ಅನುಚಿತ ನಡೆವಳಿಕೆ

Verses

Holy Kural #271
ವಂಚನೆಯ ಮನಸ್ಸುಳ್ಳವನ ಹುಸಿ ನಡೆವಳಿಕೆಯನ್ನು ಕಂಡು ಅವನ ಶರೀರ ದೊಳಗಿರುವ ಪಂಚಭೂತಗಳು ತಮ್ಮೊಳಗೇ ನಗುತ್ತವೆ.

Tamil Transliteration
Vanja Manaththaan Patitrozhukkam Poodhangal
Aindhum Akaththe Nakum.

Explanations
Holy Kural #272
ತಾನು ತಿಳಿದ ಅಪರಾಧಗಳಲ್ಲಿ ಮನಸ್ಸನ್ನು ತೊಡಗಿಸಿದರೆ, ಬಾನಿನೆತ್ತರದ ತೋರಿಕೆಯ ಬದುಕು ಇದ್ದರೂ ಅದು ಏನು ಫಲ
ಸಾಧಿಸಬಲ್ಲುದು?(ಅದು ವ್ಯರ್ಥ ಬದುಕು ಎನಿಸಿಕೊಳ್ಳುತ್ತದೆ.

Tamil Transliteration
Vaanuyar Thotram Evanseyyum Thannenjam
Thaanari Kutrap Patin.

Explanations
Holy Kural #273
ಮನಸ್ಸನ್ನು ಇಂದ್ರಿಯಗಳ ಆಸೆಗಳಿಂದ ಅಡಗಿಸುವ ಬಲವಿಲ್ಲದವನು ಕೈಗೊಂಡ ಕಠಿಣ ತಪಸ್ಸು, ಹಸು ಚರ್ಮವನ್ನು ಹೊದ್ದುಕೊಂಡು
ಹುಲ್ಲು ಮೇಯವಂತೆ, ಅಭಾಸಸಕರವಾದದ್ದು.

Tamil Transliteration
Valiyil Nilaimaiyaan Valluruvam Petram
Puliyindhol Porththumeyn Thatru.

Explanations
Holy Kural #274
ತಪಶ್ಶಕ್ತೀಯ ಮರೆಯಲ್ಲಿ ಸಲ್ಲದ ಕೀಳು ಕೆಲಸಗಳನ್ನು ಮಾಡುವುದು, ಪೋದರ ಮರೆಯಲ್ಲಿ ಅವಿತುಕೊಂಡು ಬೇಡನು ಹಕ್ಕಿಗಳನ್ನು
ಬಲೆಬೀಸಿ ಹಿಡಿದಂತೆ.

Tamil Transliteration
Thavamaraindhu Allavai Seydhal Pudhalmaraindhu
Vettuvan Pulsimizhth Thatru.

Explanations
Holy Kural #275
"ಆಶೆಗಳನ್ನು ತೊರೆದಿದ್ದೇವೆ" ಎಂದುಕೊಳ್ಳುವವರ ಹುಸಿ ನಡವಳಿಕೆಯು, "ನಾವು ಎಂಥ ತಪ್ಪು ಮಾಡಿದೆವು" ಎಂದು ಚಿಂತಿಸುವಂತೆ,
ಹಲವು ತೆರದ ದುಃಖಗಳನ್ನು ಉಂಟು ಮಾಡುವುದು.

Tamil Transliteration
Patratrem Enpaar Patitrozhukkam Etretrendru
Edham Palavun Tharum.

Explanations
Holy Kural #276
ಮನಸ್ಸಿನಲ್ಲಿ (ಆಶೆಗಳನ್ನು) ತೊರೆಯದೆ, ತೊರೆದವರಂತೆ ನಟಿಸುತ್ತ ವಂಚಿಸಿ ಬಾಳುವವರಿಗಿಂತ, ಕ್ರೂರ ಮನಸ್ಸಿನವರು ಬೇರೆ ಇಲ್ಲ.

Tamil Transliteration
Nenjin Thuravaar Thurandhaarpol Vanjiththu
Vaazhvaarin Vankanaar Il.

Explanations
Holy Kural #277
ಹೊರಗೆ ತೋರಿಕೆಗೆ ಗುಲಗುಂಜಿ ಮಣಿಯಂತೆ ಕೆಂಪಾಗಿ ಕಂಡರೂ ಮನಸ್ಸಿನೊಳಗೆ ಆ ಮಣಿಯ ತಾದಿಯಲ್ಲಿರುವ ಕಪ್ಪಿನಂತೆ
ತೋರಿಕೊಳ್ಳುವವರೂ ಈ ಲೋಕದಲ್ಲಿ ಇದ್ದಾರೆ.

Tamil Transliteration
Purangundri Kantanaiya Renum Akangundri
Mukkir Kariyaar Utaiththu.

Explanations
Holy Kural #278
ಮನಸ್ಸಿನೊಳಗೆ ಕೊಳೆ ತುಂಬಿಕೊಂಡು ಮಹಾಮಹಿಮರಂತೆ ನೀರಲ್ಲಿ ಮುಳುಗಿ ಏಳುವ ವಂಚನೆಯ ಬದುಕುಳ್ಳವರು ಈ ಲೋಕದಲ್ಲಿ
ಹಲವರಿದ್ದಾರೆ.

Tamil Transliteration
Manaththadhu Maasaaka Maantaar Neeraati
Maraindhozhuku Maandhar Palar.

Explanations
Holy Kural #279
ಬಾಣವು ನೋಡಲು ನೇರವಾಗಿದ್ದರೂ ಅದರ ಗುಣ ಕೊಂಕು, ಕ್ರೂರ. ವೀಣೆಯ ತೋರಿಕೆಯಲ್ಲಿ ದೊಂಕಾಗಿದ್ದರೂ ಅದು ಇಂಪು. ಅದೇ
ರೀತಿಯಲ್ಲಿ ಜನರ ಗುಣಗಳನ್ನು ಅವರವರ ನಡವಳಿಕೆಯಿಂದ ಅರಿಯಬೇಕು.

Tamil Transliteration
Kanaikotidhu Yaazhkotu Sevvidhuaang Kanna
Vinaipatu Paalaal Kolal.

Explanations
Holy Kural #280
ಲೋಕವು ನಿಂದಿಸುವ ಕೆಟ್ಟ ನಡವಳಿಕೆಯನ್ನು ಬಿಟ್ಟುಬಿಟ್ಟರೆ, ತಮ್ಮ ವೈರಾಗ್ಯವನ್ನು ಸೂಚಿಸಲು, ತಲೆ ಬೋಳಿಸಿಕೊಳ್ಳುವುದಾಗಲೀ,
ಜಟೆ ಬೆಳೆಸುವುದಾಗಲೀ ಬೇಕಿಲ್ಲ.

Tamil Transliteration
Mazhiththalum Neettalum Ventaa Ulakam
Pazhiththadhu Ozhiththu Vitin.

Explanations
🡱