ನಡತೆಯುಳ್ಳವನಾಗಿರುವುದು
Verses
ನಡೆತೆಯೇ ಎಲ್ಲರಿಗೂ ಮೇಲ್ಮೆಯನ್ನು ತರುವುದರಿಂದ, ಅದನ್ನು(ನಡತೆಯನ್ನು) ಪ್ರಾಣಕ್ಕಿಂತ ಮೇಲಾಗಿ ಕಾಪಾಡಿಕೊಳ್ಳಬೇಕು.
Tamil Transliteration
Ozhukkam Vizhuppan Tharalaan Ozhukkam
Uyirinum Ompap Patum.
ಕಷ್ಟಪಟ್ಟಾದರೂ ನಡತೆಯನ್ನು ಕಾದುಕೊಳ್ಳಬೇಕು; ಹಲವು ಶಾಸ್ತ್ರಗಳನ್ನು ಶೋಧಿಸಿ ತಿಳಿದುಕೊಂಡರೂ ಅದೇ ಬಾಳಿನ ಆಧಾರವೆಂದು ಅರಿವಾಗುವುದು.
Tamil Transliteration
Parindhompik Kaakka Ozhukkam Therindhompith
Therinum Aqdhe Thunai.
ಒಳ್ಳೆಯ ನಡತೆಯನ್ನು ಹೊಂದಿರುವುದೇ ಸತ್ಕುಲ ಸಂಪನ್ನತೆ; ಕೆಟ್ಟ ನಡತೆ ಕೀಳು ಹುಟ್ಟಿಗೆ ಕಾರಣವಾಗುವುದು.
Tamil Transliteration
Ozhukkam Utaimai Kutimai Izhukkam
Izhindha Pirappaai Vitum.
ಬ್ರಾಹ್ಮಣನಾದವನು ಕಲಿತ ವೇದಗಳನ್ನು ಮುರೆತರೆ ಮತ್ತೆ ಓದಿ ಕಲಿತುಕೊಳ್ಳಬಹುದು. ಆದರೆ ಕುಲ ಭೂಷಣವಾದ ನಡತೆ ಕಿಟ್ಟಲ್ಲಿ ಅವನ ಹುಟ್ಟು ಕೆಡುತ್ತದೆ.
Tamil Transliteration
Marappinum Oththuk Kolalaakum Paarppaan
Pirappozhukkang Kundrak Ketum.
ಅಸೂಯಾಪರನಿಗೆ ಐಶ್ವರ್ಯವಿಲ್ಲದಿರುವ ಹಾಗೆ ನಡತೆ ಇಲ್ಲದವನಿಗೆ ಉನ್ನತಿಯೂ ಇಲ್ಲ.
Tamil Transliteration
Azhukkaa Rutaiyaankan Aakkampondru Illai
Ozhukka Milaankan Uyarvu.
ಕೆಟ್ಟನಡತೆಯಿಂದ ಕೇಡುಂಟಾಗುವುದನ್ನರಿತು, ದೃಢಮನಸ್ಕರಾದ ಜ್ಞಾನಿಗಳು ಧರ್ಮಮಾರ್ಗದಿಂದ ಹಿಂದೆಗೆಯುವುದಿಲ್ಲ
Tamil Transliteration
Ozhukkaththin Olkaar Uravor Izhukkaththin
Edham Patupaak Karindhu.
ಉತ್ತಮ ನಡವಳಿಕೆಯಿಂದ ಮೇಲ್ಮೆಯನ್ನು ಹೊಂದುವರು; ಕೀಳು ನಡವಳಿಕೆಯಿಂದ ಹೊಂದಬಾರದ ನಿಂದೆಗೆ ಗುರಿಯಾಗುವರು
Tamil Transliteration
Ozhukkaththin Eydhuvar Menmai Izhukkaththin
Eydhuvar Eydhaap Pazhi.
ಉತ್ತಮವಾದ ನಡವಳಿಕೆ ಸುಖದ ಬಾಳಿಗೆ ಅಂಕುರವಾಗುವುದು; ಕೀಳು ನಡವಳಿಕೆ ಎಂದಿಗೂ ವ್ಯಸನವನ್ನು ತರುತ್ತದೆ
Tamil Transliteration
Nandrikku Viththaakum Nallozhukkam Theeyozhukkam
Endrum Itumpai Tharum.
ಉತ್ತಮ ನಡೆವಳಿಕೆಯುಳ್ಳವರು ಮರೆತೂ ಕೆಟ್ಟ ನುಡಿಗಳನ್ನು ಬಾಯಿಂದ ಆಡಲು ಅಸಮರ್ಥರಾಗುತ್ತಾರೆ.
Tamil Transliteration
Ozhukka Mutaiyavarkku Ollaave Theeya
Vazhukkiyum Vaayaar Solal.
ಲೋಕದೊಂದಿಗೆ ಸಮರಸವಾಗಿ ಬಾಳದವರು, ಹಲವನ್ನು ಕಲಿತೂ ಅಜ್ಞಾನಿಗಳಂತೆ ಇರುತ್ತಾರೆ
Tamil Transliteration
Ulakaththotu Otta Ozhukal Palakatrum
Kallaar Arivilaa Thaar.