ಹಗೆತನದ ಹಿರಿಮೆ
Verses
ತಮಗಿಂತ ಬಲಿಷ್ಠರಾದವರ ಮೇಲೆ ಎದುರಿಸಿ ಹೋಗುವುದನ್ನು ತಪ್ಪಿಸಿಕೊಳ್ಳಬೇಕು; ಬಲಹೀನರಾದವರ ಮೇಲೆ ಹಗೆತನವನ್ನು ಬಿಡದೆ ಸಾಧಿಸಬೇಕು.
Tamil Transliteration
Valiyaarkku Maaretral Ompuka Ompaa
Meliyaarmel Meka Pakai.
(ಬಂಧು ಮಿತ್ರರ) ಪ್ರೀತಿ ಗಳಿಸದಿರುವವನು, ಬಲಿಷ್ಠವಾದ ನೆರವಿಲ್ಲದವನು, ತಾನೂ ಬಲಹೀನನಾಗಿರುವವನು, ಶತ್ರುವಿನ ಬಲವನ್ನು ಹೇಗೆ ಎದುರಿಸಬಲ್ಲನು?
Tamil Transliteration
Anpilan Aandra Thunaiyilan Thaandhuvvaan
Enpariyum Edhilaan Thuppu.
ಒಬ್ಬನು ಅಂಜುಬುರುಕನಾಗಿ, ತಿಳಿವಳಿಕೆ ಇಲ್ಲದವನಾಗಿ, ಹೊಂದಿಕೊಂಡು ಹೋಗುವ ಗುಣವಿಲ್ಲದವನಾಗಿ, ಕೊಡುವ ಧಾರಾಳತೆ ಇಲ್ಲದವನಾಗಿದ್ದರೆ, ಅವನು ಹಗೆಗಳಿಗೆ ಸುಲಭನೂ ಸದರನೂ ಎನಿಸಿಕೊಳ್ಳುತ್ತಾನೆ.
Tamil Transliteration
Anjum Ariyaan Amaivilan Eekalaan
Thanjam Eliyan Pakaikku.
ಕೋಪವನ್ನು ನೀಗದವನು, ತುಂಬಿದ ಗುಣವಿಲ್ಲದವನು ಅಂದರೆ ರಹಸ್ಯಗಳನ್ನು ಕಾಪಾಡಿಕೊಳ್ಳದವನು ಯಾವ ಕಾಲದಲ್ಲೂ ಯಾವೆಡೆಯಲ್ಲೂ ಯಾರಿಗಾದರೂ ಸದರವೆನಿಸಿಕೊಳ್ಳುವನು.
Tamil Transliteration
Neengaan Vekuli Niraiyilan Egngnaandrum
Yaanganum Yaarkkum Elidhu.
ನೀತಿ ಗ್ರಂಥಗಳಲ್ಲಿರುವ ಒಳ್ಳೆಯ ಮಾರ್ಗವನ್ನು ಕಾಣದವನು, ಸೂಕ್ತವಾದುದನ್ನು ಮಾಡದಿರುವವನು, ತನಗೆ ಬಂದ ನಿಂದೆಯನ್ನು ಲೆಕ್ಕಕ್ಕೆ ತರದವನು, ಸದ್ಗುಣಗಳಿಲ್ಲದವನು, ಹಗೆಗಳಿಗೆ (ಸದರವೆನಿಸಿ) ಸಂತೋಷವನ್ನುಂಟು ಮಾಡುವನು.
Tamil Transliteration
Vazhinokkaan Vaaippana Seyyaan Pazhinokkaan
Panpilan Patraarkku Inidhu.
ನಿಜವರಿಯದೆ ಕೋಪ ತಾಳುವವನ, ಅತಿಯಾದ ಕಾಮ (ಆಶೆ) ವುಳ್ಲವನ ಹಗೆತನವನ್ನು, (ಹಗೆಗಳಾದವರು) ಬಯಸಿ ಸ್ವಾಗತಿಸುತ್ತಾರೆ.
Tamil Transliteration
Kaanaach Chinaththaan Kazhiperung Kaamaththaan
Penaamai Penap Patum.
ಒಂದು ಕೆಲಸದಲ್ಲಿ ತೊಡಗಿ ಅದನ್ನು ವಿರುದ್ಧವಾದ ದಿಕ್ಕಿನಲ್ಲಿ ಮುಗಿಸುವವನ ಹಗೆತನವನ್ನು ಹಣ ಕೊಟ್ಟಾದರೂ ಕೊಂಡುಕೊಳ್ಳಬೇಕು.
Tamil Transliteration
Kotuththum Kolalventum Mandra Atuththirundhu
Maanaadha Seyvaan Pakai.
ಒಬ್ಬನು ಗುಣವಿಲ್ಲದವನಾಗಿ, ಅವನಲ್ಲಿ ಹಲವಾರು ದೋಷಗಳು ಇದ್ದರೆ ಅವನಿಗೆ ಕೆಳೆಯೇ ಇಲ್ಲವಾಗುವುದು. (ಅದರಿಂದ) ಅವನ ಹಗೆಗಳಿಗೆ ಸಂತೋಷವಾಗುವುದು.
Tamil Transliteration
Kunanilanaaik Kutram Palavaayin Maatraarkku
Inanilanaam Emaap Putaiththu.
ನ್ಯಾಯದ ತಿಳುವಳಿಕೆ ಇಲ್ಲದವರೂ, ಅಂಜುಕುಳಿ ಸ್ವಭಾವದವರೂ ಆದ ಹಗೆಗಳನ್ನು ಪಡೆದರೆ, ಅವರನ್ನು ಎದುರಿಸುವವರ ಸಂತೋಷಕ್ಕೆ ಕೋನೆಯೇ ಇಲ್ಲವಾಗುವುದು.
Tamil Transliteration
Seruvaarkkuch Chenikavaa Inpam Arivilaa
Anjum Pakaivarp Perin.
ಕಲಿಯದ ಅಜ್ಞಾನಿಯ ಹಗೆತನವನ್ನು ಸಾಧಿಸುವುದರಿಂದ ಬರುವ ಸುಲಭ ಸಂಪತ್ತನ್ನು ಬಯಸದಿರುವವನನ್ನು ಎಂದೂ ಕೀರ್ತಿಯೆಂಬ ಬೆಳಕು ಬಂದು ಸೇರುವುದಿಲ್ಲ.
Tamil Transliteration
Kallaan Vekulum Siruporul Egngnaandrum
Ollaanai Ollaa Tholi.