಾಗೆ ಲೋಭಿಸದ ಹಿರಿಮೆಯ ಬಾಳು ಜಯವನ್ನು ತರುತ್ತದೆ.
Tamil Transliteration
Iraleenum Ennaadhu Veqkin Viraleenum
Ventaamai Ennunj Cherukku.