ವ್ಯರ್ಥಲಾಪ ಮಾಡದ್ರುವುದು

Verses

Holy Kural #191
ಹಲವರು ಜುಗುಪ್ಸೆ ಪಡುವಂತೆ ಫಲವಿಲ್ಲದ ಮಾತುಗಳನ್ನಾಡುವವನನ್ನು ಎಲ್ಲರೂ ಹಗುರವಾಗಿ ಕಾಣುತ್ತಾರೆ.

Tamil Transliteration
Pallaar Muniyap Payanila Solluvaan
Ellaarum Ellap Patum.

Explanations
Holy Kural #192
ಹಲವರ ಮುಂದೆ ಫಲವಿಲ್ಲದ ಮಾತುಗಳನ್ನಾಡುವುದು, ಗೆಳೆಯರಲ್ಲಿ ಅಹಿತವನ್ನು ಎಣಿಸುವುದಕ್ಕಿಂತ ಕೆಟ್ಟದು.

Tamil Transliteration
Payanila Pallaarmun Sollal Nayanila
Nattaarkan Seydhalir Reedhu.

Explanations
Holy Kural #193
ಒಬ್ಬನು ಫಲವಿಲ್ಲದ ವಿಷಯಗಳನ್ನು ವಿಸ್ತರಿಸಿ ಬಣ್ಣಕಟ್ಟಿ ಹೇಳುವುದರಿಂದ ಅವನು ಅಸಭ್ಯನೆಂಬುದು ಲೋಕಕ್ಕೆ ಪ್ರಕಟವಾಗುವುದು.

Tamil Transliteration
Nayanilan Enpadhu Sollum Payanila
Paarith Thuraikkum Urai.

Explanations
Holy Kural #194
ಗುಣವಿಲ್ಲದ ವ್ಯರ್ಥ ಮಾತುಗಳನ್ನು ಹಲವರ ಬಳಿ ಆಡುವುದರಿಂದ, (ಒಬ್ಬನನ್ನು) ಅಸಭ್ಯನನ್ನಾಗಿ ಮಾಡಿ ಅವನನ್ನು ಶ್ರೇಯಸ್ಸಿನಿಂದ ದೊರಮಾಡುತ್ತದೆ.

Tamil Transliteration
Nayansaaraa Nanmaiyin Neekkum Payansaaraap
Panpilsol Pallaa Rakaththu.

Explanations
Holy Kural #195
ಒಳ್ಳೆಯ ಗುಣಶಾಲಿಗಳಾದವರು, ಫಲವಿಲ್ಲದ ಮಾತುಗಳನ್ನು ಆಡಿದರೆ, ಅವರ ಕೀರ್ತಿ, ಘನತೆಗಳು ಅಳಿಯುವುದು.

Tamil Transliteration
Seermai Sirappotu Neengum Payanila
Neermai Yutaiyaar Solin.

Explanations
Holy Kural #196
ವ್ಯರ್ಥಾಲಾಪವನ್ನು ಹಲವು ಬಗೆಯಲ್ಲಿ ಮೆಚ್ಚಿ ಕೊಂಡಾಡುವವನನ್ನು ಮನುಷ್ಯ ಎಂದು ಕರೆಯಲಾಗದು;ಅಂಥವನನ್ನು ಮಾನವ ಕುಲದಲ್ಲಿ ಕಾಣಿಸಿಕೊಂಡ ಚೊಳ್ಳು (ಹುರುಳಿಲ್ಲದವನು) ಎಂದು ಕರೆಯಬೇಕು.

Tamil Transliteration
Payanil Sol Paaraattu Vaanai Makanenal
Makkat Padhati Yenal.

Explanations
Holy Kural #197
ವಿಚಾರವಂತರು, ಹಿತವಲ್ಲದ ಮಾತುಗಳನ್ನು ಆಡಿದರೂ ಆಡಲಿ; ಫಲವಿಲ್ಲದ ಮಾತುಗಳನ್ನು ಆಡದಿರುವುದು ಮೇಲು.

Tamil Transliteration
Nayanila Sollinunj Cholluka Saandror
Payanila Sollaamai Nandru.

Explanations
Holy Kural #198
ಮಹೋನ್ನತ ಫಲಗಳನ್ನು ಅರಸುವ ಆಕಾಂಕ್ಷೆಯುಳ್ಳ ಅರಿವುಳ್ಳವರು, ಶ್ರೇಯಸ್ಸು ತಾರದ ಮಾತುಗಳನ್ನು ಆಡರು.

Tamil Transliteration
Arumpayan Aayum Arivinaar Sollaar
Perumpayan Illaadha Sol.

Explanations
Holy Kural #199
ಅಜ್ಞಾನ, ಕಲಂಕಗಳಿಂದ ದೊರವಾದ ದೃಷ್ಟಿಯುಳ್ಳವರು ಒಮ್ಮೆ ಮೈಮರೆತೂ ಅರ್ಥವಿಲ್ಲದ ಮಾತುಗಳನ್ನು ಆಡರು.

Tamil Transliteration
Poruldheerndha Pochchaandhunj Chollaar Maruldheerndha
Maasaru Kaatchi Yavar.

Explanations
Holy Kural #200
ಮಾತುಗಳಲ್ಲಿ ಫಲವಿರುವುದನ್ನೇ ಆಡಬೇಕು; ಫಲವಿರದ ಮಾತುಗಳನ್ನು ಆಡಲೇ ಕೂಡದು.

Tamil Transliteration
Solluka Sollir Payanutaiya Sollarka
Sollir Payanilaach Chol.

Explanations
🡱