ಸಮಾಗಮದ ಬಯಕೆ

Verses

Holy Kural #1281
ಮನಸ್ಸಿನಲ್ಲಿ ನೆನೆದ ಮಾತಕ್ಕೇ ಮತ್ತೇರಿಸುವುದೂ, ಕಂಡ ಮಾತ್ರಕ್ಕೆ ಆನಂದವನ್ನನುಭವಿಸುವುದೂ- ಈ ಗುಣಗಳು ಕಳ್ಳಿಗೆ
ಇಲ್ಲ, ಕಾದುಕ್ಕೆ ಉಂಟು.

Tamil Transliteration
Ullak Kaliththalum Kaana Makizhdhalum
Kallukkil Kaamaththir Kuntu.

Explanations
Holy Kural #1282
ಪ್ರೇಮವು ತಾಳೆಮರದೆತ್ತರಕ್ಕೆ ಉಕ್ಕಿ ಹರಿದಾಗ, ಇನಿಯನೊಂದಿಗೆ ಒಂದು ಧಾನ್ಯದ ಕಾಳಿನಷ್ಟು ಪ್ರಣಯ ಕೋಪವನ್ನು
ತೋರದೆ ಇರಬೇಕು.

Tamil Transliteration
Thinaiththunaiyum Ootaamai Ventum Panaith Thunaiyum
Kaamam Niraiya Varin.

Explanations
Holy Kural #1283
ಪ್ರಿಯತಮನು ನನ್ನನ್ನು ಬಯಸದೆ ನಿರ್ಲಕ್ಷಿಸಿ, ತನ್ನ ಮನಸ್ಸಿಗೆ ಬಂದಂತೆ ನಡೆದುಕೊಂಡರೂ ಅವನನ್ನು ಕಾಣದೆ ನನ್ನ
ಕಣ್ಣುಗಳು ವಿಷ್ರಮಿಸುವುದಿಲ್ಲ.

Tamil Transliteration
Penaadhu Petpave Seyyinum Konkanaik
Kaanaa Thamaiyala Kan.

Explanations
Holy Kural #1284
ಸಖೀ! ನಾನು ಅವನೊಡನೆ ಕಲಹ ಮಾಡಲು ಹೊರಟೆನಲ್ಲವೆ! ಆದರೆ ನನ್ನ ಮನಸ್ಸು ಅದನ್ನು ಮರೆತು ಅವನೊಡನೆ
ಕೂಡುವುದಕ್ಕೆ ಹಾತೊರೆಯಿತು.

Tamil Transliteration
Ootarkan Sendrenman Thozhi Adhumarandhu
Kootarkan Sendradhu En Nenju.

Explanations
Holy Kural #1285
ಕಾಡಿಗೆ ಬಳಿಯುವಾಗ, ಕಾಡಿಗೆ ಕಡ್ಡಿಯನ್ನು ಕಾಣಲಾರದ ಕಣ್ಣುಗಳಂತೆ, ಪ್ರಿಯತಮನನ್ನು ಕಂಡಾದ ಮಾತ್ರ, ಅವನ
ದೋಷಗಳನ್ನೆಲ್ಲ ನೆನೆದುಕೊಳ್ಳದೆ ಮರೆತು ಬಿಡುವೆನು.

Tamil Transliteration
Ezhudhungaal Kolkaanaak Kannepol Konkan
Pazhikaanen Kanta Itaththu.

Explanations
Holy Kural #1286
ಪ್ರಿಯತಮನ ಸಮ್ಮುಖದಲ್ಲಿ ಅವರ ದೋಷಗಳನ್ನು ನಾನು ಕಾಣುವುದಿಲ್ಲ; ಅವರನ್ನು ಕಾಣದಿರುವ ಸಮಯದಲ್ಲಿ ಅವರ
ತಪ್ಪುಗಳಲ್ಲದೆ ಒಪ್ಪುಗಳನ್ನು ನಾನು ಕಾಣಲಾರಳಾಗಿದ್ದೇನೆ.

Tamil Transliteration
Kaanungaal Kaanen Thavaraaya Kaanaakkaal
Kaanen Thavaral Lavai.

Explanations
Holy Kural #1287
ಪ್ರವಾಹವು ಸೆಳೆದುಕೊಂಡು ಹೋಗುವುದನ್ನು ಅರಿತೂ ಹರಿಯುವ ನೀರಲ್ಲಿ ಹಾಯುವವರಂತೆ,
ಪ್ರಯೋಜನವಿಲ್ಲದಿರುವುದನ್ನು ಅರಿಯೂ (ಪ್ರಿಯತಮನೊಂದಿಗೆ) ಪ್ರಣಯ ಕೋಪವನ್ನು ತೋರಿಸುವುದರಲ್ಲಿ ಏನು ಫಲವಿದೆ?

Tamil Transliteration
Uyththal Arindhu Punalpaai Pavarepol
Poiththal Arindhen Pulandhu.

Explanations
Holy Kural #1288
ಓ ಕಳ್ಳನೇ! ಅವಮಾನಕರವಾದ ದುಃಖಗಳನ್ನು ತಂದೊಡ್ಡಿದರೂ ಅವು ಲೇರಿದವರಿಗೆ ಕಳ್ಳು ಹೇಗೆ ಪ್ರಿಯವೋ ಹಾಗೆ ನಿನ್ನ
ಎದೆಯು ನನಗೆ!

Tamil Transliteration
Iliththakka Innaa Seyinum Kaliththaarkkuk
Kallatre Kalvanin Maarpu.

Explanations
Holy Kural #1289
ಪ್ರೇಮವು ಹೂವಿಗಿಂತ ಮೃದು; ಅದನ್ನು ಅರಿತು ಅದರ ಫಲವನ್ನು ಅನುಭವಿಸುವವರು ಕೆಲವರು ಮಾತ್ರವೇ.

Tamil Transliteration
Malarinum Mellidhu Kaamam Silaradhan
Sevvi Thalaippatu Vaar.

Explanations
Holy Kural #1290
ನನ್ನ ಮನದರಿಸಿ ತನ್ನ ಕಣ್ಣೋಟದಲ್ಲಿ ಮುನಿಸನ್ನು ತೋರುತ್ತಲೇ ಗೊಂದಲಕ್ಕೀಡಾದಳು; ಅದರೂ ನನಗಿಂತ ಮುಂದಾಗಿ
ತಾನೇ ಆಲಿಂಗನಕ್ಕಾಗಿ ಅವಸರಪಟ್ಟುಳು.

Tamil Transliteration
Kannin Thuniththe Kalanginaal Pulludhal
Enninum Thaanvidhup Putru.

Explanations
🡱