ತಪಸ್ಸು

Verses

Holy Kural #261
ಬಂದ ನೋವನ್ನು ತಾಳಿಕೊಳ್ಳುವುದು, ಇತರ ಪ್ರಾಣಿಗಳಿಗೆ ದುಃಖವುಂಟು ಮಾಡದಿರುವುದು, ಇವೇ ತಪಸ್ಸಿನ ಲಕ್ಷಣವೆನಿಸಿಕೊಳ್ಳುವುದು.

Tamil Transliteration
Utranoi Nondral Uyirkkurukan Seyyaamai
Atre Thavaththir Kuru.

Explanations
Holy Kural #262
ತಪಸ್ಸು ಎನ್ನುವುದು ಅದನ್ನು ಪೂರ್ವಜನ್ಮದಲ್ಲಿ ಸಾಧಿಸಿದವರಿಗೆ ಮಾತ್ರ ಲಭ್ಯವಾಗುವುದು. ಪೂರ್ವಸಿದ್ದಿ ಇಲ್ಲದವರು ಅದನ್ನು
ಕೈಗೊಂಡರೆ ಅದು ಬಿಷ್ಫಲವಾಗುವುದು.

Tamil Transliteration
Thavamum Thavamutaiyaarkku Aakum Adhanai
Aqdhilaar Merkol Vadhu.

Explanations
Holy Kural #263
ಎಲ್ಲವನ್ನೂ ತೊರೆದು ತಪಸ್ಸಿಗೆ ಕುಳಿತವರಿಗೆ, ಆಹಾರ ಮೊದಲಾದವನ್ನು ನೀಡಿ ನೆರವಾಗಬೇಕೆಂದು ಬಯಸಿ ತಪಸ್ವಿಗಳಾಗದೆ
ಉಳಿದವರು (ಆಂದರೆ ಗೃಹಸ್ಧರು) ತಪಸ್ಸನ್ನು ಮರೆತಿದ್ದಾರೆಯಾ?

Tamil Transliteration
Thurandhaarkkuth Thuppuravu Venti Marandhaarkol
Matrai Yavarkal Thavam.

Explanations
Holy Kural #264
ಒಲ್ಲದವರನ್ನು ಅಡಗಿಸುವುದಾಗಲೀ. ಒಲಿದವರನ್ನು ಮೇಲೆತ್ತುವುದಾಗಲೀ, ನೆನೆದ ಮಾತ್ರಕ್ಕೆ ತಪೋಬಲದಿಂದ ಸಾಧ್ಯವಾಗುವುದು.

Tamil Transliteration
Onnaarth Theralum Uvandhaarai Aakkalum
Ennin Thavaththaan Varum.

Explanations
Holy Kural #265
ತಪಸ್ಸಿನಿಂದ ಬೇಡಿದ ಫಲಗಳನ್ನು ಬೇಡಿದಂತೆಯೇ ಪಡೆಯಲು ಸಾಧ್ಯವಾಗುವುದರಿಂದ, ಆ ತಪಸ್ಸನ್ನು ಇಲ್ಲಿಯೇ (ಈ ಜನ್ಮದಲ್ಲಿಯೇ)
ಸಾಧಿಸಿಕೊಳ್ಳಬೇಕು.

Tamil Transliteration
Ventiya Ventiyaang Keydhalaal Seydhavam
Eentu Muyalap Patum.

Explanations
Holy Kural #266
ತಪಸ್ಸು ಮಾಡುವವರು ತಮ್ಮ ಕರ್ಮಗಳನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾರೆ. ಮತ್ತಲ್ಲದವರು, ಅತಿಯಾಶೆಗೊಳಗಾಗಿ ಹೀನ
ಕೆಲಸಗಳನ್ನು ಮಾಡುತ್ತಾರೆ.

Tamil Transliteration
Thavanj Cheyvaar Thangarumanj Cheyvaarmar Rallaar
Avanjeyvaar Aasaiyut Pattu.

Explanations
Holy Kural #267
ಪುಟವಿಟ್ಟಂತೆಲ್ಲ ಚಿನ್ನವು ಹೆಚ್ಚು ಹೊಳೆಯುವುದು; ಅದರಂತೆ ತಪಸ್ಸಿಗಳು ಹೆಚ್ಚು ಕಷ್ಟಕ್ಕೀಡಾದಂತೆಲ್ಲ ಆತ್ಮಬಲ ವರ್ಧಿಸುತ್ತದೆ

Tamil Transliteration
Sutachchutarum Ponpol Olivitum Thunpanjjch
Utachchuta Norkir Pavarkku.

Explanations
Holy Kural #268
ತಪೋಬಲದಿಂದ ಮೋಹವನ್ನು ಕತ್ತರಿಸಿಕೊಂಡು, ತನ್ನ ಪ್ರಾಣವನ್ನು (ಆತ್ಮ ಬಲವನ್ನು) ಸಂಪೂರ್ಣವಾಗಿ ಹತೋಟೆಯಲ್ಲಿಟ್ಟು
ಕೊಂಡವನನ್ನು ಲೋಕದಲ್ಲಿರುವ ಜೀವಿಗಳೆಲ್ಲ ತಲೆಬಾಗಿ ವಂದಿಸುವುವು.

Tamil Transliteration
Thannuyir Thaanarap Petraanai Enaiya
Mannuyi Rellaan Thozhum.

Explanations
Holy Kural #269
ತಪಸ್ಸಿನ ಬಲವನ್ನು ಸಾಧಿಸಿಕೊಂಡವರಿಗೆ ಮೃತ್ಯುವನ್ನು ಮೆಟ್ಟಿ ಗೆಲ್ಲುವುದೂ ಸಾಧ್ಯವಾಗುತ್ತದೆ.

Tamil Transliteration
Kootram Kudhiththalum Kaikootum Notralin
Aatral Thalaippat Tavarkkul.

Explanations
Holy Kural #270
ಈ ಲೋಕದಲ್ಲಿ ಇಲ್ಲದವರೇ ಹೆಚ್ಚು ಮಂದಿ, ಉಳ್ಳವರು ಕೆಲವೇ ಮಂದಿ; ಇದಕ್ಕೆ ಕಾರಣ ತಪಸ್ಸನ್ನಾಚರಿಸುವವರು ಕೆಲವೇ
ಮಂದಿಯಾಗಿ ಬಹುಪಾಲು ಜನ ತಪಸ್ಸಿನಿಂದ ದೂರವಾಗಿರುವುದೇ.

Tamil Transliteration
Ilarpala Raakiya Kaaranam Norpaar
Silarpalar Nolaa Thavar.

Explanations
🡱