ಕೂಡುಗೆ
Verses
ಬಡತನದಲ್ಲಿರುವವರಿಗೆ ಒಂದು ವಸ್ತುವನ್ನು ನೀಡಿದರೆ ಅದೇ ನಿಜವಾದ ಕೊಡುಗೆ; ಉಳಿದವರಿಗೆ ಕೊಡುವುದು ಎಲ್ಲ ಪ್ರತಿ ನಿರೀಕ್ಷಿಯಿಂದ
ಕೊಟ್ಟ ಕೊಡುಗೆ ಎನಿಸಿಕೊಳ್ಳುವುದು.
Tamil Transliteration
Variyaarkkondru Eevadhe Eekaimar Rellaam
Kuriyedhirppai Neera Thutaiththu.
ಬೇರೆಯವರಿಂದ ಬೇಡಿ ಪಡೆದುಕೊಳ್ಳುವುದು ಒಳ್ಳೆಯ ಮಾರ್ಗವೆಂದು ಹಲವರು ಹೇಳಿದರೂ ಅದು ಪಾಪಕರ; ಕೊಡುವುದರಿಂದ
ಮೇಲುಲೋಕ (ಸ್ವರ್ಗ) ವು ತನಗೆ ಇಲ್ಲ ಎಂದರೂ ಈಯುವುದೇ ಒಳ್ಳೆಯ ಮಾರ್ಗ.
Tamil Transliteration
Nallaaru Eninum Kolaldheedhu Melulakam
Illeninum Eedhale Nandru.
ತನ್ನಲ್ಲಿ ಏನು ಇಲ್ಲವಾದರೂ ಆ ದುಃಖವನ್ನು ಯಾರಲ್ಲಿಯೂಹೇಳಿಕೊಳ್ಳದೆ ಇತರರಿಗೆ ಕೊಡುವ ಗುಣವು ಕುಲವುಳ್ಳವನ
ಲಕ್ಷಣವೆನಿಸಿಕೊಳ್ಳುವುದು.
Tamil Transliteration
Ilanennum Evvam Uraiyaamai Eedhal
Kulanutaiyaan Kanne Yula.
ಬೇಡುವವರ ಆರ್ತತೆಯ ಅಹಿತರವಾದುದು; ಅವರ ಮನಸ್ಸು ತೃಪ್ತಿಯಾಗಿ ಮುಖವು ನಗೆಯಿಂದ ಅರಳುವವರೆಗೂ ಕೊಡುಗೈಯಿಂದ
ಕೊಡಬೇಕು.
Tamil Transliteration
Innaadhu Irakkap Patudhal Irandhavar
Inmukang Kaanum Alavu.
ತಪೋಬಲವೆಂದರೆ ಹಸಿವನ್ನು ಅಡಗಿಸಿಕೊಳ್ಳುವ ಶಕ್ತಿ. ಆದರೆ ಹಸಿವಿನಿಂದ ಕೆಂಗೆಟ್ಟವರಿಗೆ ಉಣವಿತ್ತು ಅವರ ಹಸಿವನ್ನು
ಕಳೆಯುವುದರಿಂದ ಅದು ಎರೆಡನೆಯದು.
Tamil Transliteration
Aatruvaar Aatral Pasiaatral Appasiyai
Maatruvaar Aatralin Pin.
ಆರ್ತರಾದವರ ಕಡು ಹಸಿವನ್ನು ತೀರಿಸಬೇಕು; ಅದೇ ಪಡೆದವನು ತನ್ನ ಸಿರಿಯನ್ನು ಕೂಡಿಡುವ ನೆಲೆ.
Tamil Transliteration
Atraar Azhipasi Theerththal Aqdhoruvan
Petraan Porulvaip Puzhi.
ತಾನು ಪಡೆದ ಸೊತ್ತನ್ನು ಇತರರೊಡನೆ ಪಾಲ್ಗೊಂಡು ಉಣ್ಣುವವನನ್ನು ಹಸಿವೆನ್ನುವ ಕ್ರೂರ ಬಾಧೆ ತಟ್ಟುವುದಿಲ್ಲ.
Tamil Transliteration
Paaththoon Mareei Yavanaip Pasiyennum
Theeppini Theental Aridhu.
ತಾವು ಗಳಿಸಿರುವ ಸೊತ್ತನ್ನು ಬಚ್ಚಿಟ್ಟು ಕಳೆಯುವ ಕಲ್ಲು ಮನಸ್ಸಿನವರು ಕೊಟ್ಟು ನಲಿಯುವ ಸುಖವನ್ನು ಅರಿಯಲಾರರೆ?
Tamil Transliteration
Eeththuvakkum Inpam Ariyaarkol Thaamutaimai
Vaiththizhakkum Vanka Navar.
ಕೂಡಿಟ್ಟುದನ್ನು ಇತರರಿಗೆ ಕೊಡದೆ ತಾವೇ ತನಿಯಾಗಿ ಉಂಟು ಅನುಭವಿಸುವುದು, ಬೇಡಿ ಉಣ್ಣುವುದಕ್ಕಿಂತ ಕೀಳು.
Tamil Transliteration
Iraththalin Innaadhu Mandra Nirappiya
Thaame Thamiyar Unal.
ಸಾಯುವುದಕ್ಕಿಂತ ಸಂಕಟಕರವಾದುದು ಬೇರೆ ಇಲ್ಲ; ಆದರೆ ಕೊಡಲು ಸಾಧ್ಯವಾಗದಿರುವ ಕಡೆ ಆ ಸಾವೇ ಸುಖಕರವೆನಿಸುವುದು.
Tamil Transliteration
Saadhalin Innaadha Thillai Inidhadhooum
Eedhal Iyaiyaak Katai.