ಸವಿಮಾತು ಅಡುವ್ದು
Verses
ಪ್ರೀತಿಯಿಂದ, ವಂಚನೆಯಿಲ್ಲದೆ, ಪರತತ್ತ್ವವನ್ನು ಆರಿತವರ ನಾಲಗೆಯಿಂದ ಹೊರಡುವ ಮಾತೇ ಸವಿಮಾತು ಎನಿಸಿಕೊಳುತ್ತದೆ.
Tamil Transliteration
Insolaal Eeram Alaiip Patiruilavaam
Semporul Kantaarvaaich Chol.
ಮನಸ್ಸು ನಲಿದು ಕೊಡುವುದಕ್ಕಿಂತ ಮಿಗಿಲಾದುದು, ಮುಖವರಳಿಸಿಕೊಂಡು ಸವಿಮಾತನಾಡುವುದು.
Tamil Transliteration
Akanamarndhu Eedhalin Nandre Mukanamarndhu
Insolan Aakap Perin.
ಮುಗವರಳಿಸಿಕೊಂಡು ಸ್ನೇಹಪರನಾಗಿ ನೋಡಿ, ಹೃದಯಮೆಚ್ಚಿ ಸವಿಮಾತುಗಳಾಡುವುದೆ ಸದ್ಧರ್ಮವೆನಿಸುವುದು.
Tamil Transliteration
Mukaththaan Amarndhuinidhu Nokki Akaththaanaam
Inso Linadhe Aram.
ಯಾರೊಡನೆಯಾಗಲಿ ಸಂತೋಷವನ್ನು ಹೆಚ್ಚಿಸುವ ಸಿಹಿ ಮಾತಾಡುವವರಿಗೆ ದುಃಖವನ್ನು ಹೆಚ್ಚಿಸುವ ಬಡತನದ ಕ್ಲೇಶಗಳು ಇಲ್ಲವಾಗುವುದು.
Tamil Transliteration
Thunpurooum Thuvvaamai Illaakum Yaarmaattum
Inpurooum Inso Lavarkku.
ವಿನಯಶೀಲನಾಗಿರುವುದು, ಸವಿಮಾತು ಆಡುವುದು, ಒಬ್ಬನಿಗೆ ಅಲಂಕಾರವೆನಿಸುವುದು. ಬೇರೆ ಯಾವುದೂ ಅಲಂಕಾರವಲ್ಲ.
Tamil Transliteration
Panivutaiyan Insolan Aadhal Oruvarku
Aniyalla Matrup Pira.
ಹುಡುಕಿ ಒಳೆಯ ಮಾತುಗಳನ್ನು ಹಿತವಾಗುವಂತೆ ಆಡಬೇಕು; ಅದರಿಂದ ಕೇಡಳಿದು ಧರ್ಮವು ವರ್ಥಿಸುತ್ತದೆ.
Tamil Transliteration
Allavai Theya Aramperukum Nallavai
Naati Iniya Solin.
ಫಲಕೊಟ್ಟು ಸವಿತುಂಬಿ ಆಡುವ ಮಾತುಗಳು, ಈ ಲೋಕದಲ್ಲಿ ಸುಖನೀಡಿ ಪರಲೋಕದಲ್ಲಿ ಫಲಪ್ರಾಪ್ತಿಯಾಗುವಂತೆ ಮಾಡುತ್ತವೆ.
Tamil Transliteration
Nayan Eendru Nandri Payakkum Payaneendru
Panpin Thalaippiriyaach Chol.
ಇತರರ ಮನಸ್ಸಿಗೆ ನೋವುಂಟುಮಾಡದಿರುವ ಸವಿ ಮಾತುಗಳು ಪರದಲ್ಲಿ ಮತ್ತು ಇಹದಲ್ಲಿ (ಇಹಪರಗಳೆಡರಲ್ಲಿಯೂ) ಸಂತೋಷವನ್ನುಂಟುಮಾಡುತ್ತವೆ.
Tamil Transliteration
Sirumaiyul Neengiya Insol Marumaiyum
Immaiyum Inpam Tharum.
ಸವಿಮಾತುಗಳಲ್ಲಿ ಸುಖಸಂತೋಷಗಳು ಉಂಟೆಂದು ತಿಳಿಯುವವನು ಕಟು ಮಾತುಗಳನ್ನು ಏಕೆ ಆಡಬೇಕು?
Tamil Transliteration
Insol Inidheendral Kaanpaan Evankolo
Vansol Vazhangu Vadhu?.
ಸವಿಮಾತುಗಳಿರುವಾಗ (ಅವುಗಳನ್ನು ಬಿಟ್ಟು) ಕಠಿಣವಾದ ಮಾತುಗಳನ್ನು ಆಡುವವರು, ತನಿವಣ್ಣುಗಳಿರುವಾಗ ಅವುಗಳನ್ನು ಬಿಟ್ಟು ಕಾಯನ್ನು ಕಿತ್ತುಕೊಂಡು ತಿಂದಂತೆ.
Tamil Transliteration
Iniya Ulavaaka Innaadha Kooral
Kaniiruppak Kaaikavarn Thatru.