ಕೋಪದ ಹರಿತ
Verses
ಪರಸ್ತ್ರೀ ಸಂಗಾಭಿಲಾಷಿಯೇ! ಹೆಣ್ತನವುಳ್ಳವರೆಲ್ಲ ನಿನ್ನನ್ನು ಬಹಿರಂಗವಾಗಿ ತಮ್ಮ ಕಣ್ಣುಗಳಿಂದ ಭೋಗಿಸುವರು. ಅದ್ದರಿಂದ
ನಾನು ನಿನ್ನದೆಯನ್ನು ಸೇರಲಾರೆ!
Tamil Transliteration
Penniyalaar Ellaarum Kannin Podhuunpar
Nannen Paraththanin Maarpu.
ನಾನು ಪ್ರಿಯನೊಂದಿಗೆ ಕೋಪದಿಂದ ಮುನಿಸಿಕೊಂಡಿರುವಾಗ, ನಾನು ಅವರನ್ನು ನಿಡುಗಾಲ ಬಾಳಲಿ ಎಂದು ಬಾಯಿ
ತೆರೆದು ಹೇಳುವನೆಂದು ಬಗೆದು ಅವರು (ಗಟ್ಟಿಯಾಗಿ) ನೀನಿದರು.
Tamil Transliteration
Ooti Irundhemaath Thumminaar Yaamdhammai
Neetuvaazh Kenpaak Karindhu.
ಕೊಂಬೆಗಳಲ್ಲಿ ಅರಳಿದ ಹೂಗಳನ್ನು ಬಯಸಿ ಮುಡಿದುಕೊಂಡರೂ, "ನೀವುನಿಮ್ಮ ಅಲಂಕಾರವನ್ನು ಯಾರೊಬ್ಬಳಿಗೋ
ತೋರಿಸಲು ಮುಡಿದುಕೊಂಡಿರಿ" ಎಂದು ಕೋಪಿಸಿಕೊಳ್ಳುವಳು.
Tamil Transliteration
Kottup Pooch Chootinum Kaayum Oruththiyaik
Kaattiya Sootineer Endru.
ಬೇರೆ ಯಾರಿಗಿಂತಲೂ ನಿನ್ನನ್ನೇ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ನಾನು ಹೇಳುವಾಗ "ಯಾರಿಗಿಂತ? ಯಾರಿಗಿಂತ?"
ಎಂದು ಮುನಿಸಿಕೊಂಡಳು.
Tamil Transliteration
Yaarinum Kaadhalam Endrenaa Ootinaal
Yaarinum Yaarinum Endru.
ಈ ಜನ್ಮದಲ್ಲಿ ನಾನು ನಿನ್ನನ್ನು ಅಗಲುವುದಿಲ್ಲ ಎಂದು ನಾನು ಹೇಳಿದಾಗ ಅವಳು ಕಣ್ಣು ತುಂಬ ನೀರು ತಂದುಕೊಂಡಳು.
(ಮರು ಜನ್ಮದಲ್ಲಿ ಅಗಲಿಕೆ ಬರುವುದೆಂದು ನೆನೆದು ಕಣ್ಣಲ್ಲಿ ನೀರು ತಂದುಕೊಂಡಳು)
Tamil Transliteration
Immaip Pirappil Piriyalam Endrenaak
Kannirai Neerkon Tanal.
ನಿನ್ನನ್ನು ನೆನೆಸಿಕೊಂಡೆನೆಂದು ನಾನು ಹೇಳಿದಾಗ "ನೆನೆಸಿಕೊಳ್ಳುವುದರಲ್ಲಿಯೂ ಮರೆವು ಇರಬೇಕಲ್ಲವೆ? ಏಕೆ ಮರೆತಿರಿ"
ಎಂದು ನನ್ನನ್ನು ತಬ್ಬಿಕೊಳ್ಳದೆ ಮುನಿಸು ತೋರಿವಳು.
Tamil Transliteration
Ullinen Endrenmar Renmarandheer Endrennaip
Pullaal Pulaththak Kanal.
ನಾನು ಸೀನಿದಾಗ ಅವಳು ನೂರ್ಗಲ ಬಾಳೆಂದು ಹರಸಿದಳು; ಒಡನೆಯೇ "ಯಾರು ನಿಮ್ಮನ್ನು ನೆನೆದುದರಿಂದ ಸೀನಿದಿರಿ?"
ಎಂದು ಕೇಳುತ್ತ ದುಃಖಿಸಿ ಅತ್ತಳು.
Tamil Transliteration
Vazhuththinaal Thumminen Aaka Azhiththazhudhaal
Yaarullith Thummineer Endru.
(ಅವಳ ಮುನಿಸಿಗೆ ಅಂಜೆ) ನಾನು ಬಂದ ನೀನನ್ನು ಅಡಗಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅವಳು ನಿಮ್ಮವರು
ಯಾರೋ ನಿಮ್ಮನ್ನು ನೆನೆಯುತ್ತಿರುವುದನ್ನು ನನ್ನಿಂದ ಮರೆಸಲು ಯತ್ನಿಸುತ್ತಿದ್ದೀರಾ- ಎಂದು ಹೇಳಿ ಅತ್ತಳು.
Tamil Transliteration
Thummuch Cheruppa Azhudhaal Numarullal
Emmai Maraiththiro Endru.
ಅವಳು ಮುನಿಸಿಕೊಂಡಿರುವಾಗ ಅವಳನ್ನು ಸಂತಯಿಸ ಹೋದರೂ "ನೀವು ಇತರ ಸ್ತ್ರೀಯರಿಗೂ ಇದೇ ರೀತಿ ಮಾಡೂವಿರಿ"
ಎಂದು ಹೇಲಿ ಕೋಪವನ್ನು ತಾಳುವಳು.
Tamil Transliteration
Thannai Unarththinum Kaayum Pirarkkumneer
Inneerar Aakudhir Endru.
ಅವಳ ಚೆಲುವನ್ನು ನೆನೆದು ಮೌನವಾಗಿ ನೋಡುತ್ತಿರುವಾಗಲೂ "ನೀವು ಯಾರನ್ನು ನೆನೆದು ಈ ರೀತಿ ನೋಡುತ್ತಿರುವಿರಿ"
ಎಂದು ಕೇಳಿ ಕೋಪಗೊಳ್ಳುವಳು
Tamil Transliteration
Ninaiththirundhu Nokkinum Kaayum Anaiththuneer
Yaarulli Nokkineer Endru.